Breaking News
Home / Breaking News / ಬಾಳೆಹಣ್ಣಿನ ತಾಜಾತನ ಕಾಪಾಡಲು ಇಲ್ಲಿದೆ ನೋಡಿ ಕೆಲವು ಟಿಪ್ಸ್!

ಬಾಳೆಹಣ್ಣಿನ ತಾಜಾತನ ಕಾಪಾಡಲು ಇಲ್ಲಿದೆ ನೋಡಿ ಕೆಲವು ಟಿಪ್ಸ್!

ಬಾಳೆಹಣ್ಣು ಎಷ್ಟು ಹಣ್ಣಾಗುತ್ತದೋ ಅಷ್ಟು ಉತ್ತಮ ಎಂದು ಹೇಳುತ್ತೇವೆ. ಆದರೆ ಅದನ್ನು ಹಾಗೆ ಇಟ್ಟರೆ ಅದರ ಸಿಪ್ಪೆ ಮೇಲೆ ಕಪ್ಪು ಚುಕ್ಕೆಗಳು ಮೂಡಿ ಕೊಳೆತು ಹೋಗುವ ಸಾಧ್ಯೆತಗಳಿರುತ್ತವೆ.

ಹಾಗಾದರೆ ಬಾಳೆಹಣ್ಣಿನ ತಾಜಾತನ ಕಾಪಾಡುವುದು ಹೇಗೆ? ಬನ್ನಿ ತಿಳಿದುಕೊಳ್ಳೋಣ!

ನಿಮ್ಮ ಬಳಿ ಬಾಳೆಗೂನೆ ಅಥವಾ ಬಾಳೆಹಣ್ಣಿನ ಗೊಂಚಲು ಇದ್ದರೆ ಅದರ ಚಿಪ್ಪುಗಳಿಗೆ ದಪ್ಪ ದಾರ ಕಟ್ಟಿ ನೇತು ಹಾಕಿ. ಇದರಿಂದ ಬಾಳೆಹಣ್ಣು ಜಜ್ಜಿ ಹೋಗುವುದಿಲ್ಲ.

ನಿಮಗೆ ಬಾಳೆಹಣ್ಣು ಬೇಗ ಹಣ್ಣಾಗಬೇಕೆಂದಿದ್ದರೆ ಅದನ್ನು ಅಕ್ಕಿಡಬ್ಬದಲ್ಲಿ ಒಂದು ಸೇಬಿನ ಜೊತೆ ಇಡಿ.

ಬೇಸಿಗೆಯಲ್ಲಿ ಬಾಳೆಹಣ್ಣು ಒಣಗಿ ಕಪ್ಪಾಗಬಾರದೆಂದರೆ ಒದ್ದೆ ಬಟ್ಟೆ ಅಥವಾ ಪೇಪರ್ ನಲ್ಲಿ ಸುತ್ತಿಡಿ. ಇದರಿಂದ ಅದರ ತಾಜಾತನ ಹಾಗೆಯೇ ಉಳಿಯುತ್ತದೆ.

ಸಿಲ್ವರ್ ಫಾಯಿಲ್ ನಿಂದ ಬಾಳೆಹಣ್ಣಿನ ತೊಟ್ಟುಗಳನ್ನು ಸುತ್ತಿಟ್ಟರೂ ಬಾಳೆಹಣ್ಣು ತಾಜಾವಾಗಿರುತ್ತದೆ.

ಬಾಳೆಹಣ್ಣಿನ ರಸಾಯನಕ್ಕೆ ಸ್ವಲ್ಪ ತುಪ್ಪ ಹಾಕಿ ಕಲಸಿದರೆ ರಸಾಯನ ಕಪ್ಪಾಗುವುದಿಲ್ಲ.

ಬಾಳೆಹಣ್ಣು ತಂದ ತಕ್ಷಣ ಒಂದೊಂದಾಗಿ ಚಾಕುವಿನಿಂದ ಕತ್ತರಿಸಿ ಬೇರ್ಪಡಿಸಿ. ಇದು ಹಣ್ಣಾದ ಮೇಲೆ ಕತ್ತರಿಸಿದರೆ ಮಿಕ್ಕ ಬಾಳೆಹಣ್ಣುಗಳು ಸಡಿಲವಾಗಿ ತೊಟ್ಟು ಕೊಳೆಯುವ ಸಾಧ್ಯತೆಗಳಿರುತ್ತವೆ.

Check Also

ಧರ್ಮಶಾಸ್ತ್ರಾನುಸಾರ ನಿಮ್ಮ ಇಂದಿನ ದಿನ ಭವಿಷ್ಯ [ಅಕ್ಟೋಬರ್ 17 – ಬುಧವಾರ]

ಪಂಡಿತ್ ಸೋಮನಾಥ್ ಸ್ವಾಮಿ, ದೈವಜ್ಞ ಜ್ಯೋತಿಷ್ಯರು – ಆಧ್ಯಾತ್ಮಿಕ ಚಿಂತಕರು: ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *

Powered by keepvid themefull earn money