Breaking News
Home / Breaking News / ಹುಲಿ ಹಿಡಿಯಲು 45 ನಿಮಿಷ ಕಾರ್ಯಾಚರಣೆ ಮಾಡಿದ ಸಶಸ್ತ್ರ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದೇನು? ನಕ್ಕು ನಕ್ಕು ಸುಸ್ತಾಗುವಿರಿ!

ಹುಲಿ ಹಿಡಿಯಲು 45 ನಿಮಿಷ ಕಾರ್ಯಾಚರಣೆ ಮಾಡಿದ ಸಶಸ್ತ್ರ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದೇನು? ನಕ್ಕು ನಕ್ಕು ಸುಸ್ತಾಗುವಿರಿ!

ಒಬ್ಬ ವ್ಯಕ್ತಿ ಭಯಭೀತನಾಗಿ ಪೊಲೀಸ್ ಠಾಣೆಗೆ ಕರೆ ಮಾಡುತ್ತಾನೆ. ‘ನನ್ನ ತೋಟದಲ್ಲಿ ದೊಡ್ಡ ಹುಲಿಯೊಂದು ಬಂದಿದೆ. ಕೂಡಲೇ ಬನ್ನಿ’ ಎಂದು ಕರೆ ಬಂದ ಕೂಡಲೇ ಪೊಲೀಸರು ಸಶಸ್ತ್ರ ಪಡೆಯನ್ನೂ ಕರೆದುಕೊಂಡು ಅಲ್ಲಿ ಕಾರ್ಯಾಚರಣೆಗೆ ತೆರಳುತ್ತಾರೆ. ಆದರೆ ಅಲ್ಲಿ ಆದದ್ದೇನು ಗೊತ್ತೇ?

ಈ ಘಟನೆ ನಡೆದಿದ್ದು, ಸ್ಕಾಟ್ಲೆಂಡ್ ನಲ್ಲಿ. ಶನಿವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ವಿಪರೀತ ಭಯದಿಂದ ಮಾತಾಡಿ ‘ ತುಂಬಾ ಅಪಾಯಕಾರಿ ಕಾಡುಪ್ರಾಣಿಯೊಂದು ನನ್ನ ತೋಟ ಸೇರಿದೆ, ಅದೂ ದೊಡ್ಡ ಹುಲಿ. ಆದಷ್ಟು ಬೇಗ ಬಂದು ಅದನ್ನು ಓಡಿಸಿ’ ಎಂದು ಕೇಳಿಕೊಳ್ಳುತ್ತಾನೆ.

ಅಪಾಯದ ಸುಳಿವರಿತ ಪೊಲೀಸರು ಹಲವು ವಾಹನಗಳೊಂದಿಗೆ, ಸಶಸ್ತ್ರ ಪೊಲೀಸ್ ಪಡೆಯೊಂದಿಗೆ ಹಟ್ಟಾನ್ ನಲ್ಲಿರುವ  ಆ ತೋಟದ ಕಡೆ ದೌಡಾಯಿಸುತ್ತಾರೆ. ಅಲ್ಲದೆ, ಹತ್ತಿರದಲ್ಲೇ ಇರುವ ಪ್ರಾಣಿ ಸಂಗ್ರಹಾಲಯಕ್ಕೆ ಕರೆ ಮಾಡಿ ಅಲ್ಲಿಂದ ಯಾವುದಾದರೂ ಹುಲಿ ನಾಪತ್ತೆಯಾಗಿದೆಯೇ ಪರೀಕ್ಷಿಸಿ ಎಂದು ಸೂಚನೆ ನೀಡುತ್ತಾರೆ.

ನಿರಂತರವಾಗಿ 45 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕೊನೆಗೆ ಇದರ ಮರ್ಮ ಅರಿವಾಗುತ್ತದೆ. ಅದೇನೆಂದರೆ, ಅಲ್ಲಿರುವ ಹುಲಿ, ‘ಒಂದು ದೊಡ್ಡ ಹುಲಿಯ ಗೊಂಬೆ’ ಎಂದು. ಬೇಸ್ತು ಬಿದ್ದ ಪೊಲೀಸರು ತಮ್ಮ ಸಶಸ್ತ್ರ ಪಡೆಯೊಂದಿಗೆ ವಾಪಾಸ್ ಮರಳಿದರು.

ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ನಗೆಯ ಬುಗ್ಗೆಯೇ ಎದ್ದಿದೆ. ತಾವು ತಮಾಷೆಯ ವಸ್ತುವಾಗಿರುವುದನ್ನು ಮನಗಂಡ ಪೊಲೀಸರು ಕೂಡ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ ಕರೆ ಮಾಡಿದ ವ್ಯಕ್ತಿ ತುಂಬಾ ಭಯಗೊಂಡಿದ್ದ. ಯಾರು, ಎಲ್ಲಿಂದನೇ ಅಪಾಯವಿದೆ ಎಂದು ಹೇಳಿದರೆ ಅಲ್ಲಿಗೆ ತಕ್ಷಣ ತಲುಪಿ ಅವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿ. ಆ ಕರೆಯೂ ಸುಳ್ಳಲ್ಲ. ಆವ್ಯಕ್ತಿ ಅದು ನಿಜವಾದ ಹುಲಿ ಎಂದು ತಿಳಿದೇ ಕರೆ ಮಾಡಿದ್ದಾರೆ. ನಮ್ಮ ಕರ್ತವ್ಯ ನಾವು ನಿರ್ವಹಿಸಿದ್ದೇವೆ ಅಷ್ಟೇ’ ಎಂದಿದ್ದಾರೆ.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money