Breaking News
Home / Breaking News / ಜುಲೈ 17ಕ್ಕೆ ಬಂದ್ ಆಗಲಿದೆ ಈ ಜನಪ್ರೀಯ ‘ಚಾಟಿಂಗ್ ಆ್ಯಪ್’ !

ಜುಲೈ 17ಕ್ಕೆ ಬಂದ್ ಆಗಲಿದೆ ಈ ಜನಪ್ರೀಯ ‘ಚಾಟಿಂಗ್ ಆ್ಯಪ್’ !

ಈಗ ಮೆಸೆಂಜರ್ ಆ್ಯಪ್ ಅಂದ್ರೆ ನೆನಪಿಗೆ ಬರುವುದೇ ವ್ಯಾಟ್ಸ್ ಆ್ಯಪ್… ಆದರೆ ಇದರ ಜೊತೆಗೆ ಹತ್ತು ಹಲವಾರು ಮೆಸೆಂಜರ್ ಆ್ಯಪ್ ಗಳೂ ಚಾಲ್ತಿಯಲ್ಲಿವೆ. ಹೊಸದಾಗಿ ಈಗ ಬರುತ್ತಿರುವ ಆ್ಯಪ್ ಗಳ ಪೈಪೋಟಿಯಿಂದಾಗಿ ಹಳೆಯ ಜನಪ್ರೀಯ ಆ್ಯಪ್ ಒಂದು ಬಾಗಿಲು ಮುಚ್ಚಲಿದೆ.

ನೀವು 25, 30ರ ಹರೆಯದಲ್ಲಿರುವುವರಾದರೆ ಖಂಡಿತ ಯಾಹೂ ಮೆಸೆಂಜರ್ ಉಪಯೋಗಿಸಿರುತ್ತೀರಿ. ಆ ಆ್ಯಪ್ ಈಗ ತನ್ನ 20 ವರ್ಷಗಳ ಜೀವಿತಾವಧಿ ಮುಗಿಸಿ ತೆರೆ ಮರೆಗೆ ಸರಿಯಲಿದೆ. ಇದನ್ನು ಶಾಶ್ವತವಾಗಿ ಮುಚ್ಚಲು ಜುಲೈ 17ರ ದಿನ ನಿಗದಿಯಾಗಿದೆ.

ಪ್ರಸಕ್ತ ಯಾಹೂ ಮೆಸೆಂಜರ್ ಉಪಯೋಗಿಸುತ್ತಿರುವವರಿಗೆ 6 ತಿಂಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ಅವರು ತಮ್ಮ ಚಾಟ್ ಹಿಸ್ಟರಿಯನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಆದ್ರೆ ಇದಕ್ಕೆ ಬದಲಾಗಿ ಸ್ಕ್ವಿರ್ಲ್(squirrel) ಎಂಬ ಮೆಸೇಂಜಿಗ್ ಆ್ಯಪ್ ನ್ನು ಪರಿಚಯಿಸಲಿದ್ದು, ಬಳಕೆದಾರರು ಅದಕ್ಕೆ ರೀಡೈರೆಕ್ಟ್ ಮಾಡಿಕೊಳ್ಳಬಹುದು. ಆದರೆ ಈ ಆ್ಯಪ್ ಇನ್ನೂ ಬೀಟಾ ಹಂತದಲ್ಲಿದ್ದು, ಎಲ್ಲರಿಗೂ ಲಭ್ಯವಾಗುವುದಿಲ್ಲ.

1998ರ ಮಾರ್ಚ್ 20ರಂದು ಯಾಹೂ ಪೇಜರ್ ಎಂಬ ಮೆಸೆಂಜರ್ ಇನ್ಸ್ಟೆಂಟ್ ಮೆಸೆಂಜರ್ ಲೋಕದಲ್ಲಿ ಮೊದಲು ಪ್ರಾರಂಭವಾಯಿತು. ಇಮೋಜಿ, ಸಂಕ್ಷಿಪ್ತ ಅಕ್ಷರಗಳನ್ನು ಬಳಸಿ ಚಾಟ್ ಮಾಡುವುದನ್ನು ಮೊದಲು ಕಲಿಸಿದ್ದೇ ಈ ‘ಯಾಹೂ ಮೆಸೆಂಜರ್’.

ಆದ್ರೆ ಈಗ ಹೊಸದಾಗಿ ಬಂದಿರುವ ಯುವ ಮೆಸೆಂಜರ್ ಗಳಾದ ಫೇಸ್ಬುಕ್, ವ್ಯಾಟ್ಸ್ ಆ್ಯಪ್ , ಗೂಗಲ್ ಚಾಟ್, ವಿಚಾಟ್, ಹೈಕ್ ಮುಂತಾದವುಗಳ ಎದುರು ಸ್ಪರ್ಧೆ ನಡೆಸಲಾಗದೆ ಹಿರಿಯ ಯಾಹೂ ಮೆಸೆಂಜರ್ ತನ್ನ ಯಾನವನ್ನು ಮುಗಿಸುತ್ತಿದೆ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money