Breaking News
Home / Breaking News / ಫುಟ್ ಪಾತ್ ಮೇಲೆ ಹಾಡುಹಹಗಲೇ ರೇಪ್: ಕಣ್ಣಿದ್ದು ಕುರುಡಾದರು ಜನ!

ಫುಟ್ ಪಾತ್ ಮೇಲೆ ಹಾಡುಹಹಗಲೇ ರೇಪ್: ಕಣ್ಣಿದ್ದು ಕುರುಡಾದರು ಜನ!

ನಾಗರೀಕ ಸಮಾಜ ತಲೆ ತಗ್ಗಿಸುವಂತಹ ದಾರುಣ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ನಗರದ ಪ್ರಮುಖ, ಜನದಟ್ಟಣೆಯ ರಸ್ತೆಯ ಪಕ್ಕದಲ್ಲೇ ಮಹಿಳೆಯೊಬ್ಬಳ ಮೇಲೆ ಹಾಡುಹಗಲೇ ಅತ್ಯಾಚಾರ ನಡೆದರೂ ಜನ ಕಣ್ಣಿದು ಕುರುಡರಂತೆ ವರ್ತಿಸಿದ್ದಾರೆ.

ಮಹಿಳೆಯ ಮೇಲೆ ಫುಟ್ ಪಾತ್ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿದ್ದಾನೆ. ಆದರೆ ನಾಗರೀಕರು, ಸಭ್ಯರು ಎಂದುಕೊಂಡ ಜನ ತಮ್ಮ ಕಣ್ಣೆದುರೆ ದುರ್ಘಟನೆ ನಡೆಯುತ್ತಿದ್ದರೂ ತಮಗೆ ಸಂಬಂಧವೇ ಇಲ್ಲದಂತೆ ಸುಮ್ಮನಾಗಿದ್ದಾರೆ. ಆಟೋ ಚಾಲಕನೊಬ್ಬ ಈ ಘಟನೆಯನ್ನು ವೀಡಿಯೊ ಮಾಡಿ ಪೊಲೀಸರಿಗೆ ಹಸ್ತಾಂತರಿಸಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ.

21 ವರ್ಷದ ಗಂಜಿ ಸಿಲ್ವಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಈತ ಪೊಲೀಸರ ಅತಿಥಿಯಾಗಿದ್ದಾನೆ. ತಪ್ಪು ಮಾಡಿದವನು ಸಿಕ್ಕಿಬಿದ್ದನೇನೋ ಸರಿ. ಆದರೆ ನಾಗರೀಕರು ಅಂದುಕೊಂಡ ಜನರ ವರ್ತನೆ ಆಘಾತಕಾರಿಯಾಗಿದ್ದು, ಜನರ ವರ್ತನೆ ತಲೆತಗ್ಗಿಸುವಂತಾಗಿದೆ. ಕಣ್ಣೇದುರೆ ನಡೆಯುತ್ತಿದ್ದರೂ ಕನಿಷ್ಠ ಆ ಮಹಿಳೆಯನ್ನು ರಕ್ಷಿಸುವ ಪ್ರಯತ್ನವನ್ನೂ ಮಾಡಿಲ್ಲ. ಇದೀಗ ಫುಟ್ ಪಾತ್ ಮೇಲೆ ಮಹಿಳೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದರೂ ಯುವಕರು ಸಮೀಪದಲ್ಲೇ ಹಾದು ಹೋಗುತ್ತಿರುವ ವೀಡಿಯೊ ದೃಶ್ಯಗಳು ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ವಿಶಾಖಪಟ್ಟಣದ ಅತ್ಯಂತ ಜನದಟ್ಟಣೆಯಿಂದ ಕೂಡಿರುವ ರೈಲ್ವೆ ಕಾಲೋನಿಯ ಫುಟ್ ಪಾತ್ ಮೇಲೆ ಮರದ ಪಕ್ಕದಲ್ಲೇ ಮಹಿಳೆ ಮೇಲೆ ಯುವಕ ಅತ್ಯಾಚಾರ ನಡೆಸಿದ್ದಾನೆ.

ಘಟನೆಯ ವೀಡಿಯೊ ಮಾಡಿದ ಆಟೋ ಚಾಲಕ ತಡೆಯುವ ಪ್ರಯತ್ನ ಮಾಡಿದ್ದಾನೆ. ನಂತರ ಪೊಲೀಸರಿಗೆ ವೀಡಿಯೊ ದೃಶ್ಯಗಳನ್ನು ತೋರಿಸಿದ ನಂತರ ಪೊಲೀಸರು ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Check Also

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ …

Leave a Reply

Your email address will not be published. Required fields are marked *

Powered by keepvid themefull earn money