Breaking News
Home / Breaking News / ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಆದೇಶ ನೀಡುತ್ತಾ, ಅವರಿಂದ ಕೆಲಸ ಮಾಡಿಸುತ್ತಾ ಇನ್ನೇನು ಸಂಜೆಯಾಗುತ್ತಿದೆ ಎನ್ನುವಾಗ ತಮ್ಮ ತಮ್ಮ ಗೂಡು ಸೇರಲು ಆತುರದಲ್ಲಿರುತ್ತಾರೆ.

ಆದರೆ ಇಲ್ಲೊಬ್ಬ ಶಾಸಕರು ಅದಕ್ಕೆ ಅಪವಾದ… ಇವರು ರಾತ್ರಿ ಊಟ ಮಾಡಲು, ನಿದ್ದೆ ಮಾಡಲು ಆಯ್ಕೆ ಮಾಡಿದ್ದು ಒಂದು ಸ್ಮಶಾನ. ಹೌದು ಅದೂ ಗಬ್ಬು ನಾರುತ್ತಿರುವ ಕೊಳ್ಕಿನ ಮಧ್ಯೆ, ಝುಯ್ಯಿ ಎಂದು ಮೈತುಂಬಾ ಕಚ್ಚುವ ಸೊಳ್ಳೆಗಳ ಕಡಿತದ ಜೊತೆಗೆ.

ಅವರೇ ಆಂಧ್ರಪ್ರದೇಶ ಪಲಕೋಲ್’ನ ತೆಲುಗುದೇಶಂ ಶಾಸಕ ನಿಮ್ಮಲರಾಮ ನಾಯ್ಡು. ತಮ್ಮ ಕ್ಷೇತ್ರದ ಸ್ಮಶಾನವೊಂದನ್ನು ಆಧುನೀಕರಣಗೊಳಿಸಬೇಕೆಂದು ಹೊರಟ ಅವರಿಗೆ ಎದುರಾಗಿದ್ದು, ಕಾರ್ಮಿಕರ ಸಮಸ್ಯೆ. ‘ಈ ಕಾರ್ಮಿಕರಿಗೆ ಸ್ಮಶಾನದಲ್ಲಿ ರಾತ್ರಿ ತಂಗಲು ಭಯ, ಹಾಗಾಗಿ ಅವರಿಗೆ ಆತ್ಮವಿಶ್ವಾಸ ಮೂಡಿಸುವುದಕ್ಕೋಸ್ಕರ ನಾನೇ ಇಲ್ಲಿ ಮಲಗಿ ಯಾವ ಅಪಾಯ, ಭಯವೂ ಇಲ್ಲ ಎಂದು ತೋರಿಸಿಕೊಡುತ್ತಿದ್ದೇನೆ. ಇನ್ನೂ 3 -4 ದಿನ ನನ್ನ ಊಟ, ನಿದ್ದೆ ಇಲ್ಲಿಯೇ’ ಎನ್ನುತ್ತಾರೆ ಶಾಸಕರು.

ಇಲ್ಲಿನ ಹಿಂದೂ ಸ್ಮಶಾನ ಕಳೆದ ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅದರ ಆಧುನೀಕರಣ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಅಲ್ಲಿ ಸಿಗುವ ಶವದ ಕಳೇಬರಹಗಳನ್ನು ನೋಡಿ ಕಾರ್ಮಿಕರು ಹೆದರಿಕೊಳ್ಳುತ್ತಿದ್ದಾರೆ. ಈಗ ಶಾಸಕರು ಮಾಡಿರುವ ಈ ಕೆಲಸ ಜನಮೆಚ್ಚುಗೆಗೆ ಪಾತ್ರವಾಗಿದೆ.

ಈಗಿದ್ದ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಸೂಕ್ತ ಸೌಲಭ್ಯಗಳಿಲ್ಲ… ಮಳೆಗಾಲದಲ್ಲಿ ಕೆಸರಿನಿಂದ ತುಂಬಿಕೊಂಡಿರುವ ಇಲ್ಲಿ ಶವಸಂಸ್ಕಾರದ ನಂತರ ಸ್ನಾನ ಮಾಡಲೂ ಸರಿಯಾದ ವ್ಯವಸ್ಥೆಯಿಲ್ಲ. ಕಸದ ರಾಶಿ ರಾಶಿ ಬಿದ್ದಿದ್ದು, ದುರ್ವಾಸನೆ ಬೀರುತ್ತಿದೆ’ ಎಂದೂ ಅವರು ಹೇಳಿದ್ದಾರೆ. ಕಾಮಗಾರಿಗಾಗಿ ಸರಕಾರ 3 ಕೋಟಿ ರೂಪಾಯಿ ಬಬಿಡುಗಡೆ ಮಾಡಿದೆ.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money