Breaking News
Home / Breaking News / ಅರಬ್ಬಿ ಸಮುದ್ರದಲ್ಲಿ ವಾಕ್ ಮಾಡಬೇಕೇ? ಹಾಗಾದರೆ ಉಡುಪಿಗೆ ಬನ್ನಿ!

ಅರಬ್ಬಿ ಸಮುದ್ರದಲ್ಲಿ ವಾಕ್ ಮಾಡಬೇಕೇ? ಹಾಗಾದರೆ ಉಡುಪಿಗೆ ಬನ್ನಿ!

ಉಡುಪಿಯಲ್ಲಿ ಪ್ರವಾದ್ಯೋಮಕ್ಕೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೊಸ ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಉತ್ಸಾಹ ತೋರುತ್ತಿದ್ದಾರೆ.

ಇನ್ನು ಉಡುಪಿ ನೋಡಲು ಬರುವವರಿಗೆ ಅರಬ್ಬಿ ಸಮುದ್ರದಲ್ಲಿ ವಾಕ್ ಮಾಡುವ ಅವಕಾಶ ಲಭ್ಯವಾಗಲಿದೆ. ಸೆಲ್ಫಿ ತೆಗೆಯುವವರಿಗೆ ಇದೊಂದು ಸುವರ್ಣವಕಾಶ. ಸುತ್ತಲೂ ಸಮುದ್ರ ತೋರುವಂತೆ ತಾವು ಸಮುದ್ರದ ಮಧ್ಯದಲ್ಲಿರುವಂತೆ ಫೋಟೋ ತೆಗೆಸಿಕೊಳ್ಳಬಹುದು. ಸಮುದ್ರದ ಅಲೆಗಳು ಮೇಲೇಳುವುದನ್ನು ನೋಡುತ್ತಾ ಅದರ ರಭಸಕ್ಕೆ ಬರುವ ಗಾಳಿಗೆ ಮೈಯೊಡ್ಡುತ್ತಾ ತಣ್ಣಗೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದು.

ಉಡುಪಿಯಲ್ಲಿರುವ ಮಲ್ಪೆ ಬೀಚ್ ಭಾರತದಲ್ಲೇ ಅತ್ಯಂತ ಫೇಮಸ್ ಮತ್ತು ಸುರಕ್ಷಿತ ಎನ್ನಲಾಗಿದೆ. ಈಗ ಬೀಚ್ ಪ್ರೀಯರಿಗೆ ಸಮುದ್ರದ ಮೇಲೆ ವಾಕ್ ಮಾಡಿ ಸಮುದ್ರದ ಮಧ್ಯದಲ್ಲಿ ಸ್ವಲ್ಪ ಹೊತ್ತು ಎಂಜಾಯ್ ಮಾಡುವ ಅವಕಾಶ ಒದಗಿಸಲು ಸಿದ್ಧವಾಗಿದೆ ‘ಸೀ ವಾಕ್’! ಇದರಲ್ಲಿ ಸುಮಾರು ಮುಕ್ಕಾಲು ಕಿಮೀ ನಡೆದು ಹೋಗಿ ಸಮುದ್ರದ ಸೌಂದರ್ಯವನ್ನು ಅನುಭವಿಸಬಹುದು. ಮಲ್ಪೆ ಬಂದರಿನಲ್ಲಿ ಇದಕ್ಕಾಗಿಯೇ ಸೀ ವಾಕ್ ಟ್ರ್ಯಾಕ್ ನಿರ್ಮಿಸಲಾಗಿದೆ.

ಈ ಹಿಂದೆ ಮೀನುಗಾರಿಕಾ ಬೋಟ್ ಗಳು ಓಡಾಡಲು ಅನುಕೂಲವಾಗುವಂತೆ ಅಲೆಗಳನ್ನು ತಡೆಯಲು ಉದ್ದನೆ ಕಲ್ಲುಗಳನ್ನು ಹಾಕಲಾಗಿತ್ತು. ಈಗ ಅದನ್ನೇ ಸುಮಾರು 53 ಲಕ್ಷ ವೆಚ್ಚ ಮಾಡಿ ವಾಕಿಂಗ್ ಟ್ರ್ಯಾಕ್, ತಡೆಗೋಡೆ, ದೀಪಸ್ತಂಭ ಮತ್ತು ರಸ್ತೆ ನಿರ್ಮಾಣ ಮಾಡಲಾಗಿದೆ. ಇದು ರಾಜ್ಯದಲ್ಲೇ ಮೊಟ್ಟಮೊದಲ ‘ಸೀ ವಾಕ್’. ಇದಕ್ಕೆ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದ್ದಾರೆ.

ಹಾಗಾದ್ರೆ ಸಮುದ್ರದ ಮಧ್ಯೆ ವಾಕ್ ಮಾಡಿ ಅಲೆಗಳ ಮಧ್ಯದಲ್ಲಿ ಮೇಲೆಳುವ ಮೀನುಗಳನ್ನು ನೋಡಬೇಕೆಂದರೆ ಉಡುಪಿಗೆ ಬಂದು ಮಲ್ಪೆಗೆ ಬನ್ನಿ.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money