Breaking News
Home / Breaking News / ರಸ್ತೆಯಲ್ಲಿ ನೋಟಿನ ಕಂತೆಗಳ ಸುರಿಮಳೆ…ಸಿಕ್ಕಷ್ಟು ಬಾಚಿಕೊಂಡ ಜನ

ರಸ್ತೆಯಲ್ಲಿ ನೋಟಿನ ಕಂತೆಗಳ ಸುರಿಮಳೆ…ಸಿಕ್ಕಷ್ಟು ಬಾಚಿಕೊಂಡ ಜನ

ರಸ್ತೆಯ ತುಂಬ ನೋಟುಗಳ ಮಳೆಯೇ ಸುರಿದರೆ ಇನ್ನೇನಾಗುತ್ತದೆ. ಇಲ್ಲಿ ಟ್ರಕ್​ನಿಂದ ಬಿತ್ತು ಕಂತೆ ಕಂತೆ ಹಣ, ಜನ ಕೈಗೆ ಸಿಕ್ಕಷ್ಟು ಬಾಚಿಕೊಂಡು ಹೋದರು. ಈ ವೀಡಿಯೊ ವೈರಲ್ ಆಗಿದೆ. ರಸ್ತೆ ಬದಿ ತಮ್ಮ ವಾಹನಗಳನ್ನ ನಿಲ್ಲಿಸಿ ಸಿಕ್ಕಿದ್ದೇ ಚಾನ್ಸ್​ ಅಂತ ಕೈಗೆ ಸಿಕ್ಕಷ್ಟು ನೋಟುಗಳನ್ನ ಜನ ಬಾಚಿಕೊಳ್ತಿರಬೇಕಾದರೆ ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವ ವೇಳೆಗೆ ಹಲವರು ಹಣ ಬಾಚಿಕೊಂಡು ಪರಾರಿಯಾಗಿದ್ದಾರೆ.

ಇಂಥದ್ದೊಂದು ಘಟನೆ ನಡೆದಿದ್ದು ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಹೈವೇಯಲ್ಲಿ. ಟ್ರಕ್​​​ನಲ್ಲಿ ಹಣ ತೆಗೆದುಕೊಂಡು ಹೋಗುವಾಗ ಟ್ರಕ್​ ಬಾಗಿಲು ಓಪನ್​ ಆಗಿ ನೋಟುಗಳೆಲ್ಲಾ ರಸ್ತೆ ಮೇಲೆ ಬಿದ್ದಿದೆ. ಹಿಂದಿನಿಂದ ಬರುತ್ತಿದ್ದ ವಾಹನ ಸವಾರರೆಲ್ಲ ರಸ್ತೆ ಬದಿ ತಮ್ಮ ವಾಹನಗಳನ್ನ ನಿಲ್ಲಿಸಿ ಸಿಕ್ಕಿದ್ದೇ ಚಾನ್ಸ್​ ಅಂತ ಕೈಗೆ ಸಿಕ್ಕಷ್ಟು ನೋಟುಗಳನ್ನ ಬಾಚಿಕೊಂಡ್ರು. ಜನ ಹೀಗೆ ಹಣ ಆಯ್ದುಕೊಳ್ಳೋದನ್ನ ಕಂಡು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು.

ಸುಮಾರು 1,75,000 ಡಾಲರ್ಸ್​( ಅಂದಾಜು ₹1.19 ಕೋಟಿ) ಹಣ ಟ್ರಕ್​ನಿಂದ ಹೊರಗೆ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಬಹುತೇಕ ಹಣವನ್ನ ಜನ ಬಾಚಿಕೊಂಡು ಹೋಗಿದ್ದಾರೆ. ಅಳಿದುಳಿದ ಹಣವನ್ನ ಪೊಲೀಸರು ಹಾಗೂ ಟ್ರಕ್​ ಸಿಬ್ಬಂದಿ ತೆಗೆದುಕೊಂಡು ಬಂದಿದ್ದಾಗಿ ಪೊಲೀಸ್​ ಇಲಾಖೆ ತಿಳಿಸಿದೆ.

ಹಣ ತೆಗೆದುಕೊಂಡವರೆಲ್ಲ ವಾಪಸ್​ ತಂದುಕೊಡಿ, ಇಲ್ಲವಾದಲ್ಲಿ ಕಳವು ಪ್ರಕರಣ ದಾಖಲಿಸುವುದಾಗಿ ಫೇಸ್ ಬುಕ್ ಮೂಲಕ ಪೊಲೀಸರು ಎಚ್ಚರಿಕೆ ನೀಡಿದ್ದಾರಂತೆ.

Check Also

ಹಾಲು ಯಾಕೆ ಬಿಳಿ ಇರುತ್ತದೆ; ಎಂದಾದರೂ ಯೋಚಿಸಿದ್ದೀರಾ? ಕಾರಣ ಗೊತ್ತಾದರೆ ಆಶ್ಚರ್ಯ ಪಡುವಿರಿ!

ಭೂಮಂಡಲದಲ್ಲಿರುವ ಪ್ರತಿಯೊಂದು ಜೀವರಾಶಿಯು ಹಾಲು ಕುಡಿಯುವುದರಿಂದ ತನ್ನ ಜೀವನವನ್ನು ಪ್ರಾರಂಭ ಮಾಡುತ್ತದೆ. ಯಾಕೆಂದರೆ ಹುಟ್ಟಿದ ತಕ್ಷಣ ಪ್ರತಿಯೊಂದು ಜೀವಿಯ ಬೆಳವಣಿಗೆಗೆ …

Leave a Reply

Your email address will not be published. Required fields are marked *