Breaking News
Home / Breaking News / ಯಾರಿಗೂ ಬೇಡವಾದ ಅಪರೂಪದ ದಾಖಲೆ ಬರೆದ ಮೊದಲ ಭಾರತೀಯ ‘ಕೆಎಲ್ ರಾಹುಲ್’ ![Video]

ಯಾರಿಗೂ ಬೇಡವಾದ ಅಪರೂಪದ ದಾಖಲೆ ಬರೆದ ಮೊದಲ ಭಾರತೀಯ ‘ಕೆಎಲ್ ರಾಹುಲ್’ ![Video]

ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಶ್ರೀಲಂಕಾದಲ್ಲಿ ನಡೆಯುವ ಟೀಂ ಇಂಡಿಯಾ ದಲ್ಲಿ ಸ್ಥಾನ ಪಡೆದಿದ್ದು, ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದರು. ನಿನ್ನೆಯ ಪಂದ್ಯದಲ್ಲೂ 17 ಎಸೆತದಲ್ಲಿ 18 ಗಳಿಸಿ ವಿಶೇಷವಾಗಿ ಔಟ್ ಆಗುವ ಮೂಲಕ ರೆಕಾರ್ಡ್ ಮಾಡಿದ್ದಾರೆ.

ರಾಹುಲ್ ಅವರು ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್‌ಗೆ ಬಲಿಯಾದ ಮೊದಲ ಭಾರತೀಯ ಆಟಗಾರ ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದಾರೆ.

ನಿನ್ನೆ ನಡೆದ ಪಂದ್ಯದ 10ನೇ ಓವರ್ ನಲ್ಲಿ ಈ ಘಟನೆ ನಡೆದಿದ್ದು, ಜೀವನ್ ಮೆಂಡಿಸ್ ಅವರ ಒಂದು ಎಸೆತದಲ್ಲಿ ರನೌಟ್ ನಿಂದ ಪಾರಾಗಿದ್ದ ಇವರು 5ನೇ ಎಸೆತದಲ್ಲಿ ಸಿಂಗಲ್ ಕದಿಯುವ ಭರದಲ್ಲಿ ಕಾಲಿನಿಂದ ಹಿಂಭಾಗದಲ್ಲಿರುವ ವಿಕೆಟ್‌ನ್ನು ತುಳಿದಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೇವಲ 9 ಬ್ಯಾಟ್ಸ್ ಮ್ಯಾನ್ ಗಳು ಮಾತ್ರ ಹಿಟ್ ವಿಕೆಟ್ ಗೆ ಬಲಿಯಾಗಿದ್ದು, ರಾಹುಲ್ ಅವರು ಮೊದಲ ಭಾರತೀಯ ಬ್ಯಾಟ್ಸ್ ಮ್ಯಾನ್ ಎನಿಸಿಕೊಂಡಿದ್ದಾರೆ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money