Breaking News
Home / Breaking News / ಕ್ರಿಕೆಟ್ ಮೈದಾನದಲ್ಲೊಂದು ಅಪರೂಪದ ಘಟನೆ; ತಂದೆಯ ಕೆಟ್ಟ ನೇರ ಶಾಟ್ ಗೆ ರನೌಟ್ ಆದ ಮಗ!

ಕ್ರಿಕೆಟ್ ಮೈದಾನದಲ್ಲೊಂದು ಅಪರೂಪದ ಘಟನೆ; ತಂದೆಯ ಕೆಟ್ಟ ನೇರ ಶಾಟ್ ಗೆ ರನೌಟ್ ಆದ ಮಗ!

ಸಾಮಾನ್ಯವಾಗಿ ಕ್ರಿಕೆಟ್ ಆಟದಲ್ಲಿ ದೀರ್ಘಕಾಲದವರೆಗೆ ಆಡುವ ಆಟಗಾರರು ಕಾಣಸಿಗುವುದು ಬಹಳ ಕಡಿಮೆ. ತಾವು 40 ದಾಟುವುದರೊಳಗೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಹೊಸಬರಿಗೆ ದಾರಿ ಮಾಡಿಕೊಡುವವರೇ ಹೆಚ್ಚು. ಹಾಗಾಗಿ ಆಧುನಿಕ ಕ್ರಿಕೆಟ್ ನಲ್ಲಿ ತಂದೆ – ಮಗ ಒಂದೇ ಪಂದ್ಯದಲ್ಲಿ ಆಟವಾಡುವ ನಿದರ್ಶನಗಳು ಇಲ್ಲವೆಂದೇ ಹೇಳಬಹುದು.

ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ನ ದಂತಕಥೆ ಎಂದೇ ಕರೆಯಲ್ಪಡುವ ಶಿವನರೇನ್ ಚಂದ್ರಪಾಲ್ ತಮ್ಮ ಮಗನೊಂದಿಗೆ ಒಂದೇ ಮೈದಾನದಲ್ಲಿ ಆಡುವ ಅವಕಾಶ ಪಡೆದಿದ್ದು ಅವರ ಅದೃಷ್ಟವೆಂದೇ ಹೇಳಬಹುದು. ಅದರಲ್ಲೂ ಮಗ ಟಾಜೆನರೇನ್ ಚಂದ್ರಪಾಲ್ ಅವರನ್ನು ಕೆಟ್ಟ ರನೌಟ್ ಮಾಡಿ ಪೆವಿಲಿಯನ್ ಗೆ ಕಳುಹಿಸುವುದಂತೂ ಅಪರೂಪದಲ್ಲೇ ಅಪರೂಪ.

ಈ ಘಟನೆ ನಡೆದಿದ್ದು ವೆಸ್ಟ್ ಇಂಡೀಸ್ ನ ಸೂಪರ್ 50 ಕಪ್ ದೇಶೀಯ ಟೂರ್ನಿಯಲ್ಲಿ. ಕೊಲಿಡ್ಜ್ ನಲ್ಲಿ ನಡೆದ ಈ ಪಂದ್ಯದಲ್ಲಿ ಶಿವನರೇನ್ ಮತ್ತು ಟಾಜೆನರೇನ್ ಅವರು ಗಯಾನಾ ಜಾಗ್ವಾರ್ ತಂಡದ ಪರ ಆಡುತ್ತಿದ್ದರು. ಎದುರಾಳಿ ವಿಂಡ್ವರ್ಡ್ ಐಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್ ನಲ್ಲಿ ಅಪ್ಪ – ಮಗ ಇಬ್ಬರೂ ಭರ್ಜರಿ ಜೊತೆಯಾಟ ಮುಂದುವರಿಸಿದ್ದರು.

ಆಗ 5ನೇ ಓವರ್ ನಲ್ಲಿ ವಿಂಡ್ವರ್ಡ್ ಬೌಲರ್ ರ್ಯಾನ್ ಜಾನ್ ಅವರ ಎಸೆತವನ್ನು ಶಿವನರೇನ್ ನೇರವಾಗಿ ಬೌಲರ್ ನತ್ತ ಅಟ್ಟಿದರು, ಆಗ ಚೆಂಡು ಬೌಲರ್ ಬಲ ಕಾಳಿಗೆ ಬಡಿದು ನೇರವಾಗಿ ಸ್ಟಂಪ್ ಗೆ ಬಡಿಯಿತು. ಇದರಿಂದಾಗಿ ಅಲ್ಲಿದ್ದ ಟಾಜೆನರೇನ್ ರನೌಟ್ ಆದರು. ಅಪ್ಪನ ಕೆಟ್ಟ ಶಾಟ್ ಗೆ ಮಗ ಬಲಿಯಾಗಬೇಕಾಯಿತು.

ಅಪ್ಪ ಶಿವನರೇನ್ ಚಂದ್ರಪಾಲ್ ಅವರ ವಯಸ್ಸು ಈಗ 43 ಆದರೆ ಅವರ ಮಗ ಟಾಜೆನರೇನ್ ಚಂದ್ರಪಾಲ್ ಅವರಿಗೆ 21 ವರ್ಷ ವಯಸ್ಸು.

2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಶಿವನರೇನ್ ಒಟ್ಟು 164 ಟೆಸ್ಟ್, 268 ಏಕದಿನ ಮತ್ತು 22 ಟ್ವೆಂಟಿ-20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ನಲ್ಲಿ 30 ಶತಕಗಳನ್ನೊಳಗೊಂಡ 11,867 ರನ್ ಬಾರಿಸಿರುವ ಇವರು ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ದಾಖಲಿಸಿರುವ ವಿಶ್ವದ 8ನೇ ಬ್ಯಾಟ್ಸ್ಮ್ಯಾನ್. ಇನ್ನು ಏಕದಿನ ಕ್ರಿಕೆಟ್ ನಲ್ಲಿ 11 ಶತಕ ಸೇರಿದಂತೆ ಒಟ್ಟು 8,778 ರನ್ ಗಳಿಸಿದ್ದಾರೆ.

ಇನ್ನು ಮಗ ಟಾಜೆನರೇನ್ ಚಂದ್ರಪಾಲ್ 2013 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪ್ರವೇಶಿಸಿದ್ದರೂ ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶ ಪಡೆದಿಲ್ಲ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money