Breaking News
Home / Breaking News / ಅತ್ಯಾಚಾರ ಖಂಡಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಟಿವಿ ನಿರೂಪಕಿ!

ಅತ್ಯಾಚಾರ ಖಂಡಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಟಿವಿ ನಿರೂಪಕಿ!

ಪಾಕಿಸ್ತಾನದ ಕಸೂರ್ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ಸಮಾಜವನ್ನೇ ಬೆಚ್ಚಿಬೀಳುಂತೆ ಮಾಡಿತ್ತು. ಇದನ್ನು ಖಂಡಿಸಿ ರಸ್ತೆಯಲ್ಲಿ ಪ್ರತಿಭಟನೆ, ಸಾಮಾಜಿಕ ತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದ್ದವು. ಆದರೆ ಟಿವಿ ವಾರ್ತಾ ವಾಚಕಿಯೊಬ್ಬರು ಮಾಡಿದ ಪ್ರತಿಭಟನೆ ಜನರ ಮನಸ್ಸನ್ನು ತಟ್ಟುವಂತಿತ್ತು.

ಪಾಕಿಸ್ತಾನದ ಸಮಾ ಟಿವಿಯಲ್ಲಿ ವಾರ್ತಾವಾಚಕಿಯಾಗಿರುವ ಕಿರಣ್ ನಾಝ್ ತಮ್ಮ ಪುಟ್ಟ ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡು ವಾರ್ತೆ ಓದಿದ್ದು ಎಲ್ಲರನ್ನೂ ಒಂದು ಕ್ಷಣ ಮೂಕವಿಸ್ಮಿತರನ್ನಾಗಿ ಮಾಡಿತು.

“ನಾನು ಇಂದು ನಿರೂಪಕಿಯಲ್ಲ. ಒಂದು ಹೆಣ್ಣು ಮಗುವಿನ ತಾಯಿ. ಹಾಗಾಗಿ ನಾನು  ನಿಮ್ಮ ಮುಂದೆ ನನ್ನ ಮಗಳೊಂದಿಗೆ ಬಂದಿದ್ದೇನೆ. ಮಾನವೀಯತೆಯ ಅಂತ್ಯಕ್ರಿಯೆಯ ದಿನವಿದು” ಎನ್ನುತ್ತಾ ಆಕೆ ಟಿವಿ ಕಾರ್ಯಕ್ರಮದಲ್ಲಿಯೇ ಕಣ್ಣೀರು ಹಾಕಿದ್ದಾರೆ. ಆ ಬಾಲಕಿಯ ಅತ್ಯಾಚಾ, ಕೊಲೆಯ ತನಿಖೆಯಲ್ಲಿ ವಿಳಂಬ ಮಾಡುತ್ತಿರುವ ಪೊಲೀಸರ ಬಗ್ಗೆ ಹಾಗೂ ರಾಜಕೀಯ ಒತ್ತಡದ ಬಗ್ಗೆ ಆಕ್ರೋಶಗೊಂಡ ಕಿರಣ್ ನಾಝ್ ‘ನನಗೆ ಎಂದು ಬೇರೆನೂ ಮಾತಾಡಲು ಇಲ್ಲ. ಕೇವಲ ಪುಟ್ಟ ಬಾಲೆ ಝೈನಾಬ್ ಬಗ್ಗೆ ಮಾತ್ರ ಮಾತಾಡಬಲ್ಲೆ’ ಎಂದಿದ್ದಾರೆ.

ಬಾಲಕಿ ಝೈನಾಬ್ ಅತ್ಯಾಚಾರ, ಕೊಲೆ ಖಂಡಿಸಿ ಪಾಕಿಸ್ತಾನದ ನಟ, ಕ್ರಿಕೆಟ್ ತಾರೆಯರೂ ಸೇರಿದಂತೆ ಹಲವರು ಸಾಮಾಜಿಕ ತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money