Breaking News
Home / Breaking News / ಮುಸ್ಲಿಮರ ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಇರಬೇಕು: ಪ್ರಧಾನಿ ಮೋದಿ!

ಮುಸ್ಲಿಮರ ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಇರಬೇಕು: ಪ್ರಧಾನಿ ಮೋದಿ!

‘ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟವೇ ಹೊರತು ಯಾವುದೇ ಧರ್ಮದ ವಿರುದ್ಧವಲ್ಲ. ಅಷ್ಟೇ ಅಲ್ಲದೆ, ಯುವ ಜನತೆಯನ್ನು ದಾರಿ ತಪ್ಪಿಸುವ ಮನಸ್ಥಿತಿಯ ವಿರುದ್ಧ. ಹಾಗಾಗಿ ಮುಸ್ಲಿಮರು ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಹಿಡಿದುಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಹೈದರಾಬಾದ್ ಹೌಸ್ ನಲ್ಲಿ ನಡೆದ ‘ಇಸ್ಲಾಮಿಕ್ ಪರಂಪರೆ’ ಎಂಬ ವಿಷಯದ ಬಗ್ಗೆ ಮಾತಾಡುತ್ತಾ ‘ಪ್ರತಿಯೊಂದು ಧರ್ಮವೂ ಮಾನವೀಯ ಮೌಲ್ಯವನ್ನು ಸಾರುತ್ತದೆ. ಭಾರತದ ಭವ್ಯ ಪರಂಪರೆ ಮತ್ತು ಈ ಸಮಾಜದಲ್ಲಿರುವ ವೈವಿಧ್ಯತೆ ಭಯೋತ್ಪಾದನೆಯ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ’ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜೋರ್ಡಾನ್ ದೊರೆ ಅಬ್ದುಲ್ಲಾ II ಕೂಡ ಉಪಸ್ಥಿತರಿದ್ದರು.

‘ಭಾರತವು ವಿಶ್ವದ ಎಲ್ಲಾ ಪ್ರಮುಖ ಧರ್ಮಗಳ ತೊಟ್ಟಿಲು… ಭಾರತದ ಪ್ರಜಾಪ್ರಭುತ್ವವು ಭಾರತದ ಆದಿಕಾಲದ ಪರಂಪರೆಯ ಆಚರಣೆಯಾಗಿದೆ. ಯುವ ಇಸ್ಲಾಂ ಸಮುದಾಯವು ತಮ್ಮ ಧರ್ಮದಲ್ಲಿರುವ ಮಾನವೀಯ ಅಂಶಗಳೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತಾಡಿದ ಜೋರ್ಡಾನ್ ದೊರೆ ಅಬ್ದುಲ್ಲಾ II ‘ಜಾಗತಿಕ ಮಟ್ಟದಲ್ಲಿ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡುವ ದುಷ್ಟ ಶಕ್ತಿಗಳಿವೆ. ಹಲವಾರು ಸಂದರ್ಭದಲ್ಲಿ ಭಯೋತ್ಪಾದರ ವಿರುದ್ಧ ನಡೆಯಬೇಕಿದ್ದ ಹೋರಾಟಗಳು ಮುಸ್ಲಿಮರ ವಿರುದ್ಧ ನಡೆಯುತ್ತಿದೆ. ಇಂತ ದುಷ್ಟ ಶಕ್ತಿಗಳನ್ನು ದಮನ ಮಾಡಲು ಪಣತೊಡಬೇಕಾಗಿದೆ’ ಎಂದು ಹೇಳಿದರು.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money