Breaking News
Home / Breaking News / ವೈರಲ್ ಆದ ‘ಡಾನ್ಸಿಂಗ್ ಆಂಟಿ’ ವಿಡಿಯೋ; ‘ಡಾನ್ಸಿಂಗ್ ಅಂಕಲ್’ ಬಿಡಿ, ಇವ್ರನ್ನು ನೋಡಿ!

ವೈರಲ್ ಆದ ‘ಡಾನ್ಸಿಂಗ್ ಆಂಟಿ’ ವಿಡಿಯೋ; ‘ಡಾನ್ಸಿಂಗ್ ಅಂಕಲ್’ ಬಿಡಿ, ಇವ್ರನ್ನು ನೋಡಿ!

ಇತ್ತೀಚೆಗೆ ಸಂಬಂಧಿಕರ ಮದುವೆಯೊಂದರಲ್ಲಿ ಯುವಕರನ್ನು ನಾಚಿಸುವಂತೆ ತಮ್ಮ ವಯಸ್ಸಿಗೆ ಸೆಡ್ಡು ಹೊಡೆಯುವಂತೆ ಹೆಜ್ಜೆ ಹಾಕಿದ್ದ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಅವರು ಅವರಿಗೇ ಅರಿವಿಲ್ಲದಂತೆ ಇಂಟರ್ ನೆಟ್ ನಲ್ಲಿ ಸಂಚಲನವನ್ನೇ ಉಂಟುಮಾಡಿದ್ದರು. ಬಾಲಿವುಡ್  ನಟ ಗೋವಿಂದ ಅವರ ಸ್ಟೆಪ್ಸ್’ಗೆ ಹೆಜ್ಜೆ ಹಾಕುವ ಮೂಲಕ ರಾತ್ರೋರಾತ್ರಿ ದೇಶದೆಲ್ಲಡೆ ಫೇಮಸ್ ಆಗಿ ಬಿಟ್ಟಿದ್ದರು.

ಆದ್ರೆ ಈಗ ನಾವು ಯಾರ್ಗೂ ಕಮ್ಮಿ ಇಲ್ಲ ಅಂತ ‘ಡಾನ್ಸಿಂಗ್ ಅಂಕಲ್’ನ ಮೀರಿಸುವಂತೆ ಸೀರೆಯಲ್ಲಿ ಬಾಲಿವುಡ್ ಪಾಪ್ ಸಿಂಗರ್ ಯೋಯೋ ಹನಿಸಿಂಗ್ ಹಾಡಿಗೆ ಹೆಜ್ಜೆ ಹಾಕಿರುವ ಈ ಮಹಿಳೆ ಈಗ ‘ಡಾನ್ಸಿಂಗ್ ಆಂಟಿ’ ಎಂದು ಹೆಸರು ಪಡಕೊಂಡಿದ್ದಾರೆ.

ಹನಿಸಿಂಗ್ ಅವರ ‘ಪಾರ್ಟಿ ಆಲ್ ನೈಟ್’ ಹಾಡಿಗೆ ಕುಣಿದಿರುವ ಅವರ ವಿಡೀಯೋವನ್ನು ಗುಜರಾತ್ ವೈರಲ್ ಎನ್ನುವ ಫೇಸ್ ಬುಕ್ ಪುಟ ಅಪಲೋಡ್ ಮಾಡಿದೆ.

Hehehehe. 😬😬😬😬

Posted by VIRAL #ગુજરાત on Wednesday, 30 May 2018

ಈಗಾಗಲೇ ಇದನ್ನು 25 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿ ಒಳ್ಳೆ ಕಮೆಂಟ್ಸ್ ಕೊಡುತ್ತಿದ್ದಾರೆ. ‘ಸೀರೆಯಲ್ಲಿ ಕೂಡ ಪಾಪ್ ಸಾಂಗ್ ಗೆ ಡಾನ್ಸ್ ಮಾಡ್ಬಹುದು ಅಂತ ಈ ಆಂಟಿ ತೋಸಿಕೊಟ್ಟಿದ್ದಾರೆ’ ಎಂದು ನೆಟ್ಟಿಗರು ಬೆನ್ನು ತಟ್ಟುತ್ತಿದ್ದಾರೆ. ನೋಡೋಣ ಇವರು ಎಷ್ಟು ಪ್ರಸಿದ್ಧರಾಗುತ್ತಾರೆಂದು….

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money