Breaking News
Home / Breaking News / ಮಂಗಳೂರು: ಮಹಿಳೆಗೆ 16.69 ಲಕ್ಷ ಪಂಗನಾಮ ಹಾಕಿದ ಫೇಸ್’ಬುಕ್ ಗೆಳೆಯ!

ಮಂಗಳೂರು: ಮಹಿಳೆಗೆ 16.69 ಲಕ್ಷ ಪಂಗನಾಮ ಹಾಕಿದ ಫೇಸ್’ಬುಕ್ ಗೆಳೆಯ!

ಈ ಸಾಮಾಜಿಕ ತಾಣಗಳಲ್ಲಿ ಜನ ಎಷ್ಟು ಕಳೆದುಹೋಗುತ್ತಾರೆಂದರೆ ತಾವು ಇದರಲ್ಲಿ ಮುಳುಗಿ ಹೋಗುವುದೂ ಅವರಿಗೆ ಅವರಿಗೆ ಗೊತ್ತಾಗುವುದಿಲ್ಲ. ಈ ಫೇಸ್’ಬುಕ್ ವಂಚನೆಗಳು ದಿಂಪ್ರತಿ ಸುದ್ದಿಯಾಗುತ್ತಿರುತ್ತವೆ. ಆದ್ರೂ ಜನ ಎಚ್ಚೆತ್ತುಕೊಳ್ಳುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ನಿದರ್ಶನ.

ಮಂಗಳೂರಿನ ಮಹಿಳೆಯೊಬ್ಬರಿಗೆ ಮೇ 3ರಂದು ಫೇಸ್’ಬುಕ್ ನಲ್ಲಿ ಜಾಕ್ ಕೊಲ್ಮನ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆತನ ಗೆಳೆತನವನ್ನು ಅಕ್ಸೆಪ್ಟ್ ಮಾಡಿದ ಮಹಿಳೆ ಆತನ ಜೊತೆ ದಿನಾ ಚಾಟಿಂಗ್ ನಡೆಸುತ್ತಿದ್ದರು. ಹೀಗೆ ಮಾತಾಡುತ್ತಾ, ಮಹಿಳೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ಆತ ಅವರಿಗೆ ಬಹುಮಾನವೊಂದನ್ನು ಕಳಿಸುವುದಾಗಿ ಹೇಳಿದ.

ನಿಮ್ಮ ಜೀವನಕ್ಕೆ ಅನುಕೂಲವಾಗಲು ಕೆಲವು ಬೆಲೆಬಾಳುವ ವಸ್ತು ಮತ್ತು 20 ಸಾವಿರ ಪೌಂಡ್ (18 ಲಕ್ಷ ರೂ) ಗಳನ್ನು ಉಡುಗೊರೆಯಾಗಿ ಕಳಿಸುತ್ತೇನೆಂದು ಹೇಳಿದ್ದಾನೆ… ಬೇಡ ಬೇಡವೆಂದು ಹೇಳಿದರೂ ಆತನ ಒತ್ತಾಯಕ್ಕೆ ಮಣಿದ ಮಹಿಳೆ ಓಕೆ ಎಂದಿದ್ದರು.

ಕೊನೆಗೆ ಮೇ 9ರಂದು ದೆಹಲಿ ಕಸ್ಟಮ್ಸ್ ಆಫೀಸ್ ನಿಂದ ಅಧಿಕಾರಿ ಎಂದು ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಪಾರ್ಸೆಲ್ ಒಂದು ದೆಹಲಿ ಏರ್’ಪೋರ್ಟ್ ನಲ್ಲಿದೆ.ಇದಕ್ಕಾಗಿ ನೀವು ಈಗಲೇ ದಂಡ ಕಟ್ಟಬೇಕು, ಇಲ್ಲವಾದರೆ ನಿಮಗೆ ತಂದರೆಯಿದೆ, ಎಂದಾಗ ನಂಬಿದ ಮಹಿಳೆ ಹಲವು ಬಾರಿ ಸ್ವಲ್ಪ ಸ್ವಲ್ಪ ಹಣದಂತೆ ಒಟ್ಟು 16,69,00 ರೂ ಎನ್ಇಎಫ್ಟಿ ಮಾಡಿದ್ದಾರೆ.

ಆದರೆ ಅಷ್ಟು ಹಣ ಪಾವತಿಸಿದ ನಂತರ ಉಡುಗೊರೆ ಬರದೇ ಇರುವುದು ಮತ್ತು ಆ ನಂಬರ್ ಕೂಡ ಸ್ವಿಚ್ ಆಫ್ ಆಗಿರುವುದು ಕಂಡುಬಂದ ಮೇಲೆ ಅನುಮಾನಗೊಂಡ ಮಹಿಳೆ ಈಗ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money