Breaking News
Home / Breaking News / ನಿಮ್ಮ ವಾಟ್ಸ್ಆ್ಯಪ್ ನಲ್ಲಿ ಈ ಮೆಸೇಜ್ ಬರುತ್ತಿದೆಯೇ?; ಹಾಗಾದ್ರೆ ಪ್ಲೀಸ್ ಓಪನ್ ಮಾಡ್ಲೇಬೇಡಿ!

ನಿಮ್ಮ ವಾಟ್ಸ್ಆ್ಯಪ್ ನಲ್ಲಿ ಈ ಮೆಸೇಜ್ ಬರುತ್ತಿದೆಯೇ?; ಹಾಗಾದ್ರೆ ಪ್ಲೀಸ್ ಓಪನ್ ಮಾಡ್ಲೇಬೇಡಿ!

ಈಗ ಜಗತ್ತಿನಾದ್ಯಂತ ಎಲ್ಲಾ ಸಂವಹನಗಳು ನಡೆಯುವುದು ವ್ಯಾಟ್ಸ್ಆ್ಯಪ್ ಮೂಲಕವೇ… ಗೆಳೆಯರು, ಗ್ರೂಪ್ ಚಾಟ್ಸ್ ಹೀಗೆ ದಿನಕ್ಕೆ ನೂರಾರು ಮೆಸೇಜ್ ಗಳು ನಮ್ಮ ವ್ಯಾಟ್ಸ್ಆ್ಯಪ್ ಗೆ ಹರಿದು ಬರುತ್ತಾನೇ ಇರುತ್ತದೆ. ಅದನ್ನೆಲ್ಲಾ ಹಿಂದು ಮುಂದು ನೋಡದೆ ನಾವು ಓಪನ್ ಮಾಡ್ತೇವೆ.

ಆದರೆ ಈವರೆಗೆ ಸುರಕ್ಷಿತ ಎಂದು ನಾವು ಪರಿಗಣಿಸುತ್ತಿದ್ದ ನಮ್ಮ ಫೇವರಿಟ್ ವ್ಯಾಟ್ಸ್ಆ್ಯಪ್ ಗೂ ಕೂಡ ಕಳ್ಳ ಕಾಕರು ಎಂಟ್ರಿ ಕೊಟ್ಟಾಗಿದೆ. ಪ್ರಪಂಚಾದ್ಯಂತ ಅತೀ ಹೆಚ್ಚು ಬಳಕೆಯಾಗುವ ಈ ಮೆಸೆಂಜರ್ ಗೆ ಕೆಲವು ಕಳ್ಳರು ಕ್ರಿಮಿಕೀಟಗಳನ್ನು ಹರಿಯಬಿಡುತ್ತಾರೆ. ಇದರಿಂದ ನಿಮ್ಮ ಫೋನ್ಗೆ ಬಹು ದೊಡ್ಡ ತೊಂದರೆಯಾಗಬಹುದು.

ಕೆಲವೊಮ್ಮೆ ಈ ತರಹದ ಮೆಸೇಜ್ ಗಳನ್ನು ಓಪನ್ ಮಾಡಿದಾಗ ನಿಮ್ಮ ಫೋನ್ ಹ್ಯಾಂಗ್ ಆಗಬಹುದು, ವ್ಯಾಟ್ಸ್ ಆ್ಯಪ್ ಹ್ಯಾಂಗ್ ಆಗ್ಬಹುದು ಅಥವಾ ಸಂಪೂರ್ಣವಾಗಿ ಕ್ರ್ಯಾಷ್ ಆಗ್ಬಹುದು. ಈ ಹ್ಯಾಂಗ್ ಆಗುವ ಸಮಯದಲ್ಲಿ ನೀವು ನಿಮ್ಮ ಫೋನ್ ಸರಿ ಮಾಡಲು ಪ್ರಯತ್ನಿಸುತ್ತಿರುವಾಗ ಇನ್ನೊಂದು ಕಡೆ ನಿಮ್ಮ ಫೋನ್ ಗೆ ೊಳಗೆ ನುಗ್ಗಿರುವ ಕಳ್ಳರು ಅದೇನೆನು ಮಾಡುತ್ತಾರೋ ನಿಮ್ಮ ಅರಿವಿಗೆ ಈಗಾಗ್ಲೇ ಬಂದಿರ್ಬಹುದು.

