Breaking News
Home / Breaking News / ಮತ್ತೆ ಜಿಯೋ ಹವಾ; ಈ ಬಾರಿ ಬರ್ತಿದೆ ಜಿಯೋ ಫೋನ್2 – ಅದ್ಭುತ ಫೀಚರ್’ಗಳೊಂದಿಗೆ.. ಬೆಲೆ ಎಷ್ಟು?

ಮತ್ತೆ ಜಿಯೋ ಹವಾ; ಈ ಬಾರಿ ಬರ್ತಿದೆ ಜಿಯೋ ಫೋನ್2 – ಅದ್ಭುತ ಫೀಚರ್’ಗಳೊಂದಿಗೆ.. ಬೆಲೆ ಎಷ್ಟು?

ಕಳೆದ ವರ್ಷ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದ ಜಿಯೋ ಈಗ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಲು ಬರ್ತಿದೆ.  ರಿಲಯನ್ಸ್ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್ ನ 41ನೇ ವಾರ್ಷಿಕ ಸಮಾವೇಶದಲ್ಲಿ ಏಕಕಾಲದಲ್ಲಿ  ಹತ್ತು ಹಲವು ಅದ್ಭುತ ಘೋಷಣೆಗಳನ್ನು ಮಾಡಿರುವ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ ದೇಶದ ಜನತೆಗೆ ಆಶ್ಚರ್ಯ ಉಂಟುಮಾಡಿದ್ದಾರೆ.

ಅದರಲ್ಲಿ ಮುಖ್ಯವಾದುದುದು ಜಿಯೋ 2 ಫೋನ್; ಬನ್ನಿ ಇದರ ವೈಶಿಷ್ಟಯಗಳೇನು ತಿಳಿದುಕೊಳ್ಳೋಣ;

ಜಿಯೋ 2 ಫೋನ್;ಬೆಂಬಲ:

2 ವರ್ಷಗಳ ಹಿಂದೆ ಜಿಯೋ ಫೋನ್ ಲಾಂಚ್ ಮಾಡಿದ್ದರೂ ಅದು ನಿರೀಕ್ಷಿಸಿದ ರೀತಿಯಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಈಗ ಹೊರತಂದಿರುವ ಜಿಯೋ 2 ಫೋನ್ ಬ್ಲ್ಯಾಕ್ ಬೆರ್ರಿ ಫೋನ್ ವಿನ್ಯಾಸವನ್ನು ಹೊಂದಿದ್ದು, ವಾಟ್ಸ್ ಆ್ಯಪ್, ಫೇಸ್ ಬುಕ್, ಯೂ ಟ್ಯೂಬ್ ಆ್ಯಪ್ ಗಳು ಲಭ್ಯವಿರುತ್ತದೆ.

ಬ್ಯಾಟರಿ:

ಇನ್ನೊಂದು ವೈಶಿಷ್ಟ್ಯವೆಂದರೆ ಈ ಆ್ಯಪ್ ಗಳನ್ನು ವಾಯ್ಸ್ ಕಮಾಂಡ್ ಮೂಲಕವೂ ಬಳಸಬಹುದಾಗಿದೆ. ತಿಂಗಳಿಗೆ 20 ಕೋಟಿ ವಾಯ್ಸ್ ಕಮಾಂಡ್ ಗಳು ಸೃಷ್ಟಿಯಾಗುತ್ತವೆ ಎಂದು ರಿಲಯನ್ಸ್ ಹೇಳಿದೆ.

ಕ್ಯಾಮೆರಾ:

ಈ ಫೋನ್  ಭಾರತದ 24 ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು 2 ಹೈ ಎಂಡ್ ಫೀಚರ್ ಗಳನ್ನು ಹೊಂದಿದ್ದು ಹಾರಿಝಾಂಟಲ್ ಸ್ಕ್ರೀನ್ ವ್ಯೂವಿಂಗ್ ಫೀಚರ್ ಕೂಡ ಇದೆ. ಇನ್ನು 2MP ರಿಯರ್ ಕ್ಯಾಮರಾ ಮತ್ತು  VGA ಫ್ರಂಟ್ ಕ್ಯಾಮರಾ ಕೂಡ ಹೊಂದಿದೆ.

ಬ್ಲ್ಯಾಕ್‌ಬೆರಿಗೆ ಹೋಲುವ ವಿನ್ಯಾಸ

ಈ ಫೋನ್ ಆಗಸ್ಟ್ 15ರಿಂದ ಬಳಕೆದಾರರಿಗೆ ಲಭ್ಯವಿದ್ದು, ಆರಂಭಿಕ ಬೆಲೆ 2,999 ರೂ ಎಂದು ನಿಗದಿಯಾಗಿದೆ.  ಅಷ್ಟು ಮಾತ್ರವಲ್ಲದೆ, ಜಿಯೋ ಈಗ ಹೊಸ ಮಾನ್ಸೂನ್ ಹಂಗಾಮ ಯೋಜನೆ ಜಾರಿ ಮಾಡಿದ್ದು, ಜುಲೈ 21ರ ಬಳಿಕ ಗ್ರಾಹಕರು ತಮ್ಮಲ್ಲಿರುವ ಯಾವುದೇ ಫೀಚರ್ ಫೋನನ್ನು ಜಿಯೋ ಫೋನ್ ನೊಂದಿಗೆ 501 ರೂ ಪಡೆಯಬಹುದಾಗಿದೆ.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money