Breaking News
Home / Breaking News / 34 ವರ್ಷಗಳ ಬಳಿಕ ಏಕದಿನ ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದ ಕ್ರಿಕೆಟ್ ದೈತ್ಯ ಆಸ್ಟ್ರೇಲಿಯಾ; ಭಾರತ ಎಷ್ಟನೇ ಸ್ಥಾನದಲ್ಲಿದೆ?

34 ವರ್ಷಗಳ ಬಳಿಕ ಏಕದಿನ ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದ ಕ್ರಿಕೆಟ್ ದೈತ್ಯ ಆಸ್ಟ್ರೇಲಿಯಾ; ಭಾರತ ಎಷ್ಟನೇ ಸ್ಥಾನದಲ್ಲಿದೆ?

ಹಲವಾರು ದಶಕಗಳಿಂದ ಕ್ರಿಕೆಟ್ ಜಗತ್ತಿಗೆ ಮಹಾರಾಜನಂತೆ ಮೆರೆದ, ಯಾವತ್ತೂ ತನ್ನ ಮೊದಲ ಸ್ಥಾನವನ್ನು ಬಿಟ್ಟುಕೊಡದ ವಿಶ್ವದ ಅತ್ಯಂತ ಬಲಾಢ್ಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಈಗ ಏಕದಿನ ಅಂಕಪಟ್ಟಿಯಲ್ಲಿ ಅತೀವ ಕುಸಿತ ಕಂಡಿದೆ.

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ – ಇಂಗ್ಲೆಂಡ್ ನಡುವಣ ನಡೆಯುತ್ತಿರು 5 ಏಕದಿನ ಪಂದ್ಯಗಳ ಸರಣಿಯಲ್ಲಿ ಎರಡರಲ್ಲಿ ಸೋತ ನಂತರ ಆಸ್ಟ್ರೇಲಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ಕೆಳಗಿಳಿದಿದೆ. ಈಗ ಮೂರನೇ ಪಂದ್ಯವನ್ನು ಪ್ರತಿಷ್ಠೆಗಾದರೂ ಗೆಲ್ಲಲೇಬೇಕಾದ ಅನಿವಾರ್ಯತೆ ತಂಡಕ್ಕಿದೆ.

2017ರ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ನಂಬರ್ ಒನ್ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಒಂದರ ಹಿಂದೊಂದರಂತೆ ಸೋಲನುಭವಿಸುತ್ತಾ, ಆಟಗಾರರ ವಿವಾದಾತ್ಮಕ ನಡೆ, ಚೆಂಡು ವಿರೂಪ ಪ್ರಕರಣಗಳಿಂದ ಕಂಗೆಟ್ಟು, ಐದು ಬಾರಿ ವಿಶ್ವಕಪ್ ಗೆದ್ದ ತಂಡ ಈಗ 102 ಅಂಕ ಪಡೆದು ಪಾಕಿಸ್ತಾನಕ್ಕಿಂತಲೂ ಕೆಳಮಟ್ಟಕ್ಕಿಳಿದಿದೆ.

1984ರ ಜನವರಿಯಲ್ಲಿ ಆಸ್ಟ್ರೇಲಿಯಾ 6ನೇ ಸ್ಥಾನಕ್ಕಿಳಿದಿತ್ತು. ಈಗ ಬರೋಬ್ಬರಿ 34 ವರ್ಷಗಳ ಬಳಿಕ ಈ ಕುಸಿತ ಕಂಡಿದೆ.

ಏಕದಿನ ಅಂಕಪಟ್ಟಿ ಹೀಗಿದೆ: 

RANK TEAM RATINGS
1 England 124
2 India 122
3 South Africa 113
4 New Zealand 112
5 Pakistan 102
6 Australia 102

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money