Breaking News
Home / Breaking News / ಕಾವೇರಿ ಕಾನೂನು ಹೋರಾಟದಲ್ಲಿ ಸಚಿವ ಎಂ.ಬಿ ಪಾಟೀಲ್ ಬದ್ಧತೆಯನ್ನು ಹಾಡಿ ಹೊಗಳಿದ ತಮಿಳು ಪತ್ರಕರ್ತ!

ಕಾವೇರಿ ಕಾನೂನು ಹೋರಾಟದಲ್ಲಿ ಸಚಿವ ಎಂ.ಬಿ ಪಾಟೀಲ್ ಬದ್ಧತೆಯನ್ನು ಹಾಡಿ ಹೊಗಳಿದ ತಮಿಳು ಪತ್ರಕರ್ತ!

ಕಾವೇರಿ ಕಾನೂನು ಹೋರಾಟದಲ್ಲಿ ಕೊನೆಗೂ ಕರ್ನಾಟಕದ ಪರ ತೀರ್ಪು ಈ ಬಾರಿ ಹೊರಬಿದ್ದಿದೆ. ಇನ್ನು 15 ವರ್ಷಗಳ ಕಾಲ ಈ ತೀರ್ಪಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಆದರೆ ಈ ಎಲ್ಲಾ ಹೋರಾಟದಲ್ಲಿ ನಮ್ಮ ರಾಜಕಾರಣಿಗಳ ಪಾತ್ರವೇನು? ಅವರು ಬಾಯಲ್ಲಿ ಹೇಳುವಷ್ಟೇ ಗಂಭೀರವಾಗಿ ಇದಕ್ಕಾಗಿ ಹೋರಾಟ ನಡೆಸಿದ್ದಾರೆಯೇ? ಇಲ್ಲ ಎನ್ನುವ ಉತ್ತರ ಖಂಡಿತ ಅಲ್ವೇ?

ಆದ್ರೆ ನಮ್ಮ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರು ಕಾವೇರಿಯ ಕಾನೂನು ಹೋರಾಟ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದರೆ ತಮ್ಮ ವೈಯುಕ್ತಿಕ ಕೆಲಸವೇನೋ ಎಂಬಂತೆ ಅದೆಷ್ಟು ಕಾತರದಿಂದ, ಭಾವೋದ್ವೇಗದಿಂದ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಈಗ ಮೆಚ್ಚುಗೆ ಕೇಳಿ ಬರುತ್ತಿದೆ.

ಈ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನವರು ಅಥವಾ ಸರಕಾರ ಅಲ್ಲ, ತಮಿಳುನಾಡಿನ ಓರ್ವ ಪತ್ರಕರ್ತ. ಕೋರ್ಟ್ ಆವರಣದಲ್ಲಿ ವಕೀಲರುಗಳೊಂದಿಗೆ ಅವರು ನಡೆಸುತ್ತಿದ್ದ ಸಂವಾದ, ವಿಚಾರಣೆ ಸಂದರ್ಭದಲ್ಲಿ ಅವರ ಭಾವೋದ್ವೇಗ ಈ ಎಲ್ಲವನ್ನೂ ಹತ್ತಿರದಿಂದ ಕಣ್ಣಾರೆ ಕಂಡ ಈ ಜರ್ನಲಿಸ್ಟ್ ‘ಇದ್ದರೆ ಇಷ್ಟು ಬದ್ಧತೆಯುಳ್ಳ ರಾಜಕಾರಣಿ ಇರಬೇಕು’ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದು ಅಭಿಮಾನ ವ್ಯಕ್ತಪಡಿಸಿದ್ದಾರೆ.

‘ತಮಗೆ ಸಿಕ್ಕ ಹುದ್ದೆಯನ್ನು ಇಷ್ಟು ಗಂಭೀರವಾಗಿ ತೆಗೆದುಕೊಂಡು, ಅದಕ್ಕೆ ನ್ಯಾಯ ಒದಗಿಸಬೇಕು ಎನ್ನುವ ಬದ್ಧತೆಯುಳ್ಳ ರಾಜಕಾರಣಿಯೊಬ್ಬರು ಸುದೀರ್ಘ ಕಾಲದ ನಂತರ ನೋಡಲು ಸಿಕ್ಕಿದರು. ಕರ್ನಾಟಕದ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಕಾವೇರಿಯ ಪ್ರತಿ ವಿಚಾರಣೆಯಲ್ಲೂ ಆಸ್ಥೆಯಿಂದ ಭಾಗವಹಿಸುತ್ತಿದ್ದರು.

ಯಾವುದೇ ಹಮ್ಮು ಬಿಮ್ಮಿಲ್ಲದೆ, ಕೋರ್ಟ್ ನ ವಿಸಿಟರ್ಸ್ ಗ್ಯಾಲರಿಯಲ್ಲಿ ಪತ್ರಕರ್ತರೊಂದಿಗೆ ಕುಳಿತು, ಕಾತರದಿಂದ, ಆತಂಕದಿಂದ ಕಾಯುತ್ತಿದ್ದರು. ಅಷ್ಟೇ ಅಲ್ಲದೆ, ಪಕ್ಕದಲ್ಲಿರುವ ಪತ್ರಕರ್ತರಿಂದ ಪೆನ್ನು, ಪೇಪರ್ ಕೇಳಿ ಪಡೆದು ವಿಚಾರಣೆ ನಡೆಯುವಾಗ ಆಗುವ ಕೆಲವು ಮುಖ್ಯ ವಿವರಗಳನ್ನು ಬರೆದುಕೊಳ್ಳುತ್ತಿದ್ದರು. ಒಮ್ಮೆಯಂತೂ ವಿಚಾರಣೆ ನಡೆಯುತ್ತಿರುವಾಗ ಅದು ಕೋರ್ಟ್, ತಾನೊಬ್ಬ ಸಚಿವ ಎಂಬುದನ್ನೂ ಮರೆತು ಜೋರಾಗಿ ಕಿರುಚಿದ್ದರು.

ಅವರು ಸಚಿವರಾಗಿದ್ದು, ಪ್ರತಿ ವಿಚಾರಣೆಯಲ್ಲೂ ಪಾಲ್ಗೊಳ್ಳುವ ಅವಶ್ಯಕತೆಯಿರಲಿಲ್ಲ. ಆದರೆ ಅವರು ಬರುತ್ತಿದ್ದರು. ತಮ್ಮದೇ ವೈಯುಕ್ತಿಕ ವಿಚಾರಣೆ ನಡೆಯುತ್ತಿದೆಯೇನೋ ಎಂಬಂತೆ ಪ್ರತಿಕ್ಷಣ ಒದ್ದಾಡುತ್ತಿದ್ದರು. ತಮ್ಮ ರಾಜ್ಯದ ಕುರಿತು ಅವರು ತೋರಿದ ಬದ್ಧತೆಗೆ ನನ್ನದೊಂದು ಸಲಾಂ’ ಎಂದು ಬರೆದುಕೊಂಡಿದ್ದಾರೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money