Breaking News
Home / Breaking News / ಅಬುಧಾಬಿ: ಮೊದಲ ಹಿಂದೂ ದೇವಸ್ಥಾನಕ್ಕೆ ಶಿಲಾನ್ಯಾಸ; ಈ ದೇಗುಲದ ವೈಶಿಷ್ಟ್ಯಗಳೇನು?

ಅಬುಧಾಬಿ: ಮೊದಲ ಹಿಂದೂ ದೇವಸ್ಥಾನಕ್ಕೆ ಶಿಲಾನ್ಯಾಸ; ಈ ದೇಗುಲದ ವೈಶಿಷ್ಟ್ಯಗಳೇನು?

ಪಶ್ಚಿಮ ಏಷ್ಯಾದ ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅರಬ್ ರಾಷ್ಟ್ರದ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ಮಾಡಿದರು.

ದುಬೈನ ಒಪೆರಾ ಹೌಸ್ ನಲ್ಲಿ ಸಭಾಭವನದಲ್ಲಿ ನಡೆದ ಭಾರತೀಯ ಸಮುದಾಯದೊಂದಿಗಿನ ಸಂವಾದದಲ್ಲಿ ಪ್ರಧಾನಿ ಅಬುಧಾಬಿ-ದುಬೈ ರಾಷ್ಟ್ರಿಯ ಹೆದ್ದಾರಿಯಲ್ಲಿ ನಿರ್ಮಾಣವಾಗಲಿರುವ ಭವ್ಯ ಸ್ವಾಮಿನಾರಾಯಣ ದೇವಾಲಯದ ಶಂಕುಸ್ಥಾಪನೆ ಮಾಡಿದರು. ಈ ದೇವಾಲಯ ನಿರ್ಮಾಣಕ್ಕೆ ಇಲ್ಲಿನ ಸರಕಾರ ಅನುಮತಿ ನೀಡಿರುವುದು ವಿಶೇಷವಾಗಿದೆ.

ದೇವಾಲಯದ ವಿಶೇಷತೆಗಳೇನು?

  • ಇದು ದುಬೈನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹಿಂದೂ ದೇವಾಲಯವಾಗಿದೆ.

  • ಇದು 14 ಎಕರೆ ಜಾಗದಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳಲಿರುವ ಈ ದೇವಸ್ಥಾನದ ನಿರ್ಮಾಣ ಕಾರ್ಯ 2020ರ ಹೊತ್ತಿಗೆ ಪೂರ್ಣಗೊಳ್ಳಲಿದೆ.
  • ದೇವಸ್ಥಾನದ ಆವರಣದಲ್ಲಿ ಪ್ರಾರ್ಥನಾ ಮಂದಿರ, ಅಧ್ಯಯನ ಕೊಠಡಿ, ಮಕ್ಕಳಿಗಾಗಿ ಕ್ರೀಡಾಂಗಣ, ಉದ್ಯಾನವನ, ನೀರಿನ ಕಾರಂಜಿ, ಆಹಾರ ಮಳಿಗೆ, ಪುಸ್ತಕ ಮತ್ತು ಉಡುಗೊರೆ ನೀಡಲು ಮಳಿಗೆಗಳು ತೆರೆಯಲಿವೆ.

  • ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್) ಆಡಳಿತದಲ್ಲಿ ದೇವಾಲಯ ನಿರ್ಮಾಣಗೊಳ್ಳಲಿದ್ದು, ಈ ಸಂಸ್ಥೆ ಈಗಾಗಲೇ ಆಸ್ಟ್ರೇಲಿಯ, ಆಫ್ರೀಕಾ, ಇಂಗ್ಲೆಂಡ್, ಅಮೇರಿಕಾ, ಕೆನಡಾ ಮುಂತಾದ ಕಡೆ ಹಿಂದೂ ದೇವಾಲಯಗಳನ್ನು ನಿರ್ಮಿಸಿದೆ.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money