Breaking News
Home / Breaking News / ವಿಶ್ವದಲ್ಲೇ ದುಬಾರಿ ಜಿಎಸ್​ಟಿ: ಭಾರತ ನಂ.1: ಯಾವ್ಯಾವ ದೇಶದಲ್ಲಿ ಎಷ್ಟೆಷ್ಟು ಗೊತ್ತಾ?

ವಿಶ್ವದಲ್ಲೇ ದುಬಾರಿ ಜಿಎಸ್​ಟಿ: ಭಾರತ ನಂ.1: ಯಾವ್ಯಾವ ದೇಶದಲ್ಲಿ ಎಷ್ಟೆಷ್ಟು ಗೊತ್ತಾ?

ಒಂದು ದೇಶ- ಒಂದೇ ತೆರಿಗೆ ಘೋಷಣೆಯೊಂದಿಗೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜಿಎಸ್ ಟಿ ಜಾರಿ ಮಾಡಿರುವ ಜಗತ್ತಿನ ನಾನಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತೀ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ.,

ಜಿಎಸ್ ಟಿ ಜಾರಿಯಿಂದ ದೇಶದ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ದೇಶದ ಅಭಿವೃದ್ದಿ ದರ ತೀವ್ರವಾಗಿ ಕುಸಿಯುತ್ತಿದೆ. ಜನ ಸಾಮಾನ್ಯರ ಮೇಲೆ ಜಿಎಸ್ ಟಿ ದೊಡ್ಡ ಹೊರೆಯಾಗಿದೆ. ಸಿನಿಮಾ ಕ್ಷೇತ್ರ, ರೈತರು, ಕರಕುಶಲ ಕರ್ಮಿಗಳು ಸೇರಿದಂತೆ ನಾನಾ ವರ್ಗದ ಜನರು ನಿಧಾನವಾಗಿ ತಮ್ಮ ಅಸಮಾಧಾನ ಹೊರಹಾಕತೊಡಗಿದ್ದಾರೆ.

ದೇಶದ ಶೇ. 60ರಷ್ಟು ಸರಕುಗಳ ಮೇಲೆ ಶೇ.18ರಷ್ಟು ಹಾಗೂ ಶೇ. 18ರಷ್ಟು ಸರಕುಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಪ್ಯಾಕ್ ಮಾಡದ ಕಾಳುಗಳು ಮತ್ತು ಹಾಲನ್ನು ತೆರಿಗೆ ಮುಕ್ತವಾಗಿರಿಸಲಾಗಿದೆ. ತಲೆಗೆ ಬಳಸುವ ಎಣ್ಣೆ, ಶಾಂಪೂಗಳು, ಸುಗಂಧ ದ್ರವ್ಯಗಳು ಮತ್ತು ಚಾಕಲೇಟ್​​ಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ವಿವಿಧ ದೇಶಗಳಲ್ಲಿನ ಜಿಎಸ್ ಟಿ ವಿವರ

ಫ್ರಾನ್ಸ್​​ನಲ್ಲಿ 4 ಹಂತದ ಜಿಎಸ್​ಟಿ ಜಾರಿಯಲ್ಲಿದೆ. 1954ರಲ್ಲಿ ಜಾರಿಗೆ ಬಂದಿರುವ ಈ ತೆರಿಗೆಯ ಪ್ರಕಾರ, ಶೇ. 2.1, ಶೇ. 5.5, ಶೇ.10 ಮತ್ತು ಶೇ. 20ರ ಹಂತ ಜಾರಿಯಲ್ಲಿದೆ.

ಇಂಗ್ಲೆಂಡ್​​ನಲ್ಲಿ ಒಂದೇ ಹಂತದ ತೆರಿಗೆ ಪದ್ಧತಿ ಜಾರಿಯಲ್ಲಿದ್ದು ಶೇ. 20ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ.

ಉಕ್ರೇನ್​​ನಲ್ಲಿ ಎರಡು ಹಂತದ ಜಿಎಸ್​​ಟಿ ಜಾರಿಯಲ್ಲಿದ್ದು, ಶೇ. 20 ಮತ್ತು ಶೇ. 7ರಷ್ಟು ತೆರಿಗೆಯನ್ನು ಸರಕು ಮತ್ತು ಸೇವೆಗಳ ಮೇಲೆ ಹೇರಲಾಗಿದೆ. ಇವುಗಳ ಪೈಕಿ ಬಹುತೇಕ ವಸ್ತುಗಳಿಗೆ ಶೇ. 20ರಷ್ಟು ಮತ್ತು ಔಷಧಿಗಳ ಮೇಲೆ ಶೇ. 7ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ.

