Breaking News
Home / Breaking News / ಕಾವೇರಿ ಅಂತಿಮ ತೀರ್ಪು; ಕರ್ನಾಟಕಕ್ಕೆ ಹೆಚ್ಚು, ತಮಿಳುನಾಡಿಗೆ ಕಡಿಮೆ ನೀರು; 15 ವರ್ಷ ಬದಲಾವಣೆ ಇಲ್ಲ!

ಕಾವೇರಿ ಅಂತಿಮ ತೀರ್ಪು; ಕರ್ನಾಟಕಕ್ಕೆ ಹೆಚ್ಚು, ತಮಿಳುನಾಡಿಗೆ ಕಡಿಮೆ ನೀರು; 15 ವರ್ಷ ಬದಲಾವಣೆ ಇಲ್ಲ!

ಬಹುಕಾಲದಿಂದ ಬಿಕ್ಕಟ್ಟಿನಲ್ಲಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಇಂದು ಸುಪ್ರೀಂ ಕೋರ್ಟ್ ನೀಡಿರು ತೀರ್ಪು ಕರ್ನಾಟಕಕ್ಕೆ ‘ಸಿಹಿ’ಯಾಗಿದ್ದರೆ, ತಮಿಳುನಾಡಿಗೆ ಕಹಿಯಾಗಿದೆ.

ತೀರ್ಪಿನ ಅನ್ವಯ ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.5 ಟಿಎಂಸಿ ಕಡಿತಗೊಳಿಸಿ, ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆಗೆ ಅವಕಾಶ ಮತ್ತು ಬೆಂಗಳೂರಿಗೆ ಹೆಚ್ಚುವರಿಯಾಗಿ 4.75ಟಿಎಂಸಿ ನೀರು ಕುಡಿಯುವುದಕ್ಕೆ ಬಳಸಬಹುದು ಎಂದು ಪೀಠವು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್, ಎ.ಎಂ. ಖನ್ವಿಲ್ಕರ್‌ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿದ್ದು, ‘ಕರ್ನಾಟಕಕ್ಕೆ ಒಟ್ಟು 284.75 ಟಿಎಂಸಿ ನೀರು ಹರಿಸಬೇಕು, ಮತ್ತು ಬೆಂಗಳೂರು ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರು ಬಳಸಿಕೊಳ್ಳಬಹುದಾಗಿದೆ. ತಮಿಳುನಾಡಿಗೆ ಪ್ರತಿ ವರ್ಷ ಹರಿಸುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆ ಮಾಡಿದ್ದು, ತಮಿಳುನಾಡಿಗೆ 177 ಟಿಎಂಸಿ ನೀರು ನಿಗದಿ ಪಡಿಸಿದೆ. ಈ ಮೂಲಕ ಕರ್ನಾಟಕ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ಬಳಸಿಕೊಳ್ಳಬಹುದಾಗಿದೆ’.

ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಈ ಅಂತಿಮ ತೀರ್ಪು ಬಂದಿದೆ.

ಇದೇ ಸಂದರ್ಭದಲ್ಲಿ ನದಿಗಳು ರಾಷ್ಟ್ರೀಯ ಸಂಪತ್ತು, ಯಾವುದೇ ಒಂದು ರಾಜ್ಯದ ಹಕ್ಕು ಅಲ್ಲ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

Check Also

ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಆದೇಶ ನೀಡುತ್ತಾ, ಅವರಿಂದ ಕೆಲಸ ಮಾಡಿಸುತ್ತಾ ಇನ್ನೇನು ಸಂಜೆಯಾಗುತ್ತಿದೆ ಎನ್ನುವಾಗ ತಮ್ಮ ತಮ್ಮ …

Leave a Reply

Your email address will not be published. Required fields are marked *

Powered by keepvid themefull earn money