Breaking News
Home / Breaking News / ಗಾಂಧಿ – ನೆಹರೂ ಮುಂತಾದ ‘ಕಸ’ವನ್ನು ಜನರ ತಲೆಗೆ ತುಂಬಲಾಗಿದೆ; ಸಂಸದನ ವಿವಾದಾತ್ಮಕ ಹೇಳಿಕೆ!

ಗಾಂಧಿ – ನೆಹರೂ ಮುಂತಾದ ‘ಕಸ’ವನ್ನು ಜನರ ತಲೆಗೆ ತುಂಬಲಾಗಿದೆ; ಸಂಸದನ ವಿವಾದಾತ್ಮಕ ಹೇಳಿಕೆ!

ಮಹಾತ್ಮ ಗಾಂಧಿ ಮತ್ತು ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಕಸಕ್ಕೆ ಹೋಲಿಸಿ ಬಿಜೆಪಿ ಸಂಸದರೊಬ್ಬರು ನೀಡಿದ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

‘ಕಾಂಗ್ರೆಸ್ ಪಕ್ಷ ಗಾಂಧಿ ಮತ್ತು ನೆಹರೂ ಅಂತಹ ಕಸವನ್ನು ಜನರ ತಲೆಗೆ ತುಂಬುತ್ತಾ ಬಂದಿದೆ, ಹಾಗಾಗಿ ಈಗ ಹೊಸ ಸಿದ್ಧಾಂತಗಳಿಗೆ ಜಾಗವೇ ಇಲ್ಲ’ ಎಂದು ಆಸ್ಸಾಂ ರಾಜ್ಯದ ಜೋರ್ಹತ್ ಕ್ಷೇತ್ರದ ಬಿಜೆಪಿ ಸಂಸದ ಕಾಮಾಕ್ಯ ಪ್ರಸಾದ್ ಟಸ್ಸಾ ಪೂರ್ವ ಅಸ್ಸಾಂನ ಚರಾಯಾಡೋ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರನ್ನು ಕಸಕ್ಕೆ ಹೋಲಿಕೆ ಮಾಡಿರುವುದು ಕ್ಷಮಿಸಲಾರದ ಅಪರಾಧ ಎಂದು ಎಪಿಸಿಸಿ ಅಧ್ಯಕ್ಷ ರಿಪುನ್ ಬೋರಾ ಕಿಡಿಕಾರಿದ್ದಾರೆ. ಹೀಗೆ ಮಾತಾಡಿರುವ ಸಂಸದನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಅಸ್ಸಾಂ ಪ್ರದೇಶ ಕಾಂಗ್ರೆಸ್ ಕಮಿಟಿ ಆಗ್ರಹಿಸಿದೆ.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money