ಇತ್ತೀಚೆಗಷ್ಟೇ ಎಲ್ಲವೂ ಉಚಿತ ಎಂದು ಹೇಳಿದ ನಂತರವೂ ಇತರ ನೆಟ್ವರ್ಕ್ಗೆ ಹೊರಹೋಗುವ ಕರೆಗೆ ಶುಲ್ಕ ವಿಧಿಸಿ ಜಿಯೋ ಗ್ರಾಹಕರ ಅವಕೃಪೆಗೆ ಪಾತ್ರವಾಗುತ್ತದೆ ಅನ್ಕೊಂಡರೂ ಅಂಥದ್ದೇನು ನಡೆಯಲಿಲ್ಲ. ಜಿಯೋದಿಂದ ಜಿಯೋಗೆ ಕರೆ ಉಚಿತವಾಗಿದ್ದು, ಇತರ ನೆಟ್ವರ್ಕ್ಗೆ ಮಾತ್ರ ನಿಮಿಷಕ್ಕೆ 6 ಪೈಸೆ ದರ ಪಾವತಿಸಬೇಕಾಗಿದ್ದರಿಂದ ಗ್ರಾಹಕರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ.ಶಾಕಿಂಗ್ ನ್ಯೂಸ್; ಜಿಯೋದಲ್ಲಿ ಇನ್ನು ಮುಂದೆ ಎಲ್ಲವೂ ಉಚಿತವಲ್ಲ, ವಾಯ್ಸ್ ಕಾಲ್ ಗೆ ದುಡ್ಡು ಕೊಡ್ಬೇಕು; ಇದನ್ನು ಓದಿ!!
ಈಗ ಗ್ರಾಹಕರಿಗೆ ಮತ್ತಷ್ಟು ಉಳಿತಾಯ ಮಾಡಿಕೊಳ್ಳಲು ಜಿಯೋ ಇದೀಗ ಹೆಚ್ಚು ಡೇಟಾ, ಹೆಚ್ಚು ವಾಯ್ಸ್, ಹೆಚ್ಚು ಮೌಲ್ಯ ಎಂಬ ಉದ್ದೇಶದೊಂದಿಗೆ ಮತ್ತೊಂದು ‘ಆಲ್-ಇನ್-ಒನ್’ ಪ್ಲಾನ್ಗಳ ಬಿಡುಗಡೆ ಮಾಡಿದೆ. ಈ ಹೊಸ ಪ್ಲ್ಯಾನ್ ಈಗ ಚಾಲ್ತಿಯಲ್ಲಿರುವ ಇತರ ಟೆಲಿಕಾಂ ಕಂಪನಿಗಳ ಪ್ಲ್ಯಾನ್ಗಿಂತ ಶೇ. 20 ರಿಂದ 50 ರವರೆಗೆ ಕಡಿಮೆಯಾಗಿರಲಿದೆ ಎನ್ನಲಾಗಿದೆ.ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ‘ಜಿಯೋ’ ಹಿಂದಿರುವ ಮಾಸ್ಟರ್ ಮೈಂಡ್ ಯಾರದು ಗೊತ್ತೇ?; ಮುಖೇಶ್ ಅಂಬಾನಿ ಬಿಚ್ಚಿಟ್ಟ ಸತ್ಯ!
ಈ ಹೊಸ ಮೂರು ಪ್ಲ್ಯಾನ್ ಗಳು ಅತ್ಯಂತ ಸರಳವಾಗಿದ್ದು, ಗೊಂದಲರಹಿತವಾಗಿದೆ. ಅನಿಯಮಿತ ಧ್ವನಿ ಕರೆ, SMS, ಆಪ್ಗಳ ಜೊತೆಗೆ ಪ್ರತಿದಿನ 2 ಜಿಬಿ ಡೇಟಾವನ್ನೂ ನೀಡುತ್ತದೆ.
ಏನಿದೆ ಹೊಸ ಪ್ಲ್ಯಾನ್ ನಲ್ಲಿ?
222 ಪ್ಲ್ಯಾನ್:
ವ್ಯಾಲಿಡಿಟಿ – 1 ತಿಂಗಳು , ಅನಿಯಮಿತ ಜಿಯೋ ಕರೆ ಮತ್ತು ಎಸ್ಎಂಎಸ್
ಇತರ ನೆಟ್ವರ್ಕ್ ಕರೆ – 1000 ನಿಮಿಷ
ಪ್ರತಿದಿನ 2 GB ಡೇಟಾ
333 ಪ್ಲ್ಯಾನ್:
ವ್ಯಾಲಿಡಿಟಿ – 2 ತಿಂಗಳು , ಅನಿಯಮಿತ ಜಿಯೋ ಕರೆ ಮತ್ತು ಎಸ್ಎಂಎಸ್
ಇತರ ನೆಟ್ವರ್ಕ್ ಕರೆ – 1000 ನಿಮಿಷ
ಪ್ರತಿದಿನ 2 GB ಡೇಟಾ
444 ಪ್ಲ್ಯಾನ್:
ವ್ಯಾಲಿಡಿಟಿ – 3 ತಿಂಗಳು , ಅನಿಯಮಿತ ಜಿಯೋ ಕರೆ ಮತ್ತು ಎಸ್ಎಂಎಸ್
ಇತರ ನೆಟ್ವರ್ಕ್ ಕರೆ – 1000 ನಿಮಿಷ
ಪ್ರತಿದಿನ 2 GB ಡೇಟಾ
ಇದರಿಂದ ಗ್ರಾಹಕರಿಗೆ ಸುಮಾರು 80 ರೂ. ಉಳಿತಾಯವಾಗಲಿದೆ.