Breaking News
Home / Breaking News / ಬ್ಯಾಟ್ಸ್’ಮ್ಯಾನ್ ಔಟ್ ಆದಾಗ ಕೆಟ್ಟದಾಗಿ ಅವಹೇಳನ ಮಾಡಿದ ಅಫ್ರೀದಿ ವಿಡಿಯೋ ವೈರಲ್; ಟ್ವಿಟರ್’ನಲ್ಲಿ ಕ್ಷಮೆಯಾಚನೆ!

ಬ್ಯಾಟ್ಸ್’ಮ್ಯಾನ್ ಔಟ್ ಆದಾಗ ಕೆಟ್ಟದಾಗಿ ಅವಹೇಳನ ಮಾಡಿದ ಅಫ್ರೀದಿ ವಿಡಿಯೋ ವೈರಲ್; ಟ್ವಿಟರ್’ನಲ್ಲಿ ಕ್ಷಮೆಯಾಚನೆ!

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಮುಖ್ಯವಾಘಿ ಗಮನ ಸೆಳೆಯುತ್ತಿರುವವರು ಕರಾಚಿ ಕಿಂಗ್ಸ್ ತಂಡದ ನಾಯಕ ಪಾಕ್ ಹಿರಿಯ ಕ್ರಿಕೆಟಿಗ ಶಾಹೀದ್ ಅಫ್ರೀದಿ. ಲೀಗ್ ನಲ್ಲಿ ಬ್ಯಾಟಿಂಗ್ ನಲ್ಲಿ ಅಂತಹ ಉತ್ತಮ ಪ್ರದರ್ಶನ ನೀಡದಿದ್ದರೂ ಅವರ ಬೌಲಿಂಗ್ ಶೈಲಿಯಿಂದ ತಂಡ ಹಲವು ಬಾರಿ ಗೆಲುವು ಸಾಧಿಸಲು ಸಾಧ್ಯವಾಗಿದೆ.

ಮೊನ್ನೆ ನಡೆದ ಕರಾಚಿ ಕಿಂಗ್ಸ್ ತಂಡವು ಮುಲ್ತಾನ್ ಸುಲ್ತಾನ್ ತಂಡದ ವಿರುದ್ಧ 63 ರನ್ ಗಳ ಜಯ ದಾಖಲಿಸಿತು. ಇಲ್ಲಿ 3 ವಿಕೆಟ್ ಗೆ 18 ರನ್ ನೀಡಿದ ಅಪ್ರೀದಿ ಕರಾಚಿ ಕಿಂಗ್ಸ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಸಂದರ್ಭದಲ್ಲಿ ಮೊದಲು ವೆಸ್ಟ್ ಇಂಡೀಸ್ ನ ಕೀರಾನ್ ಪೊಲ್ಲಾರ್ಡ್ ಅವರನ್ನು ಅದ್ಭುತ ರೀತಿಯಲ್ಲಿ ಔಟ್ ಮಾಡಿದ ಅಫ್ರೀದಿ ನಂತರ ಬಂದ ಸೈಫ್ ಬಾದರ್ ಅವರ ವಿಕೆಟ್ ಕೂಡ ಕಿತ್ತು ಸಂಭ್ರಮಿಸಿದರು. ಆದರೆ ಈ ಸಂಭ್ರಮದ ಭರದಲ್ಲಿ ಅವರಲ್ಲಿ 19 ವರ್ಷದ ಯುವ ಆಟಗಾರನನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಪೆವಿಲಿಯನ್ ಗೆ ಮರಳುವಂತೆ ಹೇಳುವ ವಿಡಿಯೋ ಈಗ ವೈರಲ್ ಆಗಿದೆ.

19 ವರ್ಷದ ಪಾಕಿಸ್ತಾನಿ ಬ್ಯಾಟ್ಸ್ ಮ್ಯಾನ್  ಸೈಫ್ ಬಾದರ್ ಅವರನ್ನು ಔಟ್ ಮಾಡಿದ ಕೂಡಲೇ ‘ಹೋಗೋ, ಅಲ್ಲಿದೆ ನೋಡು ಡ್ರೆಸ್ಸಿಂಗ್ ರೂಮ್’ ಎಂದು ಬೆರಳು ಮಾಡಿ ತೋರಿ ಆತನನ್ನು ಅಲ್ಲಿಂದ ಹೊರಟು ಹೋಗುವಂತೆ ಸೂಚಿಸಿದ್ದಾರೆ. ಇದರಂತೆ ಬೇಸರಗೊಂಡಂತೆ ಕಂಡುಬಂದ ಬಾದರ್ ಅಫ್ರೀದಿಯನ್ನು ಕ್ಷಣಕಾಲ ನೋಡಿ ನಂತರ ತಲೆ ತಗ್ಗಿಸಿಕೊಂಡು ಅಲ್ಲಿಂದ ತೆರಳಿದರು.

ಅಫ್ರೀದಿ ಪಾಕ್ ಕ್ರಿಕೆಟ್ ಸರ್ಕಲ್ ನಲ್ಲಿ ಅತ್ಯಂತ ಗೌರವಿಸಲ್ಪಡುವ ಹಿರಿಯ ಕ್ರಿಕೆಟಿಗ. ಬಾದರ್ ಕೂಡ ಅವರ ಆರಾಧಕರಲ್ಲಿ ಒಬ್ಬ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ಹಂಚಿಕೆಯಾಗುತ್ತಿದ್ದಂತೆ ಅದನ್ನು ತನ್ನ ಟ್ವಿಟರ್ ಅಕೌಂಟ್ ನಲ್ಲಿ ಷೇರ್ ಮಾಡಿಕೊಂಡ ಬಾದರ್ ‘ಇಷ್ಟೆಲ್ಲಾ ಆದರೂ ನಿಮ್ಮನ್ನು ನಾನು ಇಷ್ಟಪಡುತ್ತೇನೆ, ನೀವು ಲೆಜೆಂಡ್ ‘ ಎಂದು ಅಫ್ರೀದಿಯನ್ನು ಉದ್ದೇಶಿಸಿ ಕಮೆಂಟ್ ಮಾಡಿದ್ದಾರೆ.

ಆಗ ಎಚ್ಚೆತ್ತುಕೊಂಡಂತೆ ಕಂಡ ಅಫ್ರೀದಿ ತನ್ನ ತಪ್ಪಿಗೆ ಟ್ವಿಟರ್ ನಲ್ಲೇ ಕ್ಷಮೆಯಾಚಿಸಿ, ‘ನನ್ನ ವರ್ತನೆಗೆ ಕ್ಷಮೆ ಇರಲಿ. ಅದು ಆಟದ ಆ ಕ್ಷಣದಲ್ಲಿ ನಡೆದುಹೋಯಿತು. ನಾನು ನನ್ನ ಯುವಕರ ಬೆಂಬಲಕ್ಕೆ ಯಾವಾಗಲೂ ಇರುತ್ತೇನೆ. ಒಳ್ಳೆಯದಾಗಲಿ’ ಎಂದಿದ್ದಾರೆ.

Check Also

ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಆದೇಶ ನೀಡುತ್ತಾ, ಅವರಿಂದ ಕೆಲಸ ಮಾಡಿಸುತ್ತಾ ಇನ್ನೇನು ಸಂಜೆಯಾಗುತ್ತಿದೆ ಎನ್ನುವಾಗ ತಮ್ಮ ತಮ್ಮ …

Leave a Reply

Your email address will not be published. Required fields are marked *

Powered by keepvid themefull earn money