Breaking News
Home / Breaking News / ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಸಿಡಿದೆದ್ದ ರವಿ ಬೆಳೆಗೆರೆ; ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ!

ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಸಿಡಿದೆದ್ದ ರವಿ ಬೆಳೆಗೆರೆ; ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ!

ಪಬ್ಲಿಕ್ ಟಿವಿಯಲ್ಲಿ ಅಪ್ರಾಪ್ತ ಬಾಲಕನ ಚಿತ್ರ ಪ್ರಸಾರ ಮಾಡಿದ ಸಂಬಂಧ ಅದರ ಮುಖ್ಯಸ್ಥ ಎಚ್ ಆರ್ ರಂಗನಾಥ್ ವಿರುದ್ಧ ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ‘ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆ ಹೇಳಿದ್ದಾರೆ.

‘ಸುಪಾರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆ ನಾಟಕ ತೋರಿಸಲು ಇದ್ದ ಬದ್ದ ಚಾನಲ್ ಗಳೆಲ್ಲಾ ಸುದ್ದಿ ಮೇಲೆ ಸುದ್ದಿ ಮಾಡಿದವು. ನನ್ನ 30 ವರ್ಷದ ಗೆಳೆಯನಾಗಿರುವ ರಂಗ ಕೂಡ ಟಿಆರ್ ಪಿ ದೋಚಲು ಆತನ ಪಬ್ಲಿಕ್ ಟಿವಿಯಲ್ಲಿ ನನ್ನ ಮನೆ, ಹೆಂಡತಿ ಸಮೇತ ಪ್ರಸಾರ ಮಾಡಿದ. ಅದಕ್ಕೇನೂ ನನ್ನ ಆಕ್ಷೇಪವಿಲ್ಲ. ಆದರೆ ಅವನು ಏನೂ ಅರಿಯದ 10 ವರ್ಷದ ಅಪ್ರಾಪ್ತನಾದ ನನ್ನ ಮಗನ ಚಿತ್ರವನ್ನೂ ಪ್ರಸಾರ ಮಾಡಿದ’ ಎಂದು ಅವರು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಆರೋಪಿಸಿದ್ದಾರೆ.

‘ಅಪ್ರಾಪ್ತ ಮಗುವಿನ ಚಿತ್ರ ತೋರಿಸುವುದು ಕಾನೂನು ಪ್ರಕಾರ ಅಪರಾಧ. ಇದಕ್ಕೆ ಕೋರ್ಟ್ ಕಠಿಣ ಶಿಕ್ಷೆ ನೀಡುತ್ತದೆ. ಹಾಗಿದ್ದ ಮೇಲೆ ನಾನ್ಯಾಕೆ ಸುಮ್ಮನಿರಲಿ? ದೊಡ್ಡ ಮೊತ್ತಕ್ಕೆ ಕೇಸ್ ಹಾಕುತ್ತೇನೆ’ ಎಂದವರು ಬರೆದುಕೊಂಡಿದ್ದಾರೆ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money