ಇನ್ನು ಪಾಸ್’ಪೋರ್ಟ್ ಗೆ ಅರ್ಜಿ ಸಲ್ಲಿಸಲು ನೀವು ಪಾಸ್’ಪೋರ್ಟ್ ಕಛೇರಿ ಮುಂದೆ ಗಂಟೆಗಟ್ಟಲೆ ಕಾಯಬೇಕಾಗಿಲ್ಲ… ಅರ್ಜಿ ಸಲ್ಲಿಸಲು ಅಲೆದಾಡಬೇಕಾಗಿಲ್ಲ. ಈಗ ಎಲ್ಲವೂ ಇದೆ ನಿಮ್ಮ ಬೆರಳತುದಿಯಲ್ಲೇ.
ಹೌದು! ನೀವು ಭಾರತದ ಯಾವುದೇ ಭಾಗದಲ್ಲಿದ್ದರೂ ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಸ್ಮಾರ್ಟ್’ಫೋನ್ ಮೂಲಕ ಪಾಸ್’ಪೋರ್ಟ್ ಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತಹ ಹೊಸ ಯೋಜನೆಯೊಂದಕ್ಕೆ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಚಾಲನೆ ನೀಡಿದ್ದಾರೆ.
ಇದಕ್ಕಾಗಿಯೇ mPassprtSeva ಎಂಬ ಆ್ಯಪ್ ನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರ ಮೂಲಕ ನೀವು ದೇಶದ ಯಾವುದೇ ಭಾಗದಲ್ಲಿದ್ದರೂ ಪಾಸ್’ಪೋರ್ಟ್ ಗೆ ಅರ್ಜಿ ಅಲ್ಲಿಸಬಹುದು. ಅಂದ್ರೆ ಈಗ ನೀವು ಬೆಂಗಳೂರಿನವರಾಗಿದ್ದು, ಮುಂಬೈನಲ್ಲಿದ್ದರೆ ಅಲ್ಲಿಂದರೆ ಬೆಂಳೂರಿನ ಪಾಸ್ಪೋರ್ಟ್ ಕಛೇರಿಯಿಂದ ಅರ್ಜಿ ಸಲ್ಲಿಸಲು ಈ ಆ್ಯಪ್ ಸಹಾಯ ಮಾಡುತ್ತದೆ.
ಪಾಸ್’ಪೋರ್ಟ್ ಸೇವಾ ದಿನಾಚರಣೆ ಅಂಗವಾಗಿ ಸುಷ್ಮಾ ಸ್ವರಾಜ್ ಈ ಸೇವೆಯನ್ನು ಉದ್ಘಾಟಿಸಿದ್ದು, mPassprtSeva ಎಲ್ಲಾ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಗಳಲ್ಲಿ ಲಭ್ಯವಿದೆ.