Breaking News
Home / Breaking News / ನಿಜವಾದ ‘Unlimited’ ಅಂದ್ರೆ ಇದೇ; ಜಿಯೋಗಿಂತಲೂ ಅಗ್ಗದಲ್ಲಿ ಬಂದಿದೆ ಏರ್’ಟೆಲ್ ನ ಹೊಸ ‘Unlimited’ ಆಫರ್!

ನಿಜವಾದ ‘Unlimited’ ಅಂದ್ರೆ ಇದೇ; ಜಿಯೋಗಿಂತಲೂ ಅಗ್ಗದಲ್ಲಿ ಬಂದಿದೆ ಏರ್’ಟೆಲ್ ನ ಹೊಸ ‘Unlimited’ ಆಫರ್!

ಜಿಯೋ ಈ ಆಫರ್ ತಂದ್ರೆ ಅದನ್ನು ಮೀರಿಸುವಂತಹ ಇನ್ನೊಂದು ಆಫರ್ ಏರ್ ಟೆಲ್ ತರುತ್ತದೆ, ಮತ್ತೆ ಅದಕ್ಕೆ ಸಡ್ಡು ಹೊಡೆಯಲು ಜಿಯೋ ಇನ್ನೊಂದು ಹೊಸ ಯೋಜನೆಯೊಂದಿಗೆ ಬರುತ್ತದೆ, ಇದಕ್ಕೆ ಕೊನೆಯೇ ಇಲ್ಲವೇನೋ? ಏರ್’ಟೆಲ್ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪಣ ತೊಟ್ಟರೆ ಜಿಯೋ ಹೊಸ ಗ್ರಾಹಕರನ್ನು ಸೆಳೆಯುವ ಯೋಜನೆಯಲ್ಲಿದೆ.

ಈಗ ಜಿಯೋದ ರೂ 999 ಆಫರ್ಗೆ ಟಕ್ಕರ್ ಕೊಡಲು ಏರ್’ಟೆಲ್ ರೂ 995 ರ ಹೊಸ ಆಫರ್ ನ್ನು ಬಿಡುಗಡೆ ಮಾಡಿದೆ. ಈ ಆಫರ್ 6 ತಿಂಗಳ ಅವಧಿಯವರೆಗೆ ಇದ್ದು, ಇಂಟರ್ ನೆಟ್ ಬಳಕೆದಾರರಿಗಿಂತಲೂ, ಹೆಚ್ಚು ಕರೆ ಮಾಡುವ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ. ಇದು ನೀವು ಪದೇ ಪದೇ ರೀಚಾರ್ಜ್ ಮಾಡುವ ರಗಳೆಯನ್ನು ತಪ್ಪಿಸುತ್ತದೆ.

ರೂ. 995 ಆಫರ್ ನಲ್ಲಿ ಏನೇನಿದೆ?

 

ಈ ರೂ 995 ರ ಯೋಜನೆಯಲ್ಲಿ ಯಾವುದೇ ನಿಗದಿತ ವೇಗ, ಅವಧಿ, ಸಮಯ ಇರುವುದಿಲ್ಲ… ಇದರಲ್ಲಿ ಎಲ್ಲವೂ ಅನಿಯಮಿತ. ಇದರಲ್ಲಿ ನಿಮಗೆ ತಿಂಗಳಿಗೆ 1 ಜಿಬಿ 3ಜಿ/4ಜಿ ಡೇಟಾ ಅಂದರೆ 6 ತಿಂಗಳಿಗೆ 6ಜಿಬಿ ಡೇಟಾ ದೊರೆಯುತ್ತದೆ. ದಿನಕ್ಕೆ 100 ಎಸ್ಎಮ್ಎಸ್, ಅನಿಯಮಿತ ಲೋಕಲ್, ಸ್ಥಳೀಯ ಮತ್ತು ಲೋಕಲ್ ಕರೆಗಳು ಲಭ್ಯವಿರುತ್ತದೆ.

ಈ ಹಿಂದೆ ವಾಯ್ಸ್ ಕರೆಯನ್ನು ಉಚಿತವಾಗಿ ನೀಡುವ ಸಂದರ್ಭದಲ್ಲಿ ಏರ್‌ಟೆಲ್ ಮಿತಿಗಳನ್ನು ವಿಧಿಸುತ್ತಿದ್ದರೆ, ಈ ಬಾರಿ ತನ್ನ ವಾಯ್ಸ್ ಕರೆಯ ಮೇಲೆ ಯಾವುದೇ ಮಿತಿಗಳನ್ನು ಹೇರಿಲ್ಲ ಮತ್ತು ಬಳಕೆದಾರರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿದೆ.

ರೂ 999 ಆಫರ್:

ಇದು ಮಾತ್ರವಲ್ಲದೆ, ಏರ್’ಟೆಲ್ ನಲ್ಲಿ ಇನ್ನೊಂದು ರೂ 999ರ ಪ್ಲ್ಯಾನ್ ಕೂಡ ಇದೆ. 3 ತಿಂಗಳ ಅವಧಿಯ ಈ ಪ್ಲ್ಯಾನ್ ನಲ್ಲಿ ಒಟ್ಟು 60ಜಿಬಿ 3ಜಿ/4ಜಿ ಡೇಟಾ ಲಭ್ಯವಿರುತ್ತದೆ. ಅಲ್ಲದೆ, ಅನಿಯಮಿತ ವಾಯ್ಸ್ ಕರೆಗಳು ಮತ್ತು 100 ಎಸ್ಎಮ್ಎಸ್ ಗಳು ಉಚಿತವಾಗಿ ದೊರೆಯಲಿದೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money