Breaking News
Home / Breaking News / ಜಿಯೋ ದಿಂದ 10ಜಿಬಿ ಡೇಟಾ ಫ್ರೀ; ಈಗಲೇ ನಿಮ್ಮ ಮೈಜಿಯೋ ಆ್ಯಪ್ ಚೆಕ್ ಮಾಡ್ಕೊಳ್ಳಿ- ನಂತರ ಹೀಗೆ ಮಾಡಿ!

ಜಿಯೋ ದಿಂದ 10ಜಿಬಿ ಡೇಟಾ ಫ್ರೀ; ಈಗಲೇ ನಿಮ್ಮ ಮೈಜಿಯೋ ಆ್ಯಪ್ ಚೆಕ್ ಮಾಡ್ಕೊಳ್ಳಿ- ನಂತರ ಹೀಗೆ ಮಾಡಿ!

ಜಿಯೋ ತನ್ನ ಅತ್ಯಂತ ಕಡಿಮೆ ಬೆಲೆಯ ಡೇಟಾ ಯೋಜನೆಗಳಿಂದ ಮತ್ತು ಉಚಿತ ಕರೆಗಳಿಂದ ಈಗಾಗಲೇ ಬಳಕೆದಾರರ ವಿಶ್ವಾಸ ಗಳಿಸಿದೆ. ಇದಿಷ್ಟೇ ಅಲ್ಲದೆ, ಅದರ ಮೈಜಿಯೋ ಆ್ಯಪ್ ಕೂಡ ಬಳಕೆದಾರರ ಮಧ್ಯೆ ಜನಪ್ರೀಯವಾಗಿದೆ.

ಇನ್ನು ಜಿಯೋಟಿವಿ ಆ್ಯಪ್ ಕೂಡ ಗ್ರಾಹಕರಿಂದ ಪ್ರಶಂಸೆಗೆ ಒಳಪಟ್ಟಿದೆ, ಯಾಕೆಂದರೆ ಇದರಲ್ಲಿ ಯಾವುದೇ ಹೆಚ್ಚುವರಿ ಹಣ ಪಾವತಿಸದೆ, ನಮಗೆ ಇಷ್ಟವಾದ ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು.

ಆದರೆ ಇದರಿಂದ ನಮ್ಮ ದೈನಂದಿನ ಡೇಟಾ ಶೀಘ್ರವಾಗಿ ಮುಗಿಯಬಹುದು. ಅದೂ ನಾವು ನಮಗೆ ಅವಶ್ಯಕತೆ ಇರುವಷ್ಟೇ ಡೇಟಾ ಪ್ಲ್ಯಾನ್ ರೀಚಾರ್ಜ್ ಮಾಡಿದ್ದರೆ, ಟಿವಿಯಲ್ಲಿ ಕೆವು ವಿಡೀಯೋಗಳನ್ನು ನೋಡುವಷ್ಟರಲ್ಲಿ ಡೇಟಾ ಸಂಪೂರ್ಣವಾಗಿ ಖಾಲಿಯಾಗಬಹುದು.

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಜಿಯೋಟಿವಿ ಆ್ಯಪ್ ಹೊಂದಿರುವ ಗ್ರಾಹಕರಿಗೆ ಲೈವ್ ಟಿವಿ ನೋಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಜಿಯೋ ಈಗ 10 ಜಿಬಿ ಡೇಟಾ ಉಚಿತವಾಗಿ ಕೊಡುತ್ತಿದೆ.

ಜಿಯೋಟಿವಿ ಆ್ಯಪ್ ಹೊಂದಿರುವ ಬಳಕೆದಾರರು ಈಗ ತಮ್ಮ ಮೈ ಜಿಯೋ ಆ್ಯಪ್ ಚೆಕ್ ಮಾಡಿ 10ಜಿಬಿ ಡೇಟಾ ಅವರ ಖಾತೆಗೆ ಜಮೆಯಾಗಿದೆಯೇ ಎಂದು ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದಿಷ್ಟೇ:

  • ನಿಮ್ಮ ಮೈಜಿಯೋ ಆ್ಯಪ್ ನಲ್ಲಿ ಪ್ಲ್ಯಾನ್ ಸೆಕ್ಷನ್ ಗೆ ಹೋಗಿ
  • ಹೆಚ್ಚುವರಿ ಡಾಟಾ ನಿಮ್ಮ ನಂಬರ್ ಗೆ ಬಂದಿದ್ದರೆ ಅಲ್ಲಿ ಕಾಣುತ್ತದೆ.
  • ಅದ ಎಕ್ಸ್ ಪೈರಿ ದಿನಾಂಕ ಮತ್ತು ಒಟ್ಟು ಡಾಟಾ ಕೂಡ ನೋಡಬಹುದು.

ಇತ್ತೀಚೆಗೆ ಬಾರ್ಸಿಲೋನಿಯಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2018(MWC) ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಬೆಸ್ಟ್ ಮೊಬೈಲ್ ವಿಡೀಯೋ ಕಂಟೆಂಟ್’ ವಿಭಾಗದಲ್ಲಿ ಜಿಯೋಟಿವಿ ಗೆ ಪ್ರಶಸ್ತಿ ಬಂದ ಕಾರಣ ಬಳಕೆದಾರರಿಗೆ ಉಚಿತ 10ಜಿಬಿ ಟೇಟಾ ನೀಡಲಾಗುತ್ತಿದೆ ಎಂದು ‘ಗ್ಯಾಡ್ಜೆಟ್ 360’ ವರದಿ ಮಾಡಿದೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money