ನ್ಯೂಜಿಲೆಂಡ್​​ನಲ್ಲಿ 1986ರಲ್ಲೇ ಜಿಎಸ್​ಟಿ ಜಾರಿಗೆ ಬಂದಿದೆ. ಆರಂಭದಲ್ಲಿ ಇಲ್ಲಿ ಕೇವಲ ಶೇ. 10ರಷ್ಟು ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ, 2010ರಿಂದ ಇದರ ಪ್ರಮಾಣವನ್ನು ಶೇ. 15ಕ್ಕೆ ಏರಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಜಿಎಸ್​​ಟಿಯನ್ನು 2000ದಲ್ಲಿ ಜಾರಿಗೆ ತರಲಾಗಿದ್ದು, ಶೇ. 10ರಷ್ಟು ದರ ನಿಗದಿಯಾಗಿದೆ.

ಅಮೆರಿಕ ದೇಶದ ವಿರುದ್ಧ ಸೆಡ್ಡು ಹೊಡೆದಿರುವ ಅತಿ ಚಿಕ್ಕ ರಾಷ್ಟ್ರ ವಿಯೆಟ್ನಾಂನಲ್ಲಿ ಮೂರು ಹಂತದ ಜಿಎಸ್​ಟಿ ಜಾರಿಯಲ್ಲಿದೆ. ಶೇ. 0, ಶೇ. 5 ಮತ್ತು ಶೇ. 10ರಷ್ಟು ತೆರಿಗೆಯನ್ನು ಇಲ್ಲಿ ಸಂಗ್ರಹಿಸಲಾಗುತ್ತಿದೆ.

ಸಿಂಗಾಪುರದಲ್ಲಿ 1994ರಲ್ಲಿ ಜಾರಿಗೆ ಬಂದ ಜಿಎಸ್​ಟಿ ಪ್ರಕಾರ ಶೇ. 3ರಷ್ಟು ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು. 2007ರಲ್ಲಿ ಇದರ ಪ್ರಮಾಣವನ್ನು ಶೇ. 7ರಷ್ಟಕ್ಕೆ ಏರಿಸಲಾಗಿದೆ.

2015ರಲ್ಲಿ ಜಿಎಸ್​ಟಿಯನ್ನು ಜಾರಿಗೆ ತಂದ ಮಲೇಷ್ಯಾ, ಕೇವಲ ಶೇ. 6ರಷ್ಟು ಜಿಎಸ್​ಟಿಯನ್ನು ಸಂಗ್ರಹಿಸುತ್ತಿದೆ.

ಕೆನಡಾ: ಕೆನಡಾದಲ್ಲಿ ಬಹುತೇಕ ಸರಕು ಮತ್ತು ಸೇವೆಗಳಿಗೆ ಶೇ. 5ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ. ಕೆಲವು ಪ್ರಾಂತ್ಯಗಳಲ್ಲಿ ಶೇ. 15ರಷ್ಟನ್ನು ಸಂಗ್ರಹಿಸಲಾಗುತ್ತಿದೆ.

ವಿಶ್ವದಲ್ಲಿ ವಿವಿಧ ದೇಶಗಳು ವಿಧಿಸುತ್ತಿರುವ ಜಿಎಸ್ಟಿ ಪ್ರಮಾಣ

ದೇಶ                 ದರ (ಶೇ.)

ಆಸ್ಟ್ರೇಲಿಯಾ     10
ಬಹರೇನ್         05
ಕೆನಡಾ            15
ಚೀನಾ             17
ಜಪಾನ್           08
ಕೊರಿಯಾ        10
ಕುವೈತ್           05
ಮಲೇಷ್ಯಾ        06
ಮಾರಿಷಸ್       15
ಮೆಕ್ಸಿಕೋ         16
ಮ್ಯಾನ್ಯರ್        03
ನ್ಯೂಜಿಲೆಂಡ್     15
ಪಿಲಿಪ್ಪೈನ್ಸ್       12
ರಷ್ಯಾ              18
ಸಿಂಗಾಪುರ       07
ದಕ್ಷಿಣ ಆಫ್ರಿಕಾ   14
ಥಾಯ್ಲೆಂಡ್       07

ಯುಎಇ          05
ಅಮೆರಿಕ         7.5
ವಿಯೆಟ್ನಾಂ      10
ಜಿಂಬಾಬ್ವೆ       15
ಭಾರತ           28

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money