Breaking News
Home / Breaking News / ಜಿಯೋ ಗ್ರಾಹಕರಿಗೆ ಜನವರಿ 26ರಿಂದ ‘ಡೇಟಾ ಹಬ್ಬ’; ದಿನಕ್ಕೆ 1ಜಿಬಿ ಗಿಂತಲೂ ಹೆಚ್ಚು ಡೇಟಾದ ಭರ್ಜರಿ ಆಫರ್ ಬಿಡುಗಡೆ!

ಜಿಯೋ ಗ್ರಾಹಕರಿಗೆ ಜನವರಿ 26ರಿಂದ ‘ಡೇಟಾ ಹಬ್ಬ’; ದಿನಕ್ಕೆ 1ಜಿಬಿ ಗಿಂತಲೂ ಹೆಚ್ಚು ಡೇಟಾದ ಭರ್ಜರಿ ಆಫರ್ ಬಿಡುಗಡೆ!

ಇತ್ತೀಚೆಗಷ್ಟೇ ಜಿಯೋಗೆ ಟಕ್ಕರ್ ಕೊಡಲು ಏರ್’ಟೆಲ್ ಅತೀ ಕಡಿಮೆ ಬೆಲೆಯಲ್ಲಿ ಹೆಚ್ಚು ಲಾಭದ ಆಫರ್ ಒಂದನ್ನು ಬಿಡುಗಡೆ ಮಾಡಿತ್ತು. ಆದರೆ ಇದಕ್ಕೇನೂ ತಲೆಕೆಡಿಸಿಕೊಳ್ಳದ ಜಿಯೋ ಈಗ ಮತ್ತೆ ಹೊಸ ಆಫರ್ ಘೋಷಿಸಿದೆ.

 

 

ಜಿಯೋ ಅತೀ ಕನಿಷ್ಠ ದರಕ್ಕೆ ಹೊಸ ಆಫರ್!  ಜನವರಿ 26 ರಂದು ದೇಶದೆಲ್ಲೆಡೆ ನಡೆಯುವ ಗಣರಾಜ್ಯೋತ್ಸವ ಸಂಭ್ರಮದಂದು ಈ ಹೊಸ ಆಫರ್ ಬಿಡುಗಡೆಯಾಗಲಿದ್ದು, ಗ್ರಾಹಕರಿಗೆ ‘ಡೇಟಾ ಹಬ್ಬ’ ವೇ ದೊರೆಯಲಿದೆ. ಈ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ನನ್ನದೇ ಅಧಿಪತ್ಯ ಎಂದು ಮತ್ತೊಮ್ಮೆ ಸಾಬೀತುಪಡಿಸಲು ಹೊರಟಿದೆ ಜಿಯೋ.

Jio Offer Will Give 500MB More Data With 1GB, 1.5GB Per Day Plans from January 26

ಗಣರಾಜ್ಯೋತ್ಸವದ ಪ್ರಯುಕ್ತ ಜಿಯೋ ಗ್ರಾಹಕರಿಗೆ ರೂ 149 ಮತ್ತು ಅದಕ್ಕಿಂತ ಹೆಚ್ಚಿನ ತನ್ನ ಎಲ್ಲಾ ಆಫರ್ ಗಳ ಮೇಲೆ ಹೆಚ್ಚುವರಿ 50% ಡೇಟಾ ಆಫರ್ ಪ್ರಕಟಿಸಿದೆ. ಅಂದರೆ ಒಂದೂವರೆ ಪಟ್ಟು, 1ಜಿಬಿ ಇದ್ದಲ್ಲಿ 1.5 ಜಿಬಿ ಡೇಟಾ ದೊರೆಯಲಿದೆ. ಇದು ಜನವರಿ 26ರ ಮಧ್ಯರಾತ್ರಿ 12 ಗಂಟೆಗೆ ಆ್ಯಕ್ಟಿವೇಟ್ ಆಗಲಿದೆ.

ಜಿಯೋದಿಂದ ನ್ಯೂ ಇಯರ್ ಗಿಫ್ಟ್!

ಇನ್ನು 1.5 ಜಿಬಿ ಡೇಟಾ ಇದ್ದ ರೂ 198 ಮತ್ತು ಅದಕ್ಕಿಂತ ಹೆಚ್ಚಿನ ಆಫರ್ ಗಳ ಮೇಲೆ ಗ್ರಾಹಕರಿಗೆ ಹೆಚ್ಚುವರಿ 50% ಅಂದರೆ ದಿನಕ್ಕೆ 2 ಜಿಬಿ ಡೇಟಾ ದೊರೆಯಲಿದೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money