Breaking News
Home / Breaking News / ತನ್ನ 60 ಪತ್ನಿಯರನ್ನು ಕೊಂದು ನಿರ್ಮಿಸಿದ 60 ಸಮಾಧಿ; ಕರ್ನಾಟಕದಲ್ಲೇ ಇರುವ ಈ ಸ್ಥಳವನ್ನು ನೋಡಿದ್ದೀರಾ?

ತನ್ನ 60 ಪತ್ನಿಯರನ್ನು ಕೊಂದು ನಿರ್ಮಿಸಿದ 60 ಸಮಾಧಿ; ಕರ್ನಾಟಕದಲ್ಲೇ ಇರುವ ಈ ಸ್ಥಳವನ್ನು ನೋಡಿದ್ದೀರಾ?

ಕರ್ನಾಟಕದಲ್ಲಿ ನಾವು ನೋಡದೆ ಕೇಳದೆ ಹೆಚ್ಚು ಬೆಳಕಿಗೆ ಬರದೇ ಇರುವ ಹಲವಾರು ಐತಿಹಾಸಿಕ ಪ್ರವಾಸಿ ತಾಣಗಳಿವೆ. ಕೆಲವೊಂದು ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿ ಪಾಲು ಬಿದ್ದಿವೆ. ಅಂತಹ ಒಂದು ಸ್ಥಳವೇ ‘ಸಾಟ್ ಖಬರ್’.

ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಬಿಜಾಪುರ ಪ್ರಮುಖ ಸ್ಥಾನ ಪಡೆಯುತ್ತದೆ. ಇಲ್ಲಿನ ಕೋಟೆ, ಗೋಲ್ ಗುಂಬಜ್, ಇಬ್ರಾಹಿಂ ರೋಜಾ ಮಸ್ಜಿದ್, ಬಾರಾ ಕಮಾನ್ ಮುಂತಾದವುಗಳನ್ನು ನೀವು ನೋಡಿರಬಹುದು. ಅಲ್ಲೇ ಸ್ವಲ್ಪ ದೂರದಲ್ಲಿದೆ ಈ ಸಾಟ್ ಖಬರ್.

‘ಡಾರ್ಕ್‌ ಟೂರಿಸ್ಟ್ ಸ್ಪಾಟ್ ಆಫ್‌ ಬಿಜಾಪುರ್’ ಎಂದು ಕರೆಯಲ್ಪಡುವ ಈ ಸ್ಥಳದ ಹಿಂದೆ ಇದೆ ಒಂದು ಮನಕಲಕುವ ಕಥೆ. ಅದೇನೆಂದು ತಿಳಿದುಕೊಳ್ಳೋಣ ಬನ್ನಿ;

Image result for saat khabar

1659ರಲ್ಲಿ ಆದಿಲ್ ಶಾಹಿ ಕಾಲದಲ್ಲಿ ಆಲಿ ಆದಿಲ್ ಶಾಹ 2 ರ ಆಸ್ಥಾನದಲ್ಲಿದ್ದ ಸಾಮಂತ ಧಳಪತಿಗಳಲ್ಲೊಬ್ಬ ಅಫ್ಜಲ್‌ ಖಾನ್‌ ಎಂಬುವವನು ತನ್ನ ೬೦ ಪತ್ನಿಯರಿಗಾಗಿ ಕಟ್ಟಿದ ಸಮಾಧಿ ಸ್ಥಳವಿದು. ಆ ಕಾಲಘಟ್ಟದಲ್ಲಿ ಬಿಜಾಪುರ ಸಂಸ್ಥಾನ ಸಂಪೂರ್ಣವಾಗಿ ಆದಿಲ್ ಶಾಹಿ ರಾಜಮನೆತನದ ಆಳ್ವಿಕೆಯಲ್ಲಿತ್ತು.  ಆದ್ರೆ ಕಾಲಕ್ರಮೇಣ ಮೊಗಲರು ಮತ್ತು ಮರಾಠರ ಆಕ್ರಮಣದಿಂದ ಸಂಪೂರ್ಣ ಸೊರಗಿದ್ದ ಆದಿಲ್ ಶಾಹಿಗಳ ಮೇಲೆ ಶಿವಾಜಿ ಮಹಾರಾಜ್ ಕೂಡ ಯುದ್ಧ ಸಾರಿದ್ದನು.

