Breaking News
Home / Breaking News / ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ; ಇವತ್ತಿನ ರೇಟ್ ಎಷ್ಟು?

ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ; ಇವತ್ತಿನ ರೇಟ್ ಎಷ್ಟು?

ಕೇಂದ್ರ ಸರಕಾರ ಮಂಗಳವಾರ ಪ್ರತೀ ಲೀಟರ್ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ರೂ. 2ಕ್ಕೆ ಕಡಿತಗೊಳಿಸಿದ ಪರಿಣಾಮ ತೈಲಬೆಲೆಯಲ್ಲೂ ಇಳಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 2 ರೂ ಇಳಿಕೆಯಾಗಿದ್ಉ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ.

ಸುಂಕ ಕಡಿತದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 26 ಸಾವಿರ ಕೋಟಿ ರುಪಾಯಿ ಹೊರೆ ಬೀಳಲಿದೆ. ಉಳಿದಿರುವ ಅವಧಿಗೆ 13 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.

ಬೆಂಗಳೂರಿನಲ್ಲಿ ಇವತ್ತಿನ ದರ:

ಪೆಟ್ರೋಲ್  –  69.44 ರೂ ಲೀಟರಿಗೆ

ಡೀಸೆಲ್ –      56.96 ರೂ ಲೀಟರಿಗೆ

ಸದ್ಯ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಪ್ರತಿ ಲೀಟರ್ ಗೆ 21.48 ರುಪಾಯಿ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್ 17.33 ರುಪಾಯಿ ಅಬಕಾರಿ ಸುಂಕ ವಿಧಿಸುತ್ತಿದೆ.ಜುಲೈ 4ರಿಂದ ಈವರೆಗೂ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ರೂ.7.8ರಷ್ಟು ಏರಿಕೆಯಾಗಿದ್ದು, ಡೀಸೆಲ್‌ ರೂ.5.7ರಷ್ಟು ಹೆಚ್ಚಳ ಕಂಡಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರಗಳ ದೈನಂದಿನ ಪರಿಷ್ಕರಣೆಗೆ ಕೇಂದ್ರ ಸರಕಾರ ಮುಂದಾದ ನಂತರ ತೈಲಗಳ ಬೆಲೆ ಏರಿಕೆಯಾಗಿತ್ತು.

Check Also

ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಆದೇಶ ನೀಡುತ್ತಾ, ಅವರಿಂದ ಕೆಲಸ ಮಾಡಿಸುತ್ತಾ ಇನ್ನೇನು ಸಂಜೆಯಾಗುತ್ತಿದೆ ಎನ್ನುವಾಗ ತಮ್ಮ ತಮ್ಮ …

Leave a Reply

Your email address will not be published. Required fields are marked *

Powered by keepvid themefull earn money