Breaking News
Home / Breaking News / ರಿಲಯನ್ಸ್ ಬಿಗ್ ಟಿವಿ ಯಿಂದ ಭರ್ಜರಿ ಫ್ರೀ ಆಫರ್- ಇದರಲ್ಲಿ ಎಲ್ಲವೂ ಉಚಿತ; ಬುಕ್ ಮಾಡುವುದು ಎಲ್ಲಿ, ಯಾವಾಗ, ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ರಿಲಯನ್ಸ್ ಬಿಗ್ ಟಿವಿ ಯಿಂದ ಭರ್ಜರಿ ಫ್ರೀ ಆಫರ್- ಇದರಲ್ಲಿ ಎಲ್ಲವೂ ಉಚಿತ; ಬುಕ್ ಮಾಡುವುದು ಎಲ್ಲಿ, ಯಾವಾಗ, ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕಳೆದ ಒಂದು ವರ್ಷದ ಹಿಂದೆ ಟೆಲಿಕಾಂ ವಲಯಕ್ಕೆ ಜಿಯೋ ಕಾಲಿಟ್ಟ ನಂತರ ನಡೆದ ದರಸಮರದ ಫಲವಾಗಿ ಗ್ರಾಹಕರು ಉಚಿತವಾಗಿ ಅಥವಾ ಅತೀ ಕಡಿಮೆ ಬೆಲೆಗೆ  ಕರೆಗಳನ್ನು ಮಾಡುವುದು ಮಾತ್ರವಲ್ಲದೆ, ಡೇಟಾವನ್ನು ಮನಸೋಇಚ್ಛೆ ಉಪಯೋಗಿಸುವ ಅವಕಾಶ ಒದಗಿ ಬಂತು. ನಂತರ ಎಲ್ಲಾ ಮೊಬೈಲ್ ಕಂಪನಿಗಳು ತಮ್ಮ ಬೆಲೆಯಲ್ಲಿ ಇಳಿಕೆ ಮಾಡಿ ಕ್ರಾಂತಿಯನ್ನೇ ಉಂಟು ಮಾಡಿತ್ತು.

ಈಗ ಇದೇ ಯೋಜನೆ ಟಿವಿ ಕ್ಷೇತ್ರಕ್ಕೂ ಕಾಲಿಡುವಂತಿದೆ. ಈ ಮೂಲಕ ಡಿಜಿಟಲ್ ಕ್ರಾಂತಿಯನ್ನು ಮಾಡಲು ಹೊರಟಿದ್ದಾರೆ ಜಿಯೋ ಮುಖೇಶ್ ಅಂಬಾನಿ ಸಹೋದರರಾದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಬಿಗ್ ಟಿವಿ. ಎಚ್‌ಡಿ ಗುಣಮಟ್ಟದ ಮನರಂಜನಾ ವಾಹಿನಿಗಳನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ರಿಲಯನ್ಸ್ ಬಿಗ್ ಟಿವಿಯ ನಿರ್ದೇಶಕರಾದ ಮಿ.ವಿಜೇಯೆಂದ್ರ ಸಿಂಗ್‌ ತಮ್ಮ ನೂತನ ಯೋಜನೆಯನ್ನು ಪ್ರಕಟಿಸಿದ್ದಾರೆ.

ಏನಿದು ಯೋಜನೆ?

