Breaking News
Home / ಪ್ರವಾಸ / ‘ಅಸಾಧ್ಯ ಇಂಡಿಯಾ’ಗೆ ಪ್ರಧಾನಿ ಮೋದಿಯೇ ಪ್ರಚಾರ ರಾಯಭಾರಿ!

‘ಅಸಾಧ್ಯ ಇಂಡಿಯಾ’ಗೆ ಪ್ರಧಾನಿ ಮೋದಿಯೇ ಪ್ರಚಾರ ರಾಯಭಾರಿ!

ನವದೆಹಲಿ: ಮೇಕ್ ಇನ್ ಇಂಡಿಯಾ.. ಡಿಜಿಟಲ್ ಇಂಡಿಯಾ ಮುಂತಾದ ಇಂಡಿಯಾಗಳ ಘೋಷಣೆ ಮೂಲಕ ಜಾಗ ತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿ ಇದೀಗ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿದೇಶೀ ಪ್ರವಾಸಿಗರನ್ನು ಆಕರ್ಷಿಸಲು ಈ ಬಾರಿ ‘ಇನ್‌ಕ್ರೆಡಿಬಲ್ ಇಂಡಿಯಾ’ (ಅಸಾಧ್ಯ ಇಂಡಿಯಾ) ಎಂಬ ಘೋಷಣೆ ಮಾಡಲಿದ್ದಾರೆ.
ನವೆಂಬರ್ ಅಂತ್ಯದಲ್ಲಿ ಈ ಜಾಹೀರಾತು ಅಂತಿಮಗೊಳ್ಳಲಿದ್ದು, ಸುಮಾರು ೪೦ರಿಂದ ೪೫ ದಿನ ನಡೆಯುವ ಈ ಪ್ರಚಾರದ ವೇಳೆ ಅಮಿತಾಭ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಕೈ ಜೋಡಿಸುವ ಕುರಿತು ಮಾತುಕತೆ ನಡೆದಿದ್ದರೂ ಯಾವುದೇ ಬಾಲಿವುಡ್ ನಟ-ನಟಿಯರನ್ನು ರಾಯಭಾರಿಯಾಗಿ ಬಳಸಿಕೊಳ್ಳದೇ ಇರಲು ನಿರ್ಧರಿಸಲಾಗಿದ್ದು, ಸ್ವತಃ ಮೋದಿಯವರೇ ಪ್ರಚಾರದ ಮುಂಚೂಣಿ ವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಸುಮಾರು ಎರಡೂವರೆ ವರ್ಷಗಳಿಂದ ಮೋದಿ, ವಿದೇಶಗಳಲ್ಲಿ ಪ್ರವಾಸೋದ್ಯಮ ಕುರಿತು ಮಾಡಿದ ಭಾಷಣ ಹಾಗೂ ಕಾರ್ಯಕ್ರಮಗಳನ್ನೇ ಪ್ರಚಾರದ ವೀಡೀಯೊದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೇಡಿಯೋಗಾಗಿ ಆಡೀಯೋ ಮತ್ತು ದೃಶ್ಯ ಮಾಧ್ಯಮಗಳಿಗಾಗಿ ವೀಡಿಯೋ ಮಾದರಿಯಲ್ಲಿ ಜಾಹೀರಾತುಗಳು ರೂಪಿಸ ಲಾಗುತ್ತಿದೆ. ಎರಡರಲ್ಲೂ ಸ್ವತಃ ಮೋದಿಯವರೇ ಧ್ವನಿ ನೀಡಲಿದ್ದು, ದೇಶದ ವೈಶಿಷ್ಟ್ಯಗಳ ಕುರಿತು ಮಾತನಾಡಲಿದ್ದಾರೆ.
ನವೆಂಬರ್ ನಂತರ ಪ್ರವಾಸೋದ್ಯಮ ಕ್ಷೇತ್ರ ಚುರುಕಾಗಲಿದೆ. ಕ್ರಿಸ್‌ಮಸ್ ಮತ್ತು ಹೊಸವರ್ಷದ ಆಚರಣೆ ವೇಳೆ ಬಹು ತೇಕ ಮಂದಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮಗೊಳ್ಳಲಿದ್ದು, ವೀಡಿಯೋ ತುಣುಕುಗಳ ಸಂಗ್ರಹ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಭಾರತದ ಬಗ್ಗೆ ಇದ್ದ ಭಾವನೆ ಬದಲಾಗಿದೆ. ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿರುವ ಮೋದಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದ್ದಾರೆ. ಅವರಿಗಿಂತ ಉತ್ತಮ ಪ್ರತಿನಿಧಿ ಇಲ್ಲ ಎಂಬುದು ನಮ್ಮ ಭಾವನೆ ಎಂದು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.

Check Also

ನಾಗಾರಾಧನೆಯ ಶ್ರೀಕ್ಷೇತ್ರ ‘ಕುಡುಪು ಅನಂತ ಪದ್ಮನಾಭ ದೇವಸ್ಥಾನ’; ಇಲ್ಲಿಗೆ ‘ಕುಡುಪು’ ಎಂಬ ಹೆಸರು ಯಾಕೆ ಬಂತು ಗೊತ್ತೇ?

ದಕ್ಷಿಣ ಕನ್ನಡ ಜಿಲ್ಲೆ ಹಲವು ದೇವಳಗಳ ಬೀಡು… ಇಲ್ಲಿ ದೈವಾರಾಧನೆ, ನಾಗಾರಾಧನೆಗೆ ವಿಶೇಷ ಸ್ಥಾನವಿದೆ. ನಾಗನನ್ನು ಕುಟುಂಬದ ಒಂದು ದೈವ …

Leave a Reply

Your email address will not be published. Required fields are marked *

Powered by keepvid themefull earn money