Breaking News
Home / Breaking News / ಕರ್ನಾಟಕದಲ್ಲಿರುವುದು ‘ಟೆನ್ ಪರ್ಸೆಂಟ್ ಕಮಿಷನ್ ಸರ್ಕಾರ’ : ಮೋದಿ

ಕರ್ನಾಟಕದಲ್ಲಿರುವುದು ‘ಟೆನ್ ಪರ್ಸೆಂಟ್ ಕಮಿಷನ್ ಸರ್ಕಾರ’ : ಮೋದಿ

‘ಕರ್ನಾಟಕ ಸರಕಾರ ಸರಕಾರ ಕಮಿಷನ್ ಆಸೆಗೆ ಹೊಸ ಹೊಸ ಭಾಗ್ಯಗಳನ್ನು ಹೊರ ತರುತ್ತಿದೆಯೇ ಹೊರತು ಬಡವರ ಮೇಲಿನ ಕಾಳಜಿಯಿಂದಲ್ಲ. ಇಲ್ಲಿ ಕಮಿಷನ್ ಕೊಡದೇ ಯಾವುದೇ ಕೆಲಸವೂ ನಡೆಯುವುದಿಲ್ಲ. ಇದೊಂದು ‘ಹತ್ತು ಪರ್ಸೆಂಟ್ ಕಮಿಷನ್ ಸರಕಾರ’ ಎಂದು ಸಿದ್ಧರಾಮಯ್ಯ ಸರಕಾರವನ್ನು ಪ್ರಧಾನಿ ಮೋದಿ ಲೇವಡಿ ಮಾಡಿದರು.

ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸೇರಿದ್ದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಕರ್ನಾಟಕಕ್ಕೆ ಕೇಂದ್ರ ಕೊಟ್ಟ ಅನುದಾನಗಳನ್ನು ಮತ್ತು ಅದನ್ನು ರಾಜ್ಯ ಸರಕಾರ ದುರಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಅಂಕಿ ಸಂಖ್ಯೆಗಳ ಸಮೇತ ವಿವರಣೆ ನೀಡಿದರು.

ತಮ್ಮ ಒಂದು ಗಂಟೆಯ ಭಾಷಣದಲ್ಲಿ ರಾಜ್ಯಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ದೇಶದೆಲ್ಲೆಡೆ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಹೆಮ್ಮೆಯಿದೆ. ಆದರೆ ಇಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದ ಭ್ರಷ್ಟಚಾರ ಮತ್ತು ದುರಾಡಳಿತದಿಂದಾಗಿ ಅದರ ಗೌರವ ಕುಸಿಯುವಂತಾಗಿದೆ.’

‘ಪ್ರಧಾನಮಂತ್ರಿ ಆವಾಸ್‌, ಸ್ಮಾರ್ಟ್‌ ಸಿಟಿ ಸೇರಿದಂತೆ ಕೇಂದ್ರ ಪ್ರಾಯೋಜಿತ ಹಲವು ಯೋಜನೆ ಅನುಷ್ಠಾನದಲ್ಲಿ ಕಾಂಗ್ರೆಸ್‌ ಸರಕಾರ ವೈಫಲ್ಯ ಕಂಡಿದೆ. ಈ ಸರಕಾರ ಈಗ ಹೊರಹೋಗುವ ಹಾದಿಯಲ್ಲಿದೆ. ಅಭಿವೃದ್ಧಿ ಹೀನ ಹಾಗೂ ಭ್ರಷ್ಟಾಚಾರದಲ್ಲಿ ವಿವಿಧ ಸಾಧನೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಬೇಕು. ಇಲ್ಲಿ ನಡೆಯುತ್ತಿರುವ ಯುವಕರ ಸರಣಿ ಹತ್ಯೆಗೆ ಜನರು ಮತದಾನದ ಮೂಲಕವೇ ಉತ್ತರ ನೀಡಬೇಕು’ ಎಂದು ಕರೆ ನೀಡಿದರು.

Check Also

ಒಣಕೆಮ್ಮು ಸಮಸ್ಯೆಯಿಂದ ತಕ್ಷಣ ಮುಕ್ತಿ ಪಡೆಯಬೇಕೆ? ಇಲ್ಲಿದೆ ನೋಡಿ ಕೆಲವು ಮನೆಮದ್ದುಗಳು!

ನೀವು ನಿಮ್ಮ ಕಛೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಯಾವುದೋ ಮೀಟಿಂಗ್ ಗೆ ಕೂತಿದ್ದೀರಿ. ಇನ್ನೇನು ನೀವು ಪ್ರೆಸೆಂಟೇಶನ್ ಕೊಡುವ ಸಮಯ. ಆಗಲೇ …

Leave a Reply

Your email address will not be published. Required fields are marked *

Powered by keepvid themefull earn money