Breaking News
Home / Breaking News / ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ 36 ಅಡಿ ಎತ್ತರ ಪ್ರತಿಮೆ ಅನಾವರಣ http://wp.me/p7yh1H-IK

ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ 36 ಅಡಿ ಎತ್ತರ ಪ್ರತಿಮೆ ಅನಾವರಣ http://wp.me/p7yh1H-IK

ಧಾರ್ಮಿಕ ಮತ್ತು ಸಮಾಜ ಸುಧಾರಕ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಮಂಡ್ಯ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಕೆರೆತೊಣ್ಣೂರಿನಲ್ಲಿ ಮಂಗಳವಾರ 36 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ಬೆಂಗಳೂರಿನ ಯದುಗಿರಿ ಯತಿರಾಜ ಮಠದಿಂದ ನಿರ್ಮಿಸಲಾದ ಪ್ರತಿಮೆಯನ್ನು ಮಠದ ಪೀಠಾಧಿಪತಿ ಯತಿರಾಜ ಜೀಯರ್ ಸ್ವಾಮೀಜಿ, ಸಂಸದ ಸಿ.ಎಸ್.ಪುಟ್ಟರಾಜು ಪುಷ್ಪಾರ್ಚನೆ ಮೂಲಕ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯತಿರಾಜ ಜೀಯರ್‌ ಸ್ವಾಮೀಜಿ, ರಾಮಾನುಜಾಚಾರ್ಯರು 950 ವರ್ಷಗಳ ಹಿಂದೆ ತೊಂಡನೂರು ಗ್ರಾಮಕ್ಕೆ (ಈಗ ತೊಣ್ಣೂರು) ಬಂದು 13 ವರ್ಷಗಳ ಕಾಲ ನೆಲೆಸಿದ್ದರು. ಸಾಮಾಜಿಕ, ಧಾರ್ಮಿಕ ಸುಧಾರಣೆಗಳನ್ನು ಮಾಡಿದರು ಎಂದು ಹೇಳಿದರು.

ಜಾತಿ ಪದ್ಧತಿ ಮತ್ತು ಅಸ್ಪ್ಯಶ್ಯತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಶ್ರಮಿಸಿದ್ದರು. ಕೆರೆ ಹಾಗೂ ದೇವಾಲಯಗಳನ್ನು ನಿರ್ಮಾಣ ಮಾಡಿದರು. ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿ ಜೀರ್ಣೋದ್ಧಾರಗೊಳಿಸಿದ್ದರು. ಅವರ ನೆನಪಿಗಾಗಿ ರಾಮಾನುಜಾಚಾರ್ಯರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ‘ರಾಮಾನುಜಾಚಾರ್ಯರು ಬಂದು ನೆಲೆಸಿದ ಮೇಲೆ ಕೆರೆತೊಣ್ಣೂರು ಐತಿಹಾಸಿಕ ಸ್ಥಳವಾಗಿ ಪರಿವರ್ತನೆಯಾಯಿತು. ಅದನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದರು.

ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ‘ಪ್ರತಿಮೆ ಪ್ರತಿಷ್ಠಾಪನೆಯಿಂದಾಗಿ ಇದು ಪ್ರವಾಸಿ ತಾಣವಾಗಲಿದೆ. ಗ್ರಾಮವನ್ನು ಆದರ್ಶ ಗ್ರಾಮದಡಿ ಆಯ್ಕೆ ಮಾಡಿಕೊಂಡಿದ್ದು, ಅಭಿವೃದ್ಧಿ ಮಾಡಲಾಗುವುದು’ ಎಂದು ತಿಳಿಸಿದರು.

ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ಜಿ.ಪಂ. ಸಿಇಒ ಶರತ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ತ್ಯಾಗರಾಜು, ಶಾಂತಲಾ ರಾಮಕೃಷ್ಣ ಇದ್ದರು.

 

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money