Breaking News
Home / Breaking News / SBI ಠೇವಣಿದಾರರಿಗೆ ಒಂದು ಸಿಹಿಸಿಹಿ ಸುದ್ದಿ; ಹೆಚ್ಚಾಯಿತು ನಿಮ್ಮ ಹಣದ ಮೇಲಿನ ಬಡ್ಡಿದರ!

SBI ಠೇವಣಿದಾರರಿಗೆ ಒಂದು ಸಿಹಿಸಿಹಿ ಸುದ್ದಿ; ಹೆಚ್ಚಾಯಿತು ನಿಮ್ಮ ಹಣದ ಮೇಲಿನ ಬಡ್ಡಿದರ!

ಸರಕಾರಿ ಸ್ವಾಮ್ಯದ ಎಸ್ ಬಿಐ ಇತ್ತೀಚೆಗೆ ಗ್ರಾಹಕರಿಗೆ ಹೊರೆ ಹೊರಿಸಿಯೇ ಸುದ್ದಿಯಲ್ಲಿದೆ. ಬಹಳ ಕಾಲದ ನಂತರ ಇದೀಗ ಇಲ್ಲಿ ಡೆಪಾಸಿಟ್ ಮಾಡಿರುವವರಿಗೆ ಒಂದು ಸಿಹಿಸುದ್ದಿ ಕೊಟ್ಟಿದೆ.

ಹೌದು! ನಿಮ್ಮ ಠೇವಣಿ ಮೇಲಿನ ಬಡ್ಡಿಯ ದರವನ್ನು ಸ್ವಲ್ಪ ಹೆಚ್ಚು ಮಾಡಿದೆಯಂತೆ. ಠೇವಣಿ ಮೇಲಿನ ತನ್ನ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಿರುವ ಎಸ್ ಬಿಐ ನೀವು ಠೇವಣಿ ಮಾಡಿರುವ ಮೊತ್ತ ಮತ್ತು ಅವಧಿಯನ್ನು ಪರಿಗಣಿಸಿ ಅದರ ಮೇಲಿನ ಬಡ್ಡಿದರವನ್ನು 15 ಪಾಯಿಂಟ್ ಗಳಿಂದ ದಿಂದ 75 ಪಾಯಿಂಟ್ ಗಳಿಗೆ ಏರಿಸಿದೆ.

ಟ್ವಿಟರ್ ನಲ್ಲಿ ಈ ಮಾಹಿತಿ ಬಹಿರಂಗಪಡಿಸಿರುವ ಎಸ್ ಬಿಐ ‘ ಒಂದು ಕೋಟಿಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರವನ್ನು 28 ಫೆಬ್ರವರಿ 2018 ರಿಂದ ಅನ್ವಯವಾಗಿವಂತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ಇದರಂತೆ ಒಂದು ಕೋಟಿಗಿಂತ ಕಡಿಮೆ ಠೇವಣಿ ಹೊಂದಿರುವ ಗ್ರಾಹಕರ ಠೇವಣಿ ಮೇಲಿನ ಬಡ್ಡಿದರ 6.25% ನಿಂದ 6.40% ಗೆ ಏರಿಸಲಾಗಿದೆ. ಆದರೆ ನಿಮ್ಮ ಠೇವಣಿಯ ಅವಧಿಯನ್ನೂ ಅವಲಂಬಿಸಿದೆ.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money