Breaking News
Home / Breaking News / [Video]ಹೀಗಿತ್ತು ದುಬೈನಲ್ಲಿ ದೀಪಾವಳಿ ಸಂಭ್ರಮ; ಮೊಳಗಿದ ‘ಜನಗಣಮನ’- ಬಾನಂಗಳದಲ್ಲಿ ಬಣ್ಣದ ಚಿತ್ತಾರಗಳು!

[Video]ಹೀಗಿತ್ತು ದುಬೈನಲ್ಲಿ ದೀಪಾವಳಿ ಸಂಭ್ರಮ; ಮೊಳಗಿದ ‘ಜನಗಣಮನ’- ಬಾನಂಗಳದಲ್ಲಿ ಬಣ್ಣದ ಚಿತ್ತಾರಗಳು!

ಅತೀ ಹೆಚ್ಚು ಭಾರತೀಯರು ನೆಲೆಸಿರುವ ದುಬೈನಲ್ಲಿ ಈ ಬಾರಿ ಬಹಳ ವಿಶೇಷವಾಗಿ ದೀಪಾವಳಿ ಆಚರಿಸಲಾಗಿದ್ದು, ಬೆಳಕಿನ ಹಬ್ಬದ ಸಂಭ್ರಮದ ಜೊತೆಗೆ ವಿದೇಶದಲ್ಲೂ ಭಾರತದ ರಾಷ್ಟ್ರಗೀತೆ ಮೊಳಗಿದೆ.

Image result for diwali in Dubai"

ದುಬೈ ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ದೂತಾವಾಸ ಕಚೇರಿಗಳು ಜಂಟಿಯಾಗಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಅಲ್ಲಿನ ಪೊಲೀಸ್ ಬ್ಯಾಂಡ್ ಜೊತೆ ನಮ್ಮ ರಾಷ್ಟ್ರಗೀತೆ ಮೊಳಗಿದ್ದು, ಭಾರತೀಯರಲ್ಲಿ ಭಾರೀ ಖುಷಿ, ಹೆಮ್ಮೆಗೆ ಕಾರಣವಾಗಿದೆ.

Image result for diwali in Dubai"

ಎಲ್ಲಾ ಮನೋರಂಜನಾ ಕಾರ್ಯಕ್ರಮಗಳು ಮುಗಿದು ಕಾರ್ಯಕ್ರಮ ಸಮಾರೋಪವಾಗುವ ಸಂದರ್ಭದಲ್ಲಿ ಆಕರ್ಷಕ ಲೇಸರ್ ಷೋ ಪ್ರಾರಂಭವಾಗುವ ಮೊದಲು ದುಬೈ ಪೊಲೀಸ್ ಬ್ಯಾಂಡ್ ‘ಜನಗಣಮನ’ ನುಡಿಸಿದ್ದು, ಅಲ್ಲಿದ್ದ ಭಾರತೀಯರ ಮನದಲ್ಲಿ ಸಂತಸದ ಅಲೆಯನ್ನು ಎಬ್ಬಿಸಿತು. ಜೊತೆಗೆ ತಾವೂ ಹಾಡಿ, ತಮ್ಮ ತಾಯ್ನಾಡಿಗೆ ಜೈಕಾರ ಕೂಗಿದರು.

Check Also

ಹುಲಿ ಹಿಡಿಯಲು 45 ನಿಮಿಷ ಕಾರ್ಯಾಚರಣೆ ಮಾಡಿದ ಸಶಸ್ತ್ರ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದೇನು? ನಕ್ಕು ನಕ್ಕು ಸುಸ್ತಾಗುವಿರಿ!

ಒಬ್ಬ ವ್ಯಕ್ತಿ ಭಯಭೀತನಾಗಿ ಪೊಲೀಸ್ ಠಾಣೆಗೆ ಕರೆ ಮಾಡುತ್ತಾನೆ. ‘ನನ್ನ ತೋಟದಲ್ಲಿ ದೊಡ್ಡ ಹುಲಿಯೊಂದು ಬಂದಿದೆ. ಕೂಡಲೇ ಬನ್ನಿ’ ಎಂದು …

Leave a Reply

Your email address will not be published. Required fields are marked *