Breaking News
Home / Breaking News / ಪಾಕ್ ಸೆನೆಟರ್ ಆಗಿ ಆಯ್ಕೆಯಾಗಲಿದ್ದಾರೆ ಪ್ರಥಮ ಹಿಂದೂ ಮಹಿಳೆ ಕೃಷ್ಣ ಕುಮಾರಿ!

ಪಾಕ್ ಸೆನೆಟರ್ ಆಗಿ ಆಯ್ಕೆಯಾಗಲಿದ್ದಾರೆ ಪ್ರಥಮ ಹಿಂದೂ ಮಹಿಳೆ ಕೃಷ್ಣ ಕುಮಾರಿ!

ಪಾಕ್ ಸೆನೆಟರ್ ಗೆ ಪ್ರಪ್ರಥಮ ಬಾರಿಗೆ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಲಿದ್ದು, ಈಗಾಗಲೇ ಅವರ ನಾಮಪತ್ರ ಅಂಗೀಕಾರಗೊಂಡಿದೆ ಎಂದು ವರದಿಯಾಗಿದೆ.

 

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೃಷ್ಣ ಕುಮಾರಿ ಕೊಹ್ಲಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ಮಹಿಳಾ ಸೆನೆಟರ್ ಆಯ್ಕೆಯಾಗಲಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹೇಳಿದೆ. ಅಲ್ಪಸಂಖ್ಯಾತ ಕೋಟಾದಡಿ ಸಿಂಧ್ ಪಾಂತ್ರದಿಂದ ಪಿಪಿಪಿ ಪಕ್ಷದಿಂದ ಸ್ಪರ್ಧಿಸಲು 39 ವರ್ಷದ ಕೃಷ್ಣ ಕುಮಾರಿ ಕೊಹ್ಲಿ ಸಲ್ಲಿಸಿರುವ ನಾಮಪತ್ರವನ್ನು ಅಂಗೀಕರಿಸಲಾಗಿದೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ ತಿಳಿಸಿದೆ.

‘ಕೊಹ್ಲಿ ಅವರು ಪಾಕಿಸ್ತಾನದ ಸೆನೆಟ್ ಪ್ರವೇಶಿಸಲಿರುವ ಪ್ರಥಮ ದಲಿತ ಮಹಿಳೆಯೂ ಆಗಲಿದ್ದಾರೆ’ ಎಂದು ಪಿಪಿಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕೊಹ್ಲಿ ಅವರು ಸಿಂಧ್ ಪ್ರಾಂತ್ಯದ ಹಿಂದುಳಿದ ಗ್ರಾಮ ನಗರ್ ಪಾರ್ಕರ್ ನವರಾಗಿದ್ದಾರೆ. ಇವರ ಕುಟುಂಬದ ಹಿರಿಯರಾದ ರೂಪ್ಲೋ ಕೊಹ್ಲಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು, 1858 ರಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದರು.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money