Breaking News
Home / Breaking News / ಕಾಮುಕ ‘ಕೈ’ ಮುಖಂಡನ ಕಿರುಕುಳದಿಂದ ಸಿಡಿದೆದ್ದ ಪ್ರತಿಭಾ ಕುಳಾಯಿ; ಸಾರ್ವಜನಿಕರಿಂದ ಧರ್ಮದೇಟು!

ಕಾಮುಕ ‘ಕೈ’ ಮುಖಂಡನ ಕಿರುಕುಳದಿಂದ ಸಿಡಿದೆದ್ದ ಪ್ರತಿಭಾ ಕುಳಾಯಿ; ಸಾರ್ವಜನಿಕರಿಂದ ಧರ್ಮದೇಟು!

ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಜೊತೆ ಅಸಭ್ಯವಾಗಿ ವರ್ತಿಸಿದ ಮಂಗಳೂರಿನ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ.

ಸಾಯಲು ಬಯಸುವವರು ಸಂಘ ಪರಿವಾರ ಸೇರಿ: ಪ್ರತಿಭಾ ಕುಳಾಯಿ

ನಿನ್ನೆ ರಾತ್ರಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಅವರ ಕಛೇರಿಯಲ್ಲಿ ಇದ್ದ ಸಂದರ್ಭದಲ್ಲಿ ಪ್ರತಿಭಾ ಕುಳಾಯಿ ಅವರ ಜೊತೆ ಅತ್ಯಂತ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ರೊಚ್ಚಿಗೆದ್ದ ಕುಳಾಯಿ ಶಾಸಕರ ಮುಂದೆಯೇ ಸತ್ತಾರ್ ಗೆ ಹಿಡಿದು ಥಳಿಸಲು ಮುಂದಾದಾಗ ಅಲ್ಲಿದ್ದ ಕಾರ್ಯಕರ್ತರು ಅವರನ್ನು ತಡೆದು ತಾವು ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ನಂತರ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದಾಗ ಹೊರಗಡೆಯಿಂದ ಎಲ್ಲಾ ಯುವಕರು ಸೇರಿ ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಈ ಬಗ್ಗೆ ಮಾತಾಡಿದ ಪ್ರತಿಭಾ ಕುಳಾಯಿ ‘ಆತ ನನ್ನದೇ ಪಕ್ಷದ ಮುಖಂಡ, ಆದರೂ ನಾನು ಆತನ ವಿರುದ್ಧ ಮಾತಾಡುತ್ತಿದ್ದೇನೆ. ಕಳೆದ 5 ವರ್ಷಗಳಿಂದ ಆತ ನನಗೆ ಮಾನಸಿಕ ಕಿರುಕುಳ ಕೊಡುತ್ತಿದ್ದಾನೆ. ಮೂರು ವರ್ಷದ ಹಿಂದೆ ಅವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆತನ ಕೈ ಕತ್ತರಿಸಿದ್ದರು’ ಎಂದವರು ತಿಳಿಸಿದ್ದಾರೆ.

‘ನಾನು ಆತನಿಗೆ ತುಂಬಾ ಕೆಟ್ಟದಾಗಿ ಬೈದಿದ್ದೇನೆ. ನನ್ನ ಬಳಿ ಎಲ್ಲಾ ಫೂಟೇಜ್ ಇದೆ. ಧೈರ್ಯ ಇದ್ದರೆ, ನನ್ನದು ತಪ್ಪು ಎಂದಾದರೆ ಆತ ನನ್ನ ವಿರುದ್ಧ ದೂರು ದಾಖಲಿಸಲಿ. ನಾನು ಎದುರಿಸುತ್ತೇನೆ. ನನಗೆ ನನ್ನ ಪಕ್ಷದ ಮುಖಂಡರ, ಪತಿಯ ಸಹಕಾರ ಇದೆ’ ಎಂದು ತಿಳಿಸಿದ್ದಾರೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money