Breaking News
Home / Breaking News / ದ್ರಾವಿಡ್ ಹಿಂದಿಕ್ಕಿ ಏಕದಿನ ಕ್ರಿಕೆಟ್’ನಲ್ಲಿ ಹೊಸ ದಾಖಲೆ ಬರೆದ ಧೋನಿ!

ದ್ರಾವಿಡ್ ಹಿಂದಿಕ್ಕಿ ಏಕದಿನ ಕ್ರಿಕೆಟ್’ನಲ್ಲಿ ಹೊಸ ದಾಖಲೆ ಬರೆದ ಧೋನಿ!

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018ರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಕ್ ವಿರುದ್ಧ ದಾಖಲೆಯ ಗೆಲುವು ಗಳಿಸಿದ ಭಾರತ ಇತಿಹಾಸವನ್ನು ಸೃಷ್ಟಿಸಿತ್ತು. ಹಾಗೆಯೇ ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ಕಪ್ತಾನ ಎಂಎಸ್ ಧೋನಿ ಹೊಸದೊಂದು ದಾಖಲೆ ಬರೆದಿದ್ದಾರೆ.

ದಾಖಲೆಗಳ ಸರದಾರ ಧೋನಿ ಈ ಬಾರಿ ಭಾರತದ ಕ್ರಿಕೆಟ್ ಗೋಡೆ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಈ ಹೊಸ ರೆಕಾರ್ಡ್ ಮಾಡಿದ್ದಾರೆ. ಹೌದು! ಪಾಕ್ ವಿರುದ್ಧ ಆಡಿದ ಪಂದ್ಯದ ಬಳಿಕ ಅವರು ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

37 ವರ್ಷದ ಧೋನಿ ಈವರೆಗೆ ಭಾರತದ ಪರ 505 (ಟೆಸ್ಟ್‌, ಏಕದಿನ ಮತ್ತು ಐ-ಟಿ20) ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಈ ಮೂಲಕ ಒಟ್ಟು 504 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ರಾಹುಲ್ ದ್ರಾವಿಡ್ ಅವರ ಎರಡನೇ ಸ್ಥಾನವನ್ನು ಏರಿದ್ದಾರೆ. ಇನ್ನು ಮೊದಲನೇ ಸ್ಥಾನದಲ್ಲಿ 664 ಪಂದ್ಯಗಳನ್ನಾಡಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

2014ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಷ್ಟೇ ಸ್ಪೆಷಲಿಸ್ಟ್‌ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಆಡುತ್ತಿರುವ ಧೋನಿ ಕ್ರಿಕೆಟ್ ದೇವರು ತೆಂಡೂಲ್ಕರ್ ದಾಖಲೆ ಮುರಿಯುತ್ತಾರೋ ಕಾದು ನೋಡಬೇಕು.

ಇನ್ನು ಪಾಕ್‌ ವಿರುದ್ಧ 322ನೇ ಏಕದಿನ ಪಂದ್ಯ ಮತ್ತು 90 ಟೆಸ್ಟ್‌ ಪಂದ್ಯಗಳನ್ನೂ ಆಡಿರುವ ಧೋನಿ ಭಾರತದ ಪರ ಒಟ್ಟು 93 ಟಿ20 ಪಂದ್ಯಗಳನ್ನು ಆಡಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ದಾಖಲೆ ಹೊಂದಿದ್ದಾರೆ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money