Breaking News
Home / Breaking News / ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯಲ್ಲಿ ‘ಜಿಯೋ-ಫೈ ಹಾಟ್’ಸ್ಪಾಟ್’; ಖರೀದಿಸಲು ಇದು ಸುಸಮಯ!

ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯಲ್ಲಿ ‘ಜಿಯೋ-ಫೈ ಹಾಟ್’ಸ್ಪಾಟ್’; ಖರೀದಿಸಲು ಇದು ಸುಸಮಯ!

ಇಂಟರ್’ನೆಟ್ ಪ್ರೀಯರಿಗೆ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಈಗ ಮತ್ತೊಂದು ಭರ್ಜರಿ ಆಫರ್ ನೀಡುತ್ತಿದೆ. ಈಗ ಜಿಯೋ ಸಿಮ್ ನಲ್ಲಿ ಅಲ್ಲ, ಬದಲಾಗಿ ತನ್ನ ಜಿಯೋ-ಫೈ ಹಾಟ್’ಸ್ಪಾಟ್ ನಲ್ಲಿ ಈ ಬಾರಿ ಹೊಸ ಆಫರ್ ನ್ನು ಹೊರತಂದಿದೆ.

ನಿಮಗೀಗಾಲೇ ಗೊತ್ತು… ಜಿಯೋ-ಫೈ 4ಜಿ ರೌಟರ್ ಮೊದಲು ಪರಿಚಯಿಸಿದಾಗ 1999 ರೂ ಗೆ ಲಭ್ಯವಿತ್ತು… ನಂತರ 1 ವರ್ಷ ಆದ ಮೇಲೆ ಅಂದ್ರೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಇದರ ಬೆಲೆಯನ್ನು 999ರೂ ಗೆ ಇಳಿಕೆ ಮಾಡಲಾಗಿತ್ತು.

ಆದರೆ ಈಗ ಇದೇ 999ರೂ ಬೆಲೆಯ ಜಿಯೋಫೈ 4ಜಿ ರೌಟರ್ ಖರೀದಿಸುವಾಗ ನೀವು 500 ರೂ ಕ್ಯಾಷ್ ಬ್ಯಾಕ್ ಪಡೆಯಲಿದ್ದೀರಿ. ಅಂದರೆ ಈಗ ನಿಮಗೆ ಜಿಯೋಫೈ ಕೇವಲ 499ರೂ ಲಭ್ಯವಾಗುತ್ತದೆ.

ಈ ಜಿಯೋಫೈ ಹಾಟ್ ಸ್ಪಾಟ್ ನೊಂದಿಗೆ ಹೊಸ ಪೋಸ್ಟ್’ಪೇಯ್ಡ್ ಸಿಮ್ ಕೂಡ ದೊರೆಯುತ್ತದೆ. ಅದರ ಜೊತೆಗೆ ನೀವು 199ರೂ ಪೋಸ್ಟ್’ಪೇಯ್ಡ್ ಪ್ಲ್ಯಾನ್ ಖರೀದಿಸುವುದರ ಜೊತೆಗೆ ಮುಂದಿನ 12 ತಿಂಗಳುಗಳವರೆಗೆ ಬಿಲ್ ಪಾವತಿ ಮಾಡಬೇಕು. ಹೀಗೆ 12 ತಿಂಗಳ ಬಳಿಕ ನಿಮಗೆ 500ರೂ ಕ್ಯಾಷ್ ಬ್ಯಾಕ್ ನಿಮ್ಮ ಖಾತೆಗೆ ಸೇರುತ್ತದೆ. ಇದನ್ನು ನಿಮ್ಮ ನಂತರದ ಬಿಲ್ ಸೈಕಲ್ ನಲ್ಲಿ ಬಳಕೆ ಮಾಡಬಹುದು.

ಈ 199ರೂ ಪೋಸ್ಟ್ ಪೇಯ್ಡ್ ಪ್ಲ್ಯಾನ್ ನಲ್ಲಿ ಅನಿಯಮಿತ ಎಸ್ಎಂಎಸ್, ಉಚಿತ ಕರೆ ಮತ್ತು 25 ಜಿಬಿ ಡೇಟಾ ದೊರೆಯುತ್ತದೆ. ಹಾಗೆಯೇ ಅಂತರಾಷ್ಟ್ರೀಯ ಕರೆಗಳು ಕೇವಲ 50 ಪೈಸೆಗೆ ಲಭ್ಯವಿದೆ.

ಇದೀಗಷ್ಟೇ ಈ ಹೊಸ ಕ್ಯಾಷ್ ಬ್ಯಾಕ್ ಆಫರ್ ಪ್ರಕಟಿಸಲಾಗಿದ್ದು, ಆನ್ ಲೈನ್ ನಲ್ಲಿ ಖರೀದಿಸ ಬಯಸುವವರು ಅಮೇಜಾನ್ ಮತ್ತು ಫ್ಲಿಪ್’ಕಾರ್ಟ್ ನಲ್ಲಿ ಖರೀದಿಸಬಹುದು.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money