Breaking News
Home / Breaking News / ಜಿಯೋವನ್ನೇ ಅಲ್ಲಾಡಿಸುವ ಹೊಸ ಆಫರ್; ದಿನಕ್ಕೆ 4 ಜಿಬಿ ಡೇಟಾ ಅದೂ ಕೇವಲ ರೂ.149ಕ್ಕೆ!

ಜಿಯೋವನ್ನೇ ಅಲ್ಲಾಡಿಸುವ ಹೊಸ ಆಫರ್; ದಿನಕ್ಕೆ 4 ಜಿಬಿ ಡೇಟಾ ಅದೂ ಕೇವಲ ರೂ.149ಕ್ಕೆ!

ಜಿಯೋ ಇತ್ತೀಚಿಗೆ ತಾನೇ ಡಬಲ್ ಧಮಾಕ ಆಫರ್ ಕೊಟ್ಟು ಎಲ್ಲರಿಗೂ ಸ್ಪರ್ಧೆಯೊಡ್ಡಿದ್ದೇನೆ ಎಂದು ಬೀಗಿತ್ತು. ಆದರೆ ಈಗ ಅದರ ಬುಡವನ್ನೇ ಅಲ್ಲಾಡಿಸುವಂತೆ ಈ ಟೆಲಿಕಾಂ ಕಂಪನಿ ಹೊಸ ಆಕರ್ಷಕ ಆಫರ್ ಒಂದನ್ನು ಹೊರತಂದಿದೆ.

ಇನ್ನೇನು ಜುಲೈ 14 ರಿಂದ ಫುಟ್ ಬಾಲ್ ಜ್ವರ ಪ್ರಾರಂಭವಾಗಲಿದೆ. ಅಭಿಮಾನಿಗಳು ನಿರಾತಂಕವಾಗಿ ಮೊಬೈಲ್ ನಲ್ಲೇ ತಮ್ಮ ನೆಚ್ಚಿನ ಫುಟ್ ಬಾಲ್ ಪಂದ್ಯಗಳನ್ನು ನೋಡಲು ಸರಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಈಗ ಭರ್ಜರಿ ಆಫರ್ ನ್ನು ಹೊರ ತಂದಿದೆ.

ದಿನಕ್ಕೆ 4ಜಿಬಿ ಡೇಟಾ:

ಜೂನ್ 14 ರಿಂದ ಪ್ರಾರಂಭವಾಗುವ ಈ ಪ್ಲ್ಯಾನ್ ನಲ್ಲಿ ನೀವು ರೂ 149 ರೀಚಾರ್ಜ್ ಮಾಡಿದರೆ ನಿಮಗೆ ದಿನಕ್ಕೆ 4 ಜಿಬಿ ಡೇಟಾ ಲಭ್ಯವಿದ್ದು, ಇದರಲ್ಲಿ ಯಾವುದೇ ಉಚಿತ ಎಸ್ಎಮ್ಎಸ್ ಅಥವಾ ಧ್ವನಿಕರೆಗಳು ಲಭ್ಯವಿರುವುದಿಲ್ಲ.

ಈ ಪ್ಲ್ಯಾನ್ ಗೆ ‘ಫಿಫಾ ವರ್ಲ್ಡ್ ಕಪ್ ಸ್ಪೆಷಲ್  ಆಫರ್’ ಎಂದು ಹೆಸರಿಡಲಾಗಿದ್ದು, ಈ ಆಫರ್ ಮೂಲಕ ಜೂನ್ 14 ರಿಂದ ಜುಲೈ 15ರವರೆಗೆ ನಡೆಯುವ ಫಿಫಾ ಪಂದ್ಯಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ, ನಿಮ್ಮ ಮೊಬೈಲ್ ಗಳಲ್ಲಿ ನೋಡಬಹುದು.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money