ಮೊದಲೇ ಬಲಹೀನರಾಗಿದ್ದರಿಂದ ಶಾಹಿಗಳ ಧಳಪತಿ ಅಫ್ಜಲ್ ಖಾನ್ ಯುದ್ಧದ ಭವಿಷ್ಯ ತಿಳಿಯಲು ಜ್ಯೋತಿಷಿಗಳ ಮೊರೆ ಹೋಗಿದ್ದನು. ಜ್ಯೋತಿಷ್ಯಶಾಸ್ತ್ರದಲ್ಲಿ ವಿಪರೀತ ನಂಬಿಕೆಯಿದ್ದ ಖಾನ್ ಗೆ ಜ್ಯೋತಿಷಿ ಹೇಳಿದ ಭವಿಷ್ಯ ವಿಪರೀತ ರೋಷವನ್ನುಂಟು ಮಾಡುತ್ತದೆ. ತಾನು ಯುಧ್ಧದಲ್ಲಿ ಸೋಲಲಿದ್ದು, ಮರಣ ನಂತರ ತನ್ನ 60 ಪತ್ನಿಯರು ಪರಪುರುಷರ ವಶವಾಗಲಿದ್ದಾರೆ ಎಂಬ ಭವಿಷ್ಯನುಡಿಯನ್ನು ಸಹಿಸದಾದ ಖಾನ್ ತೀವ್ರ ಅಸೂಯೆಗೊಂಡು ತನ್ನ ಪತ್ನಿಯರನ್ನೆಲ್ಲಾ ನವರಸ ಪುರದಲ್ಲಿರುವ ಆಳವಾದ ಬಾವಿಗೆ ತಳ್ಳಿ ಸಾಯಿಸುತ್ತಾನೆ.

Image result for saat khabar

ಪಕ್ಕದಲ್ಲಿಯೇ ಅವರಿಗಾಗಿ 60 ಸಮಾಧಿಯನ್ನೂ ನಿರ್ಮಿಸುತ್ತಾನೆ ಅದನ್ನೇ ಈಗ ‘ಸಾಟ್ ಖಬರ್’ ಅಂದ್ರೆ 60 ಸಮಾಧಿ ಎನ್ನುತ್ತಾರೆ. ಆದರೆ ಇದರಲ್ಲಿ ಒಂದು ಸಮಾಧಿ ಮಾತ್ರ ಖಾಲಿಯಿದೆ ಎನ್ನಲಾಗುತ್ತಿದೆ, ಏಕೆಂದರೆ ಈ ೬೦ರಲ್ಲಿ ಒಬ್ಬ ಪತ್ನಿ ಸಾಯುವುದರಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿಹೋಗಿದ್ದಳು ಎಂದು ಪ್ರತೀತಿ ಇದೆ.

ಆದರೆ ಇಲ್ಲಿಗೆ ಹೋಗಲು ಸಾಮಾನ್ಯ ಜನ ಹಿಂಜರಿಯುತ್ತಾರೆ, ಇಲ್ಲಿ ರಾತ್ರಿಯೆಲ್ಲಾ ಚಿತ್ರ ವಿಚಿತ್ರ ಶಬ್ದಗಳು ಬರುತ್ತಿದ್ದು, ಪ್ರೇತಾತ್ಮಗಳ ಓಡಾಟವಿದೆ ಎನ್ನುತ್ತಾರೆ.

Related image

ಇನ್ನು ಇದನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಇಲ್ಲಿಗೆ ಹೋಗಲು ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ರಿಕ್ಷಾ ಮೂಲಕ ಹೋಗಬಹುದಾದರೂ, ಅವರು ಇಲ್ಲಿ ಬರಲು ಹಿಂಜರಿಯುತ್ತಾರೆ. ಹಾಗಾಗಿ ನಿಮಗೆ ಹೋಗಲೇಬೇಕೆಂದಾದರೆ, ಕಾಲ್ನಡಿಗೆಯಲ್ಲೇ ಹೋಗಬೇಕು.

Check Also

ತನ್ನದೇ ಆಟೋವನ್ನು ನದಿಗೆ ತಳ್ಳಿದ ಭೂಪ; ಕಾರಣವಾದರೂ ಏನು?

ಕೊಡಗಿನ ಕೊಪ್ಪ ಬಳಿ ಆಟೊ ಚಾಲಕನೊಬ್ಬ ತನ್ನದೇ ವಾಹನವನ್ನು ಸೇತುವೆ ಮೇಲಿಂದ ಕಾವೇರಿ ನದಿಗೆ ತಳ್ಳಿನಜಾಗ ಖಾಲಿ ಮಾಡಿದ್ದಾನೆ. ಈತನ …

Leave a Reply

Your email address will not be published. Required fields are marked *