Breaking News
Home / Breaking News / 20 ವರ್ಷ ಸಿಎಂ ಆದ್ರೂ ಈ ‘ಮಾಣಿಕ್ಯ’ಗೆ ನೆಲೆಸಲು ಮನೆಯೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ; ಪಕ್ಷದ ಕಛೇರಿಗೆ ಸ್ಥಳಾಂತರ!

20 ವರ್ಷ ಸಿಎಂ ಆದ್ರೂ ಈ ‘ಮಾಣಿಕ್ಯ’ಗೆ ನೆಲೆಸಲು ಮನೆಯೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ; ಪಕ್ಷದ ಕಛೇರಿಗೆ ಸ್ಥಳಾಂತರ!

ತ್ರಿಪುರಾದ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತಮ್ಮ ಸರಕಾರಿ ಬಂಗಲೆಯಿಂದ ಹೊರಬರಲಿದ್ದು, ಅವರಿಗೆ ಉಳಿದುಕೊಳ್ಳಲು ಸ್ವಂತ ಮನೆಯೇ ಇಲ್ಲ. ಹಾಗಾಗಿ ತಮ್ಮ ಪತ್ನಿಯೊಂದಿಗೆ ಅವರು ಪಕ್ಷದ ಮುಖ್ಯ ಕಛೇರಿಗೆ ಸ್ಥಳಾಂತರಗೊಳ್ಳಲಿದ್ದಾರೆ.

ಭಾರತದಲ್ಲಿ ದೀರ್ಘಕಾಲ ಸಿಎಂ ಪಟ್ಟದಲ್ಲಿದ್ದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಈ ‘ಮಾಣಿಕ್ಯ’ ಕಡುಬಡವರು. ನೆಲೆಸಲು ಒಂದು ಮನೆಯೂ ಇರದ ಇವರ ಬಳಿ ಇರುವ ಹಣ ಕೇವಲ 2,410 ರೂ ಎಂದು ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಫಿದವಿಟ್ ನಲ್ಲಿ ತಿಳಿಸಿದ್ದರು. ಆದರೆ ಅಂಥ ಮುಖ್ಯಮಂತ್ರಿಯನ್ನೇ ತ್ರಿಪುರಾದ ಜನತೆ ಈ ಬಾರಿ ತಿರಸ್ಕರಿಸಿದ್ದರು. ಸಿಪಿಎಂ ಪಕ್ಷ ದಯನೀಯ ಸೋಲು ಕಂಡು ಬಿಜೆಪಿ ಅಧಿಕಾರಕ್ಕೇರಿತ್ತು.

ಹಾಗಾಗಿ ಮುಖ್ಯಮಂತ್ರಿ ಹುದ್ದೆ ಜೊತೆಗೆ ತಮ್ಮ ಮನೆಯನ್ನೂ ಅವರು ಕಳೆದುಕೊಂಡಿದ್ದಾರೆ. ಒಂದು ಕಡೆ ಕೈಯಲ್ಲಿ ಹಣವೂ ಇಲ್ಲ. ಹೀಗಾಗಿ ‘ಅವರೀಗ ಪಕ್ಷದ ಕಛೇರಿಯ ಒಂದು ಕೊಠಡಿಯಲ್ಲಿ ಪತ್ನಿ ಜೊತೆ ವಾಸ್ತವ್ಯ ಹೂಡಲಿದ್ದಾರೆ. ಒಂದೊಮ್ಮೆ ಹೊಸ ಸರ್ಕಾರ ಅವರಿಗೆ ನಿವಾಸ ನೀಡಿದರೆ ಅಲ್ಲಿಗೆ ತರಳಲೂಬಹುದು’ ಎಂದು ತ್ರಿಪುರಾ ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿಜನ್ ಧಾರೆ ತಿಳಿಸಿದ್ದಾರೆ.

ಮಾಣಿಕ್ ಸರ್ಕಾರ್ ದಂಪತಿಗೆ ಯಾವುದೇ ಮಕ್ಕಳಿಲ್ಲ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money