Breaking News
Home / Breaking News / ATM ನಿಯಮಗಳಲ್ಲಿ ಸಡಿಲಿಕೆ ತಂದ SBI ; ಇದಕ್ಕಿಂತ ಹೆಚ್ಚು ಬಾರಿ ATM ಬಳಸಿದರೆ ಮಾತ್ರ ದಂಡ!

ATM ನಿಯಮಗಳಲ್ಲಿ ಸಡಿಲಿಕೆ ತಂದ SBI ; ಇದಕ್ಕಿಂತ ಹೆಚ್ಚು ಬಾರಿ ATM ಬಳಸಿದರೆ ಮಾತ್ರ ದಂಡ!

ಭಾರತದ ಅತೀ ದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಎಸ್ ಬಿಐ ಎಟಿಎಮ್ ಬಳಕೆದಾರರಿಗೆ ತನ್ನ ನಿಯಮದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದಿದೆ.

ಉಳಿತಾಯ ಖಾತೆ ಹೊಂದಿರುವ ಗ್ರಾಹಕರು:

  • ಮೆಟ್ರೋ ನಗರಗಳಲ್ಲಿ – ತಿಂಗಳಲ್ಲಿ 8 ಬಾರಿ  ATM ಬಳಸಬಹುದು. ಅದರಲ್ಲಿ 5 ಬಾರಿ ಎಸ್ ಬಿಐ ATMಗಳಲ್ಲಿ ಮತ್ತು ಇನ್ನು 3 ಬಾರಿ ಇತರ ಬ್ಯಾಂಕ್ ಗಳ ATMಗಳಲ್ಲಿ.
  •  ಇತರೆಡೆ : ತಿಂಗಳಲ್ಲಿ 10 ಬಾರಿ  ATM ಬಳಸಬಹುದು. ಅದರಲ್ಲಿ 5 ಬಾರಿ ಎಸ್ ಬಿಐ ATMಗಳಲ್ಲಿ ಮತ್ತು ಇನ್ನು 5 ಬಾರಿ ಇತರ ಬ್ಯಾಂಕ್ ಗಳ ATMಗಳಲ್ಲಿ.

ಇವುಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಬಾರಿ ATM ಬಳಕೆಯಾದರೆ, ಒಂದು ಬಾರಿಯ ವಹಿವಾಟಿಗೆ ರೂ. 20 + 18% GST ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕ ನಿಮ್ಮ ಬ್ಯಾಂಕ್ ನಲ್ಲಿ ಹಣವಿಲ್ಲದೆ ವಹಿವಾಟು ತಿರಸ್ಕೃತಗೊಂಡರೂ ಅನ್ವಯವಾಗುತ್ತದೆ.

ಬೇಸಿಕ್ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು:

ಈ ಖಾತೆ ಹೊಂದಿರುವವರು ತಿಂಗಳಿಗೆ ಕೇವಲ 4 ಬಾರಿ ಮಾತ್ರ ATM ವ್ಯವಹಾರ ಮಾಡಬಹುದು. ಇದಕ್ಕಿಂತ ಅಧಿಕ ಬಳಕೆ ಮಾಡಿದರೆ, ಒಂದು ಬಾರಿಯ ವಹಿವಾಟಿಗೆ ಈ ಕೆಳಗಿನಂತೆ ಶುಲ್ಕ ವಿಧಿಸಲಾಗುತ್ತದೆ.

ಎಸ್ ಬಿಐ ಬ್ರಾಂಚ್ ಗಳಲ್ಲಿ –  ರೂ. 50 + 18% GST

ಇತರ ಬ್ಯಾಂಕ್ ATMಗಳಲ್ಲಿ –  ರೂ. 20 + 18% GST

ಎಸ್ ಬಿಐ ATMಗಳಲ್ಲಿ       – ರೂ. 10 + 18% GST

Check Also

ಕಾರ್ಕಳ: ಕುಡಿಯುವವರಿಗೆ ಇಲ್ಲಿ ಫ್ರೀ ಪಿಕ್ ಅಪ್ ಆ್ಯಂಡ್ ಡ್ರಾಪ್; ಈ ಬಾರ್ ಗೆ ಬರುವವರಿಗೆ ಉಚಿತ ರಿಕ್ಷಾ ಪ್ರಯಾಣ!

ನಾವು ಎಲ್ಲಾದರೂ ಹೊಸ ಕೆಲಸಕ್ಕೆ ಸೇರಿದರೆ, ಅಲ್ಲಿಗೆ ಹೋಗಲು ವಾಹನ ವ್ಯವಸ್ಥೆ ಬಗ್ಗೆ ವಿಚಾರಿಸುತ್ತೇವೆ. ಫ್ರೀ ಪಿಕ್ ಅಪ್ ಆ್ಯಂಡ್ …

Leave a Reply

Your email address will not be published. Required fields are marked *

Powered by keepvid themefull earn money