ನೀವು ಈಗಾಗಲೇ ‘ಈ ಕಪ್ಪು ಚುಕ್ಕಿಯನ್ನು ಒತ್ತಿ ಮ್ಯಾಜಿಕ್ ನೋಡಿ’ ಎಂಬಂತಹ ಮೆಸೇಜ್ ಗಳು ನಿಮ್ಮ ವಾಟ್ಸ್ಆ್ಯಪ್ ಮೆಸೇಜ್ ಬಾಕ್ಸ್ ಗೆ ಬಂದಿರುವುದನ್ನು ನೋಡಿರಬಹುದು. ಆದರೆ ಇಂಥ ಮೆಸೇಜ್ ಗಳನ್ನು ಓಪನ್ ಮಾಡದೇ ಅಲ್ಲೇ ನಿರ್ಲಕ್ಷಿಸಿಬಿಡಿ. ಯಾಕೆಂದರೆ ಇವುಗಳನ್ನು ಟಚ್ ಮಾಡಿದ ಕೂಡಲೇ ನಿಮ್ಮ ಫೋನ್ ಹ್ಯಾಂಗ್ ಆಗುವ ಸಾಧ್ಯತೆ ಇದೆ.

ಅಲ್ಲದೆ, ಇತ್ತೀಚೆಗೆ ಹರಿದಾಡುತ್ತಿದ್ದ ‘this is very interesting … read more…’ ಎಂಬ ಮೆಸೇಜ್ ಒಂದು ಕಳ್ಳರು ಕಳುಹಿಸಿದ ವೈರಸ್ ನಿಂದ ಕೂಡಿತ್ತು. ಅದನ್ನು ಓಪನ್ ಮಾಡಿದವರು ಅಪಾಯಕ್ಕೆ ಸಿಲುಕಿದ್ದೂ ನಿಜ. ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಪ್ರತೀ ಸೆಕೆಂಡಿಗೆ ಒಬ್ಬ ವ್ಯಕ್ತಿಯಾದರೂ ಈ ಸಮಸ್ಯೆಗೆ ಸಿಲುಕಿದ್ದಾನೆ ಎಂದು ಸಂಶೋಧನೆಗಳು ಹೇಳುತ್ತವೆ.

ಆಜ್ ತಕ್ ಸುದ್ದಿ ಸಂಸ್ಥೆ ಇಂತಹ ಒಂದು ಮೆಸೇಜ್ ನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ಫೋನ್ ಹ್ಯಾಂಗ್ ಆಗಿದ್ದು ಗಮನಕ್ಕೆ ಬಂದಿದೆ. ಇಂತಹ ಮೆಸೇಜ್ ಗಳನ್ನು ಸೃಷ್ಟಿಸಲು ವಿಶೇಷ ಸಾಫ್ಟ್ ವೇರ್ ಗಳನ್ನು ಬಳಸಲಾಗುತ್ತದೆ, ಇಂತಹ ಮೆಸೇಜ್ ಗಳು ಬಿಲಿಯನ್ ಗಟ್ಟಲೆ ಕೋಡಿಂಗ್ ಗಳ ಮೂಲಕ ನಮ್ಮ ಫೋನಿನ ಒಳಗೆ ನುಗ್ಗುತ್ತವೆ. ಆದರೆ ಬರುವುದು ಒಂದು ಚಿಕ್ಕ ಮೆಸೇಜ್ ಆದ್ರೆ ಅದನ್ನು ಒತ್ತಿದರೆ ಗಂಡಾಂತರವೇ ಸಂಭವಿಸಬಹುದು. ಎಚ್ಚರ!

Check Also

ವರ್ಷದ 6 ತಿಂಗ್ಳು ಮಾತ್ರ ತೆರೆದಿರುತ್ತದೆ ಅದ್ವಿತೀಯ ಶಕ್ತಿಯ ಈ ‘ನೆಲ್ಲಿತೀರ್ಥ ಗುಹಾಲಯ’; ಭೇಟಿ ನೀಡಲೇಬೇಕಾದ ಪುಣ್ಯಸ್ಥಳವಿದು!

ದಕ್ಷಿಣ ಕನ್ನಡ ಹತ್ತು ಹಲವು ಶಕ್ತಿಯುತ ದೇವಾಲಯಗಳ ಸಂಗಮ. ಈ ಪ್ರದೇಶವು ತನ್ನ ವೈಶಿಷ್ಟ್ಯಗಳಿಂದ ಜಗತ್ತಿನಲ್ಲಿ ತನ್ನದೇ ಆದ ಒಂದು …

Leave a Reply

Your email address will not be published. Required fields are marked *