Breaking News
Home / Breaking News / ಸಾಲು ಸಾಲು ದಾಖಲೆಗಳಿಗೆ ಸಾಕ್ಷಿಯಾಯಿತು ಇಂಗ್ಲೆಂಡ್ – ಆಸೀಸ್ ಪಂದ್ಯ; ರೆಕಾರ್ಡ್ಸ್’ಗಳ ಪಟ್ಟಿ ಇಲ್ಲಿದೆ ನೋಡಿ!

ಸಾಲು ಸಾಲು ದಾಖಲೆಗಳಿಗೆ ಸಾಕ್ಷಿಯಾಯಿತು ಇಂಗ್ಲೆಂಡ್ – ಆಸೀಸ್ ಪಂದ್ಯ; ರೆಕಾರ್ಡ್ಸ್’ಗಳ ಪಟ್ಟಿ ಇಲ್ಲಿದೆ ನೋಡಿ!

ಕ್ರಿಕೆಟ್ ನ ಮಹಾರಾಜನಂತೆ ಮೆರೆದಿದ್ದ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋತು ದಾಖಲೆ ಬರೆದರೆ, ಕ್ರಿಕೆಟ್ ಜನಕ ಬೃಹತ್ ಮೊತ್ತ ಪೇರಿಸಿ ರೆಕಾರ್ಡ್ ಮಾಡಿತು. ಐದು ಪಂದ್ಯಗಳ ಏಕದಿನ ಸರಣಿಯನ್ನು ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ 3-0 ಅಂತರದಲ್ಲಿ ವಶಪಡಿಸಿಕೊಂಡಿರುವ ಇಂಗ್ಲೆಂಡ್ ಹೆಮ್ಮೆಯ ನಗೆ ಬೀರಿದೆ.

 

ಆದರೆ ಈ ಸರಣಿಯ ಮೂರನೇ ಪಂದ್ಯ ಸಾಲು ಸಾಲು ದಾಖಲೆಗಳಿಗೆ ಸಾಕ್ಷಿಯಾಯಿತು. ಅದೇನೇನು ನೋಡೋಣ ಬನ್ನಿ;

ಏಕದಿನ ಪಂದ್ಯದಲ್ಲಿ ವಿಶ್ವದಾಖಲೆ ಮೊತ್ತ:

ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿಶ್ವದಾಖಲೆ ಮೊತ್ತ 6 ವಿಕೆಟ್ ನಷ್ಟಕ್ಕೆ 481 ಬೃಹತ್ ರನ್ ಪೇರಿಸಿದ ಇಂಗ್ಲೆಂಡ್ ತನ್ನದೇ ಹಳೆಯ ದಾಖಲೆಯನ್ನು ಮುರಿದಿದೆ. ಈ ಹಿಂದೆ 2016ರಲ್ಲಿ ಪಾಕಿಸ್ತಾನ ವಿರುದ್ಧ ಮೂರು ವಿಕೆಟ್ ನಷ್ಟಕ್ಕೆ 444 ರನ್ ಕಲೆ ಹಾಕಿತ್ತು.

ದಾಖಲೆಯ ಗೆಲುವು ಸಾಧಿಸಿದ ಇಂಗ್ಲೆಂಡ್:

ಆಸೀಸ್ ವಿರುದ್ಧ 242 ರನ್ ಗಳ ಅಂತರದಿಂದ ಗೆದ್ದು ಏಕದಿನ ಕ್ರಿಕೆಟ್ ನಲ್ಲಿ ದಾಖಲಿಸಿದ ಅತೀ ದೊಡ್ಡ ಗೆಲುವು ಎಂಬ ಗರಿ ಇಂಗ್ಲೆಂಡ್ ಮುಡಿಗೇರಿದೆ. 2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ 210 ರನ್ ಅಂತರದ ಗೆಲುವು ಈವರೆಗಿನ ಅತೀ ದೊಡ್ಡ ಗೆಲುವಾಗಿತ್ತು.

ಆಸ್ಟ್ರೇಲಿಯಾಗೆ ದಾಖಲೆ ಸೋಲು:

1986ರಲ್ಲಿ ನ್ಯೂಜಿಲೆಂಡ್ ವಿರುದ್ಧ 206 ರನ್ ಅಂತರದ ಸೋಲಿಗೆ ಒಳಗಾದ ಬಳಿಕ ಕಾಂಗರೂ ಪಡೆಗೆ ಎದುರಾದ ಬೃಹತ್ ಅಂತರದ ಸೋಲು ಇದಾಗಿದ್ದು, 242 ರನ್ ಗಳ ಅಂತರದಿಂದ ಸೋಲನುಭವಿಸಿದೆ.

ಅತೀ ವೇಗದ ಅರ್ಧ ಶತಕ:

ಆಸೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ನಾಯಕ ಇಯಾನ್ ಮಾರ್ಗನ್ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಪರ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.

ಏಕದಿನದಲ್ಲಿ ಗರಿಷ್ಠ ರನ್:

ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಇಯಾನ್ ಮಾರ್ಗನ್ ಏಕದಿನ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ರನ್ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 5443 ರನ್ ಗಳಿಸಿದ ಇವರು ಇಯಾನ್ ಬೆಲ್ ಅವರ 5416 ರನ್ ದಾಖಲೆಯನ್ನು ಮುರಿದರು.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money