Breaking News
Home / Breaking News / ಮಿಂಚಿದ ಪಾಂಡೆ, ಕಾರ್ತಿಕ್; ಶ್ರೀಲಂಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಜಯ!

ಮಿಂಚಿದ ಪಾಂಡೆ, ಕಾರ್ತಿಕ್; ಶ್ರೀಲಂಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಜಯ!

ಕೊಲೊಂಬೋದ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ನಡೆದ ನಿಧಹಸ್ ತ್ರಿಕೋನ ಟ್ವೆಂಟಿ-20 ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವ ವಿರುದ್ಧ ಭಾರತ ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಭಾರತದ ಪರ ಅದ್ಭುತ ಬ್ಯಾಟಿಂಗ್ ನಡೆಸಿದ ಮನಿಷ್ ಪಾಂಡೆ(42) ಮತ್ತು ದಿನೇಶ್ ಕಾರ್ತಿಕ್(39) ಅವರ ನೆರವಿನಿಂದ ಟೀಂ ಇಂಡಿಯಾ 17.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ವಿಜಯಪತಾಕೆ ಹಾರಿಸಿತು. ಇನ್ನು ಶಾರ್ದೂಲ್ ಠಾಕೂರ್ 27 ರನ್ ಗೆ 4 ವಿಕೆಟ್ ಕಬಳಿಸಿ ತಮ್ಮ ಈವರೆಗಿನ ಅತ್ಯುತ್ತಮ ಆಟವಾಡಿದರು.

ಇದಕ್ಕಿಂತ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಅತಿಥೇಯ ಶ್ರೀಲಂಕಾ ಕುಶಾಲ್ ಮೆಂಡಿಸ್(55ರನ್, 3ಸಿ, 3 ಬೌ) ಅವರ ಅಮೋಘ ಅರ್ಧಶತಕದ ನೆರವಿನಿಂದ 19 ಓವರುಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತು. ಇನ್ನು ಉಪುಲ್ ತರಂಗಾ 22 ರನ್ ಗಳಿಸಿದರೆ, ಉಳಿದವರೆಲ್ಲಾ ಕನಿಷ್ಠ ಮೊತ್ತಕ್ಕೆ ಔಟಾದರು.

ಭಾರತದ ಪರ ಸಂಘಟಿತ ದಾಳಿ ನಡೆಸಿದ ಶಾರ್‌ದೂಲ್‌ ಠಾಕೂರ್‌ 4 ವಿಕೆಟ್‌ ಪಡೆದರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.

ಈ ತ್ರಿಕೋಣ ಸರಣಿಯಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಒಂದೊಂದು ಪಂದ್ಯದಲ್ಲಿ ಗೆದ್ದ ಕಾರಣ ಕೊನೆಯ ಎರಡು ಪಂದ್ಯಗಳು ಸರಣಿ ಗೆಲ್ಲುವಲ್ಲಿ ಮಹತ್ವದ್ದೆನಿಸಿದೆ.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money