Breaking News
Home / Breaking News / ಪಿಡಿಪಿ ಜೊತೆ ಮೈತ್ರಿ ಮುರಿಯಲು 600 ಸೈನಿಕರು ಬಲಿಯಾಗಬೇಕಾಯಿತೇ?; ಬಿಜೆಪಿ ವಿರುದ್ಧ ಹರಿಹಾಯ್ದ ಶಿವಸೇನೆ

ಪಿಡಿಪಿ ಜೊತೆ ಮೈತ್ರಿ ಮುರಿಯಲು 600 ಸೈನಿಕರು ಬಲಿಯಾಗಬೇಕಾಯಿತೇ?; ಬಿಜೆಪಿ ವಿರುದ್ಧ ಹರಿಹಾಯ್ದ ಶಿವಸೇನೆ

ಎನ್ ಡಿಎ ಮೈತ್ರಿಕೂಟದ ಭಾಗವಾಗಿದ್ದ ಶಿವಸೇನೆ ಈಗ ನಿರಂತರವಾಗಿ ಕಟುಶಬ್ಧಗಳಿಂದ ಮೋದಿ ಮತ್ತು ಬಿಜೆಪಿ ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತಾ ವ್ಯಂಗ ಮಾಡುತ್ತಾ ಮುಂದೆ ಬಿಜೆಪಿ ಜೊತೆ ಯಾವುದೇ ಮೈತ್ರಿ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ.

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮುರಿದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ‘ಅಪವಿತ್ರ ಮೈತ್ರಿ ಮಾಡಿಕೊಂಡ ಬಿಜೆಪಿಗೆ ಈ ಮೈತ್ರಿ ಅಪವಿತ್ರ ಎಂದು ಅರಿವಿಗೆ ಬರಲು 600 ಅಮಾಯಕ ಸೈನಿಕರು ಬಲಿಯಾಗಬೇಕಾಯಿತೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಸೇನೆಯ 52ನೇ ಸಂಸ್ಥಾಪನ ದಿನದಲ್ಲಿ ಮಾತಾಡಿದ ಅವರು ‘ರಂಜಾನ್ ಸಮಯದಲ್ಲಿ ಕದನ ವಿರಾಮ ಯಾಕೆ ಘೋಷಿಸಬೇಕು? ಪಾಕಿಸ್ತಾನವೇನು ದೀಪಾವಳಿ, ಗಣೇಶ ಹಬ್ಬಕ್ಕೆ ಕದನ ವಿರಾಮ ಘೋಷಿಸುತ್ತಾರೆಯೇ? ಎಂದು ಟೀಕಿಸಿದರು.

ಅಷ್ಟೇ ಅಲ್ಲದೆ, ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಅವರು ಪ್ರಧಾನಿಯವರ ವಿದೇಶ ಪ್ರವಾಸಗಳ ಬಗ್ಗೆಯೂ ವ್ಯಂಗವಾಡಿದ್ದಾರೆ. ‘ 2014ರಲ್ಲಿ ಸುಳ್ಳುಗಳ ಸರಮಾಲೆಯನ್ನೇ ಭರವಸೆಯಾಗಿ ನೀಡಿದ ಮೋದಿ, ಕೇವಲ ವಿದೇಶ ಪ್ರವಾಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನು ಮುಂದೆ ಅವರು ಅನ್ಯ ಗ್ರಹಗಳ ಪ್ರವಾಸವನ್ನೂ ಮಾಡಲಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money