Breaking News
Home / Breaking News / [Video]ತನ್ನ ಬಾಯಿಂದಲೇ ವೃದ್ಧನ ಮೂತ್ರ ಹೀರಿ ಜೀವ ಉಳಿಸಿದ ವೈದ್ಯ; ‘ನೀವೇ ರಿಯಲ್ ಹೀರೊ’ ಅಂತಿದ್ದಾರೆ ನೆಟ್ಟಿಗರು!

[Video]ತನ್ನ ಬಾಯಿಂದಲೇ ವೃದ್ಧನ ಮೂತ್ರ ಹೀರಿ ಜೀವ ಉಳಿಸಿದ ವೈದ್ಯ; ‘ನೀವೇ ರಿಯಲ್ ಹೀರೊ’ ಅಂತಿದ್ದಾರೆ ನೆಟ್ಟಿಗರು!

‘ವೈದ್ಯೋ ನಾರಾಯಣ ಹರಿ:’ ಅನ್ನೋ ಉಕ್ತಿ ಇದ್ದರೂ ಇತ್ತೀಚೆಗೆ ಹಲವು ಕಡೆ ಹಣದ ಹಿಂದೆ ಬೀಳುವ ಕೆಲವು ವೈದ್ಯರು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುವುದನ್ನು ಕೇಳಿರುತ್ತೇವೆ. ಈ ನಡುವೆ ಕೆಲವು ಉತ್ತಮ ವೈದ್ಯರನ್ನೂ ಕಂಡಿದ್ದೇವೆ. ಆದರೆ ಇಲ್ಲೊಬ್ಬ ವೈದ್ಯರು ತುರ್ತು ಪರಿಸ್ಥಿತಿಯಲ್ಲಿ ಮಾಡಿದ ಕಾರ್ಯಕ್ಕೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Image result for doctor saves life by sucking urine

ಹೌದು! ಚೀನಾದ ಗೌನ್ಗ್ಸೋವ್ ಮತ್ತು ನ್ಯೂಯಾರ್ಕ್ ನಡುವಿನ ಚೀನಾ ಸದರ್ನ್ ಏರ್‌ವೇಸ್ ನಲ್ಲಿ ಪ್ರಯಾಣಿಸುತ್ತಿದ್ದ ವೃಧ್ಧರೊಬ್ಬರು ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ತನಗೆ ಮೂತ್ರ ವಿಸರ್ಜನೆ ಮಾಡಲಾಗುತ್ತಿಲ್ಲ ಎಂದ ಅವರ ಕೈ ಕಾಲುಗಳು ಆದಾಗಲೇ ತಣ್ಣಗಾಗಿ ಅವರು ವಿಪರೀತ ಬೆವರುತ್ತಿದ್ದರು.

Doctor

ಆ ವಿಮಾನ ಗಮ್ಯ ತಲುಪಲು ಇನ್ನೂ ಆರು ಗಂಟೆಗಳು ಬೇಕಿತ್ತು. ಆಗ ವಿಮಾನದ ಸಿಬ್ಬಂದಿ ಅವರನ್ನು ಮಲಗಿಸಿ ಯಾರಾದರೂ ವೈದ್ಯರು ಇದ್ದರೆ ಹಿರಿ ಜೀವಕ್ಕೆ ತುರ್ತು ಚಿಕಿತ್ಸೆ ನೀಡಬಹುದೇ ಎಂದು ಕೇಳಿಕೊಂಡರು. ಆಗ ವಿಮಾನದಲ್ಲಿದ್ದ ಚೀನಾದ ನಾಳ ಶಸ್ತ್ರಚಿತ್ಸಕರೊಬ್ಬರು ಚಿಕಿತ್ಸೆ ನೀಡಲು ಮುಂದೆ ಬಂದರು.ಮಂಗಳೂರಿನಲ್ಲಿ ರೋಗಿಯ ಸಾವು: ವೈದ್ಯರ ಮೇಲೆ ಹಲ್ಲೆ ನಡೆಸಿ ಅಪಹರಿಸಲು ಯತ್ನ