  • ಮಾರ್ಚ್ 1 ರಿಂದ ಜಾರಿಗೆ ಬರಲಿರುವ ಈ ಯೋಜನೆಯಲ್ಲಿ ರಿಲಯನ್ಸ್ ಬಿಗ್ ಟಿವಿ ತನ್ನ ಗ್ರಾಹಕರಿಗೆ ಈ ಎಲ್ಲಾ ಕೊಡುಗೆಗಳನ್ನು ನೀಡಲಿದೆ.
  • ಶುಲ್ಕ ರಹಿತವಾದ 500 ವಾಹಿನಿಗಳು 5 ವರ್ಷಗಳವರೆಗೆ ಉಚಿತ
  • ಶುಲ್ಕ ವಿಧಿಸುವ ಇತರ ಚಾನೆಲ್ ಗಳು 1 ವರ್ಷದವರೆಗೆ ಉಚಿತ
  • HD HEVC ಸೆಟ್‌ ಟಾಪ್‌ ಬಾಕ್ಸ ಸಂಪೂರ್ಣ ಉಚಿತ
  • HD HEVC ಸೆಟ್‌ ಟಾಪ್‌ ಬಾಕ್ಸ್‌ ನೂತನ ರೀತಿಯದ್ದಾಗಿದ್ದು, ಇದರ ಮೂಲಕ USB ರೆಕಾರ್ಡಿಂಗ್ ಪೋರ್ಟ್‌, ಯೂ ಟ್ಯೂಬ್, ರೆಕಾರ್ಡಿಂಗ್‌ ಮತ್ತು ವಾಹಿನಿಗಳನ್ನು ಒಟ್ಟೊಟ್ಟಿಗೆ ನೋಡಬಹುದು.

ಬುಕ್ ಮಾಡುವುದು ಹೇಗೆ?

  • ಮಾರ್ಚ್ 1, 2018ರಂದು 10 ಗಂಟೆಯಿಂದ ಫ್ರೀ ಬುಕಿಂಗ್ ಪ್ರಾರಂಭವಾಗಲಿದೆ. www.reliancedigitaltv.comಗೆ ಲಾಗಿನ್ ಆಗಿ ಬುಕಿಂಗ್ ಮೊತ್ತ 499ರೂ ಪಾವತಿ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು.
  • ಸೆಟ್ ಅಪ್ ಬಾಕ್ಸ್, ಔಟ್ ಡೋರ್ ಯೂನಿಟ್ ನಿಮ್ಮ ಕೈ ಸೇರಿದ ಬಳಿಕ ಉಳಿದ 1,500 ರೂ ಗಳನ್ನು ಪಾವತಿಸಿದರೆ, ಐದು ವರ್ಷ ಫ್ರೀ ಚಾನೆಲ್ ಗಳನ್ನು ಮತ್ತು ಒಂದು ವರ್ಷ ಪೇಯ್ಡ್ ಚಾನೆಲ್ ಗಳನ್ನು ಎಚ್ ಡಿ ಯಲ್ಲಿ ಉಚಿತವಾಗಿ ನೋಡಬಹುದು.

ಒಂದು ವರ್ಷದ ಬಳಿಕ ನಿಮಗೆ ರಿಲಯನ್ಸ್ ಬಿಗ್ ಟಿವಿಯನ್ನು ಮುಂದುವರಿಸಬೇಕೆಂದಿದ್ದರೆ, ಮಾಸಿಕ 300 ರೂ.ಗಳನ್ನು ಪಾವತಿ ಮಾಡಿ ಎಲ್ಲಾ ಪೇಯ್ಡ್ ಚಾನೆಲ್ ಗಳನ್ನು ವೀಕ್ಷಿಸಬಹುದು. ಅಲ್ಲದೆ, ಬುಕಿಂಗ್‌ ಮಾಡಬೇಕಾದರೆ ಹಾಗು ಸೆಟ್ ಟಾಪ್ ಬಾಕ್ಸ್‌ ಅನ್ನು ಪಡೆಯಬೇಕಾದರೆ ನಿಮ್ಮಿಂದ ಪಡೆದ ಮೊತ್ತವನ್ನು ಮುಂದಿನ ಎರಡು ವರ್ಷಗಳ ಕಾಲ ಲಾಯಲ್ಟಿ ರೂಪದಲ್ಲಿ 1999. ರೂ.ಗಳನ್ನು ಮರುಪಾವತಿ ಮಾಡಲಾಗುತ್ತದೆ ಎಂದು ರಿಲಯನ್ಸ್ ಬಿಗ್ ಟಿವಿ ತಿಳಿಸಿದೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money