ವಿವೋ ನೆಕ್ಸ್ ಫೋನ್! ಹೌದು ಈಗಾಗಲೇ ತನ್ನ ವಿಶೇಷ ಫೀಚರ್ಸ್ ಮತ್ತು ಅತ್ಯುತ್ತಮ ನಿರ್ವಹಣೆಯಿಂದ ಬಳಕೆದಾರರ ಮನಗೆದ್ದಿರುವ ಈಗ ತನ್ನ ಬೆಲೆಯಲ್ಲಿ ಅತೀವ ಇಳಿಕೆ ಮಾಡಿಕೊಂಡಿದೆ. 44,900 ರೂ ಬೆಲೆಬಾಳುವ ಫೋನ್ ಈಗ ಕೇವಲ 1,947 ರೂ. ಗೆ ಲಭ್ಯವಾಗಲಿದೆ.
ಭಾರತದ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿರುವ ವಿವೋ 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಹೊಸ ಡಿಸ್ಕೌಂಟ್ ಆಫರ್ ಘೋಷಿಸಿದ್ದು, ಆನ್ ಲೈನ್ ಫ್ಲ್ಯಾಶ್ ಸೇಲ್ ಮೂಲಕ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.
ಕೇವಲ ಫೋನ್ ಮಾತ್ರವಲ್ಲದೆ, ವಿವೋ ಇಯರ್ ಫೋನ್, ಯುಎಸ್ ಬಿ ಚಾರ್ಜಿಂಗ್ ಕೇಬಲ್ ಗಳು ಕೇವಲ 72 ರೂ ಹೆಚ್ಚುವರಿ ಕ್ಯಾಶ್ ಬ್ಯಾಕ್ ಆಫರ್ ಜೊತೆ ಲಭ್ಯವಿದ್ದು, ಜೊತೆಗೆ ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್, ಕೂಪನ್ ಡೀಲ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಗಳು ಆಯ್ದ ಶ್ರೇಣಿಯ ವಿವೋ ಸ್ಮಾರ್ಟ್ ಫೋನ್ ಗಳ ಮತ್ತು ಆಕ್ಸೆಸ್ಸರಿಗಳ ಮೇಲೆ ದೊರೆಯಲಿದೆ.
ಹೇಗೆ ಪಡ್ಕೊಳ್ಳುವುದು?
ಈ ಆನ್ ಲೈನ್ ಫ್ಲ್ಯಾಶ್ ಸೇಲ್ ಆಗಸ್ಟ್ 7ರಿಂದ ಆಗಸ್ಟ್ 9ರವರೆಗೆ ಮಧ್ಯಾಹ್ನ 12 ಗಂಟೆಯಿಂದ ಕಂಪನಿಯ ಆನ್ ಲೈನ್ ಪೋರ್ಟಲ್ http://shop.vivo.com/in/ ಪ್ರಾರಂಭವಾಗಲಿದೆ, ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬೇಕಾಗಿದ್ದು ಕೇವಲ 10 ನಿಮಿಷ ಕಾಲಾವಕಾಶವಿದೆ. ಈ ಮೂರೂ ದಿನಗಳಂದು ಸೇಲ್ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿ ಸೇಲ್ ಮುಗಿಯುವವರೆಗೆ ಮುಂದುವರಿಯುತ್ತದೆ.
ಫೀಚರ್ಸ್:
ವಿವೋ ನೆಕ್ಸ್ ಫೋನ್ 6.59 ಇಂಚು ಫುಲ್ ಎಚ್ ಡಿ +ಬಿಝೆಲ್-ಲೆಸ್ ಡಿಸ್ ಪ್ಲೇ ಹೊಂದಿದ್ದು, 12+5 ಮೆಗಾ ಪಿಕ್ಸೆಲ್ ಡ್ಯುವೆಲ್ ಬ್ಯಾಕ್ ಕ್ಯಾಮರಾ ಸೆಟ್ ಅಪ್ ಮತ್ತು 8 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮರಾ ಹೊಂದಿದೆ. ಇನ್ನು 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆನ್ ಬೋರ್ಡ್ ಸ್ಟೋರೇಜ್ ಹೊಂದಿದೆ.