Image result for doctor saves life by sucking urine

ಮೂತ್ರ ವಿಸರ್ಜಿಸಲು ಸಾಧ್ಯವಾಗದ ಕಾರಣ ಅವರ ಮೂತ್ರಕೋಶದಲ್ಲಿ ಸುಮಾರು ಒಂದು ಲೀಟರ್ ಮೂತ್ರ ತುಂಬಿಕೊಂಡಿದೆ, ಅವರು ಮೂತ್ರ ಖಾಲಿ ಮಾಡದೇ ಹೋದರೆ ಮೂತ್ರ ಕೋಶ, ನಾಳ ಒಡೆದು ಪ್ರಾಣವೇ ಹೋಗಬಹುದು ಎಂದು ವೈದ್ಯ ಡಾ ಜಾಂಗ್ ಅರಿವಿಗೆ ಬಂತು. ಆಗ ವಿಮಾನದಲ್ಲಿ ಲಭ್ಯವಿದ್ದ ವೈದ್ಯಕೀಯ ಪರಿಕರಗಳ ಮೂಲಕ, ಸಿರಿಂಜ್ ಉಪಯೋಗಿಸಿ ಮೂತ್ರ ಹೊರತೆಗೆಯಲು ಪ್ರಯತ್ನಿಸಿದರು.

Image result for doctor saves life by sucking urine

ಆದರೆ ಎಷ್ಟು ಪ್ರಯತ್ನಿಸಿದರೂ ಮೂತ್ರ ಅದರ ಮೂಲಕ ಹೊರಬಾರದಾಗ ಹಿಂದೆ ಮುಂದೆ ಯೋಚಿಸದ ವೈದ್ಯರು ಕೂಡಲೇ ಪೈಪ್ ನ್ನು ತನ್ನ ಬಾಯಿಗೆ ಹಾಕಿ ಅದರ ಮೂಲಕ ಮೂತ್ರವನ್ನು ಹೀರಿ ಹೊರಗೆ ಹಾಕಿದ್ದಾರೆ. ಸುಮಾರು 37 ನಿಮಿಷಗಳ ಕಾಲ ಅವರು ಬಾಯಿಂದಾನೇ 1ಲೀಗಳಷ್ಟು ಮೂತ್ರ ಹೊರತೆಗೆದು ಆ ವ್ಯಕ್ತಿಯ ಜೀವ ಉಳಿಸಿದ್ದಾರೆ.

ವಿಮಾನ ತನ್ನ ಗಮ್ಯ ತಲುಪಿದ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಹೆಚ್ಚು ಕಾಲಹರಣ ಮಾಡದೆ ಒಂದು ಜೀವ ಉಳಿಸಿದ ವೈದ್ಯರ ಬದ್ಧತೆಗೆ ಈಗ ಪ್ರಪಂಚಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Check Also

ಹಿಮಾಲಯದಲ್ಲಿ ಸಿಗೋ ಈ ಬೇರಿಗಾಗಿ ಕೊಲೆಗಳೇ ನಡೆಯುತ್ತವಂತೆ; ಅಂಥದ್ದೇನಿದೆ ಆ ಬೇರಲ್ಲಿ…

ಅದೊಂದು ಬೇರು ಹಿಮಾಲಯದ ತಪ್ಪಲು ಹೊರತುಪಡಿಸಿದರೆ ಜಗತ್ತಿನ ಬೇರೆಲ್ಲೂ ಸಿಗದು. ಇದಕ್ಕಾಗಿ ಹೋರಾಟ, ಕೊಲೆಗಳೇ ನಡೆಯುತ್ತವೆ. ಇಂದು ಈ ಬೇರಿಗೆ …

Leave a Reply

Your email address will not be published. Required fields are marked *