Breaking News
Home / Breaking News / ಓಲಾ ಕ್ಯಾಬ್ ಚಾಲಕ ಈಗ ಸೇನಾಧಿಕಾರಿ; ಅದೆಂಥ ಛಲದಂಕ ಮಲ್ಲನಿವ!

ಓಲಾ ಕ್ಯಾಬ್ ಚಾಲಕ ಈಗ ಸೇನಾಧಿಕಾರಿ; ಅದೆಂಥ ಛಲದಂಕ ಮಲ್ಲನಿವ!

ಹೊಟ್ಟೆಪಾಡಿಗಾಗಿ ಓಲಾ ಕ್ಯಾಬ್ ನಲ್ಲಿಯೇ ತನ್ನ ವೃತ್ತಿಯನ್ನು ಕಂಡುಕಂಡಿದ್ದ ಯುವಕನೊಬ್ಬ ತನ್ನ ಕ್ಯಾಬ್ ನಲ್ಲಿ ಬರುತ್ತಿದ್ದ ಪ್ರಯಾಣಿಕ ಮತ್ತು ಮಾಜಿ ಯೋಧನ ಸಹಾಯ, ಮಾರ್ಗದರ್ಶನದಿಂದ ಈಗ ಭಾರತ ಸೇನೆಯಲ್ಲಿ ಸೇನಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಚೆನ್ನೈನ ಆಫೀಸರ್ಸ್‌ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿರುವ ಓಂ ಪೈಠಾಣೆ ಇದೇ ಮಾರ್ಚ್ 10ರಂದು ಸೇನಾ ಪಡೆಯ ಶಾರ್ಟ್‌ ಸರ್ವೀಸ್‌ ಕಮಿಷನ್‌ ಆಫೀಸರ್‌ ಆಗಿ ನೇಮಕಗೊಳ್ಳಲಿದ್ದಾರೆ.

 

ಪುಣೆಯ ತೊಂಡಾಲ ಎಂಬ ಹಳ್ಳಿಯ ಯುವಕನಾದ 25 ವರ್ಷದ ಓಂ ಪೈಠಾಣೆ ಅವರ ತಂದೆ ಉತ್ತಮ್ ಪಠಾಣ್ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಯಲ್ಲಿ ಪದವಿ ಪಡೆದಿರುವ ಓಂ ಪೈಠಾಣೆ “ನನ್ನ ಈ ಯಶಸ್ಸಿಗೆ ನನ್ನ ತಂದೆಯೇ ಸ್ಫೂರ್ತಿ… ನನಗೆ ಸೇನೆಗೆ ಆಯ್ಕೆ ಆಗಿರುವುದಕ್ಕೆ ತುಂಬಾ ಸಂತೋಷವಾಗಿದೆ” ಎಂದು ತಿಳಿಸಿದ್ದಾರೆ.

“ಇನ್ನು ನನ್ನ ಜೀವನ ಚಾಲಕನಿಂದ ಸೇನಾಧಿಕಾರಿಯಾಗಿ ತಿರುವು ಪಡೆಯಲು ಕರ್ನಲ್ ಭಕ್ಷಿ ಅವರೇ ಕಾರಣ. ನಾನು ಜೀವನ ನಿರ್ವಹಣೆಗೆ ಸ್ನೇಹಿತರೊಬ್ಬರ ಕಾರನ್ನು ‘ಓಲಾ’ದ ಮುಖಾಂತರ ಓಡಿಸುತ್ತಿದ್ದೆ. ಆಗ ಕರ್ನಲ್ ಭಕ್ಷಿ ಹಲವು ಬಾರಿ ನನ್ನ ಕ್ಯಾಬ್ ನಲ್ಲಿ ಪ್ರಯಾಣಿಸಿದ್ದರು. ಆಗೆಲ್ಲಾ ಅವರು ನನಗೆ ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸಸ್‌’ (ಸಿಡಿಎಸ್‌) ಪರೀಕ್ಷೆ ಬಗ್ಗೆ ಮಾಹಿತಿ ನೀಡುತ್ತಿದ್ದರು”

ನನ್ನ ಉತ್ಸಾಹ ನೋಡಿ ಅವರು ಕರ್ನಲ್ ಗಣೇಶ್ ಬಾಬು ಎಂಬುವವರಿಗೆ ಪರಿಚಯಿಸಿದರು. ಅವರು ‘ಸೇನಾ ಪಡೆ ಅಧಿಕಾರಿಗಳ ಪುನಶ್ಚೇತನ ಕಾರ್ಯಕ್ರಮ’ದ (ಎಎಫ್‌ಒಎಸ್‌ಒಪಿ) ಎಂಬುದರ ನಿರ್ದೇಶಕರಾಗಿದ್ದು, ಭಾರತೀಯ ಸೇನೆ ಸೇರಲು ಬಯಸುವ ಯುವಕರಿಗೆ ಹುರಿದುಂಬಿಸುವ ಕೆಲಸ ಮಾಡುತ್ತಿದ್ದರು. ಅಲ್ಲಿ ನಾನು ಪರೀಕ್ಷೆಗೆ ತಯಾರಿ, ದೈಹಿಕ ಬದಲಾವಣೆಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ಪಡೆದುಕೊಂಡೆ” ಎಂದು ಅವರು ತಮ್ಮ ಈ ಸಾಧನೆಗೆ ಕಾರಣಕರ್ತರಾದವರನ್ನು ನೆನಪಿಸಿಕೊಂಡರು.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money