Breaking News
Home / ಪ್ರವಾಸ / ಪ್ರಧಾನಿ ಮೋದಿಗೆ ಗುರಾಯಿಸಿದ ಕಾಡಿನ ರಾಜ! ಸಂಚಲನ ಸೃಷ್ಟಿಸಿದ ಫೋಟೋಗಳು

ಪ್ರಧಾನಿ ಮೋದಿಗೆ ಗುರಾಯಿಸಿದ ಕಾಡಿನ ರಾಜ! ಸಂಚಲನ ಸೃಷ್ಟಿಸಿದ ಫೋಟೋಗಳು

ರಾಯ್‌ಪುರ: ಪ್ರಧಾನಿ ನರೇಂದ್ರ ಮೋದಿ ಅಪರೂಪಕ್ಕೆಂಬಂತೆ ತಮ್ಮ ಹವ್ಯಾಸವಾದ ಫೋಟೋ ತೆಗೆಯಲು ಛತ್ತೀಸ್‌ಗಢದ ನಂದನ್ ವನ್ ಜಂಗಲ್ ಸಫಾರಿಗೆ ತೆರಳಿದರು. ಆದರೆ ಅವರು ಫೋಟೋ ತೆಗೆಯಲು ಮುಂದಾದಾಗ ಕಾಡಿನ ರಾಜ ಕೆಲ ಸಮಯ ಗುರಾಯಿಸಿದ್ದೂ ಅಲ್ಲದೇ ಗುರ್ ಎಂದು ಘರ್ಜಿಸಿದ್ದಾನೆ.
ಮಂಗಳವಾರ ಬೆಳಗ್ಗೆ ಜಂಗಲ್ ಸಫಾರಿಗೆ ಭೇಟಿ ನೀಡಿದ್ದಾಗ ಮೋದಿ ಮತ್ತು ಹುಲಿ ನಡುವಿನ ಈ ಅಪರೂಪದ ದೃಶ್ಯ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದುಮಾಡತೊಡಗಿದೆ.
ಮುಖ್ಯಮಂತ್ರಿ ರಮನ್ ಸಿಂಗ್ ಆಯೋಜಿಸಿದ್ದ ಬಂಡವಾಳ ಹೂಡಿಕೆ ಮತ್ತು ವಿವಿಧ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ನರೇಂದ್ರ ಮೋದಿ, ಕೆಲ ಸಮಯ ಜಂಗಲ್ ಸಫಾರಿಗೆ ತೆರಳಲು ನಿರ್ಧರಿಸಿದರು.
ಮೋದಿ ಚಿತ್ರ ಎಲ್ಲಾ ಪ್ರಾಣಿಗಳ ಚಿತ್ರವನ್ನು ಸ್ವತಃ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲು ಮುಂದಾದರು. ಹುಲಿ ಇದ್ದ ಜಾಗದ ಬೇಲಿಗೆ ತೀರಾ ಸಮೀಪ ತೆರಳಿ ಫೋಟೋ ಕ್ಲಿಕ್ಕಿಸಲು ಮೋದಿ ಮುಂದಾದಾಗ ಕೆರಳಿದ ಹುಲಿ ಘರ್ಜಿಸತೊಡ ಗಿತು. ಅಲ್ಲದೇ ಮೋದಿ ಅವರ ಸಮೀಪ ಬಂದು ಅವರನ್ನು ಕೆಲಕಾಲ ಗುರಾಯಿಸಿತು. ಇದರಿಂದ ವಿಚಲಿತಗೊಳ್ಳದ ಮೋದಿ, ಹುಲಿಯನ್ನು ಸಮೀಪದಿಂದ ನೋಡಿ ಸಂತಸಪಟ್ಟರು.

Check Also

ಅರಬ್ಬಿ ಸಮುದ್ರದಲ್ಲಿ ವಾಕ್ ಮಾಡಬೇಕೇ? ಹಾಗಾದರೆ ಉಡುಪಿಗೆ ಬನ್ನಿ!

ಉಡುಪಿಯಲ್ಲಿ ಪ್ರವಾದ್ಯೋಮಕ್ಕೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೊಸ ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ಧಿ …

Leave a Reply

Your email address will not be published. Required fields are marked *

Powered by keepvid themefull earn money